/newsfirstlive-kannada/media/post_attachments/wp-content/uploads/2024/05/PAVITRA-JAYARAM-2.jpg)
ಒಂದೇ ವಾರ, ಒಂದೇ ಸೀರಿಯಲ್ನ ಇಬ್ಬರು ನಟ-ನಟಿಯರ ಸಾವು ಎಲ್ಲರನ್ನು ಬೆಚ್ಚಿಬೀಳಿಸಿದೆ. ತೆಲುಗು ಕಿರುತೆರೆಯಂತೂ ಈ ಸಾವನ್ನು ಅರಗಿಸಿಕೊಳ್ಳಲಾಗದೆ ಕಣ್ಣೀರು ಹಾಕುತ್ತಿದೆ. ನಟಿ ಪವಿತ್ರಾ ಜಯರಾಂ ಸಾವು, ನಟ ಚಂದು ಆತ್ಮಹತ್ಯೆ ಮಾಸದಂತಾಗಿದೆ. ಗೆಳತಿಯ ನೆನಪಲ್ಲೇ ಕೊರಗಿ ಚಂದು ಕೊನೆಯುಸಿರೆಳೆದಿದ್ದಾರೆ.
ಚಂದು ಮತ್ತು ಪವಿತ್ರಾ ಆರು ವರ್ಷಗಳಿಂದ ವಿವಾಹೇತರ ಸಂಬಂಧದಲ್ಲಿದ್ದರು. ಇವರಿಬ್ಬರು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸುವ ವೇಳೆ ಕಾರು ಅಪಘಾತವಾಗಿತ್ತು. ಈ ಅಪಘಾತದಲ್ಲಿ ಪವಿತ್ರಾ ಜಯರಾಂ ಸಾವನ್ನಪ್ಪಿದ್ದರು. ಚಂದುಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಆದರೆ ಕಣ್ಣೆದುರೇ ಕಂಡ ಗೆಳತಿಯ ಸಾವಿನಿಂದ ಚಂದು ಜರ್ಜರಿತರಾಗಿದ್ದರು. ಕೊನೆಗೆ ನಿನ್ನೆ ತಮ್ಮ ಮಣಿಕೊಂಡದಲ್ಲಿರುವ ಫ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪವಿತ್ರಾ ಅಂತ್ಯಕ್ರಿಯೆಗೆ ಮಂಡಕ್ಕೆ ಬಂದಿದ್ದ ಚಂದು
ನಟ ಚಂದ್ರಕಾಂತ್. ತ್ರಿನಯನಿ ಧಾರಾವಾಹಿ ಮೂಲಕ ತೆಲುಗು ರಾಜ್ಯದಲ್ಲಿ ಮನೆಮಾತಾದವರು. ಆದ್ರೆ ನಿನ್ನೆ ಹೈದರಾಬಾದ್ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊನ್ನೆಯಷ್ಟೇ ರಸ್ತೆ ಆಕ್ಸಿಡೆಂಟ್‌ನಲ್ಲಿ ತ್ರಿನಯನಿ ಸೀರಿಯಲ್ ನಟಿ ಪವಿತ್ರ ಜಯರಾಂ ಸಾವನ್ನಪ್ಪಿದ್ದರು. ನಟಿ ಪವಿತ್ರಾ ಮರಣದ ಸುದ್ದಿ ಬೆನ್ನಲ್ಲೇ ಅದೇ ಸೀರಿಯಲ್ ಸಹನಟ ಹಾಗೂ ಪ್ರಿಯಕರ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಮೇ 13ರಂದು ಮಂಡ್ಯದಲ್ಲಿ ನಡೆದ ಮೃತ ಪವಿತ್ರಾ ಜಯರಾಂ ಅಂತ್ಯಕ್ರಿಯೆಯಲ್ಲಿ ಚಂದು ಕೂಡ ಭಾಗಿಯಾಗಿದ್ದರು.
ಇದನ್ನೂ ಓದಿ: ನಟಿ ಪವಿತ್ರಾ ಸಾವನ್ನು ಕಣ್ಣಾರೆ ಕಂಡ ಚಂದು.. ಗೆಳತಿ ಸಾವು ಅರಗಿಸಿಕೊಳ್ಳಲಾಗದೆ ಕಿರುತೆರೆ ನಟ ಆತ್ಮಹತ್ಯೆ
ಹುಟ್ಟುಹಬ್ಬದಂದೇ ಚಂದು ಆತ್ಮಹತ್ಯೆ?
ಪವಿತ್ರಾ ಸಾವಿನ ಬಳಿಕ ಚಂದು ಆಕೆಯ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣಕ್ಕೆ ಮರಳುತ್ತೇನೆ ಎಂದು ಹೇಳಿದ್ದರಂತೆ. ಆದರೆ ನಿನ್ನೆ ಪವಿತ್ರ ಜಯರಾಂ ಹುಟ್ಟುಹಬ್ಬ ಎನ್ನಲಾಗುತ್ತಿದೆ. ಅದರಂತೆಯೇ ನಟ ತನ್ನ ಗೆಳತಿಯ ಹುಟ್ಟುಹಬ್ಬದ ಸ್ಟೇಟಸ್ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಇದನ್ನೂ ಓದಿ: ಮೊದಲೊಂದು ಮದುವೆ, 2 ಮಕ್ಕಳು.. ಆದ್ರೂ ಸೀರಿಯಲ್ ಗೆಳತಿ ನೆನಪಿನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡ್ರಾ?
ಒಟ್ಟಾರೆ, ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಕಲಾವಿದರನ್ನ ಕಳೆದುಕೊಂಡಿದ್ದಕ್ಕೆ ತೆಲುಗು ಕಿರುತೆರೆ ಇಂಡಸ್ಟ್ರಿ ತೀವ್ರ ದುಃಖದಲ್ಲಿದೆ. ಸದ್ಯ, ಚಂದು ಆತ್ಮಹತ್ಯೆಗೆ ಕಾರಣ ಏನು ಎಂಬುಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ