VIDEO: ಶೋಭಿತಾ ಡಿಪ್ರೆಶನ್‌ಗೆ ಹೋಗಿದ್ದಾಳೆ ಅಂದ್ರೆ ನಂಬೋಕೆ ಆಗಲ್ಲ.. ನಟ ಚಂದು ಗೌಡ ಬೇಸರ

author-image
admin
Updated On
VIDEO: ಶೋಭಿತಾ ಡಿಪ್ರೆಶನ್‌ಗೆ ಹೋಗಿದ್ದಾಳೆ ಅಂದ್ರೆ ನಂಬೋಕೆ ಆಗಲ್ಲ.. ನಟ ಚಂದು ಗೌಡ ಬೇಸರ
Advertisment
  • ಸ್ವಂತ ದುಡಿಮೆಯಲ್ಲಿ ಮನೆ ಕಟ್ಟಿಸಿದ್ದ ನಟಿ ಶೋಭಿತಾ ಶಿವಣ್ಣ
  • ಶೋಭಿತಾ ಜೊತೆ ಕೊನೆಯದಾಗಿ ಮಾತನಾಡಿದ್ದು ಏನಂದ್ರೆ..
  • ಯಾರ ಬಳಿಯೂ ಹೆಚ್ಚಾಗಿ ಏನನ್ನೂ ಹಂಚಿಕೊಳ್ಳುತ್ತಿರಲಿಲ್ಲ

ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನಲ್ಲಿ ಪ್ರತಿಭಾನ್ವಿತ ನಟಿ ದುರಂತ ಅಂತ್ಯ ಕಂಡಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶೋಭಿತಾ ಅವರಿಗೆ ಏನಾಯ್ತು? ಕಿರುತೆರೆ ನಟಿಗೆ ನಿಜಕ್ಕೂ ಆಗಿದ್ದೇನು ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.

ನಿನ್ನೆ ಶೋಭಿತಾ ಶಿವಣ್ಣ ಅವರ ಶಾಕಿಂಗ್ ಸುದ್ದಿ ಕೇಳಿದ ಕನ್ನಡ ಕಿರುತೆರೆಯ ನಟ, ನಟಿಯರು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಶೋಭಿತಾ ಅವರ ಜೊತೆ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಸಹನಟರು ಶೋಭಿತಾ ಅವರ ಒಳ್ಳೆ ಗುಣಗಳನ್ನ ಕೊಂಡಾಡಿದ್ದಾರೆ.

ಇದನ್ನೂ ಓದಿ: ನಿನ್ನೆ ಬೆಳಗ್ಗೆ ಆಗಿದ್ದೇನು..? ಶೋಭಿತಾ ಶಿವಣ್ಣ ಪ್ರಕರಣದ ಬಗ್ಗೆ ಶಾಕಿಂಗ್ ಮಾಹಿತಿ ಕೊಟ್ಟ ಸಂಬಂಧಿ 

ನ್ಯೂಸ್ ಫಸ್ಟ್‌ ಜೊತೆ ಮಾತನಾಡಿರುವ ನಟ ಚಂದು ಗೌಡ ಅವರು ಶೋಭಿತಾ ಅವರು ತುಂಬಾ ಸ್ವಾಭಿಮಾನದ ಹುಡುಗಿ. ಅವರು ಯಾರ ಮೇಲೂ ಡಿಪೆಂಡ್ ಆಗುತ್ತಿರಲಿಲ್ಲ. ಸ್ವಂತ ದುಡಿಮೆಯಲ್ಲಿ ಮನೆ ಕಟ್ಟಿಸಿದ್ದಳು. ಇಡೀ ಕುಟುಂಬಕ್ಕೆ ಅವಳೇ ಆಧಾರ. ಅಂತಹ ಹುಡುಗಿ ಡಿಪ್ರೆಶನ್‌ಗೆ ಹೋಗ್ತಾಳೆ ಅಂದ್ರೆ ನಂಬೋಕೆ ಆಗಲ್ಲ ಎಂದಿದ್ದಾರೆ.

ಶೋಭಿತಾ ಅವರ ಜೊತೆ ನಾನು ಕೊನೆಯದಾಗಿ ಜಾಕ್ ಪಾಟ್ ಸಿನಿಮಾ ಪ್ರಮೋಷನ್ ವಿಚಾರವಾಗಿ ಮಾತನಾಡಿದ್ದೆ. ಒಳ್ಳೆ ಪ್ರಮೋಷನ್ ಮಾಡೋಣ ಅಂದಿದ್ದಳು. ಯಾರ ಬಳಿಯೂ ಹೆಚ್ಚಾಗಿ ಏನನ್ನೂ ಹಂಚಿಕೊಳ್ಳುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟೇ ಮಾತಾಡುತ್ತಿದ್ದಳು. ತುಂಬಾ ಲವಲವಿಕೆ, ಜೋಶ್ ಆಗಿರ್ತಿದ್ದಳು. ನಾವು ತುಂಬಾ ಗೋಳಾಡಿಸಿದ್ದೇವೆ. ತುಂಬಾ ಒಳ್ಳೆ ಹುಡುಗಿ‌‌. ಈ ಥರಾ ಮಾಡ್ಕೊಂಡಿದ್ದಾಳೆ ಅಂದ್ರೆ ನಂಬೋಕೆ ಆಗುತ್ತಿಲ್ಲ ಎಂದು ಚಂದು ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಚಂದು ಗೌಡ ಮತ್ತು ಶೋಭಿತಾ ಬಹಳಷ್ಟು ವರ್ಷದ ಸ್ನೇಹಿತರು. ಶೋಭಿತಾ ಜೊತೆ ಚಂದು ಎರಡು ಸಿನಿಮಾದಲ್ಲಿ ನಟಿಸಿದ್ದಾರೆ. ಅಟೆಂಪ್ಟ್ ಮರ್ಡರ್ ಹಾಗೂ ಜಾಕ್ ಪಾಟ್ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಜಾಕ್‌ಪಾಟ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment