ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ.. ಚಂದು ಕೊನೆಯ ಮಾತುಗಳನ್ನ ನೆನಪಿಸಿಕೊಂಡ ನಟಿಯ ಸಂಬಂಧಿ.. ಏನಂದ್ರು?

author-image
AS Harshith
Updated On
ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ.. ಚಂದು ಕೊನೆಯ ಮಾತುಗಳನ್ನ ನೆನಪಿಸಿಕೊಂಡ ನಟಿಯ ಸಂಬಂಧಿ.. ಏನಂದ್ರು?
Advertisment
  • ಪವಿತ್ರಾಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ ಎಂದಿದ್ದ ಚಂದು
  • ಆಕೆಯನ್ನು ಬಿಟ್ಟಿರಲು ಆಗಲ್ಲ ಎಂದು ಹೇಳಿಕೊಂಡಿದ್ದ ನಟ
  • ಅಂತ್ಯಕ್ರಿಯೆ ವೇಳೆ ನೋವು ತೋಡಿಕೊಂಡಿದ್ದ ಕಿರುತೆರೆ ನಟ

ಮಂಡ್ಯ: ನಟ ಚಂದ್ರಕಾಂತ್​ರವರು ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ ಎಂದು ಹೇಳಿದ್ದರೆಂದು ನಟಿ ಪವಿತ್ರಾ ಜಯರಾಂ ಸಂಬಂಧಿ ಲೊಕೇಶ್ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಪವಿತ್ರಾ ಜಯರಾಂ ಸಂಬಂಧಿ ಲೊಕೇಶ್, ಚಂದ್ರಕಾಂತ್ ಅವರು ಇತ್ತೀಚೆಗೆ ಪರಿಚಯ. ಎರಡು ಮೂರು ಬಾರಿ ನಮ್ಮ ಮನೆಗೆ ಬಂದಿದ್ದರು. ಪವಿತ್ರಾ ಅಂತ್ಯಕ್ರಿಯೆ ವೇಳೆ ಬಂದಿದ್ದರು. ಪವಿತ್ರನಿಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ ಎಂದಿದ್ದರು. ಅವರನ್ನು ಬಿಟ್ಟಿರಲು ಆಗಲ್ಲ ಎಂದಿದ್ದರು ಎಂದು ಹೇಳಿದ್ದಾರೆ.

ಏನೋ ನೋವಿದ್ದರು ಇಲ್ಲಿಗೆ ಬನ್ನಿ ಎಂದಿದ್ದರು. ನನಗೆ ಅವರ ನಂಬರ್ ಕೂಡ ಕೊಟ್ಟಿದ್ದರು. ರಾತ್ರಿ 11.30 ಆತ್ಮಹತ್ಯೆ ವಿಚಾರ ತಿಳಿಯಿತು. ಅಂತ್ಯಕ್ರಿಯೆ ವೇಳೆಯೇ ನೋವು ತೋಡಿಕೊಂಡಿದ್ದರು. ಪವಿತ್ರಾ ಅವರ ಮಗ್ನದಲ್ಲೇ ಇದ್ದರು. ಏನು ಮಾಡಬೇಕು ಎಂದು ತೋಚುತ್ತಿಲ್ಲ ಎಂದಿದ್ದರು ಎಂದು ಲೊಕೇಶ್​ ಹೇಳಿದ್ದಾರೆ.

ಇದನ್ನೂ ಓದಿ: ಚಂದು ನನ್ನ ಗಂಡ ಕಣೇ ಎಂದಿದ್ದಳು ಪವಿತ್ರಾ! ನಟನ ಸಾವಿನ ಬಗ್ಗೆ ಪತ್ನಿ ಶಿಲ್ಪಾ ಏನಂದ್ರು?

ಪವಿತ್ರಾ ಸಾವಿನ ನೋವು

ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಹೀಗೆ ಕನ್ನಡದ ಸಾಲು ಸಾಲು ಧಾರವಾಹಿಗಳಲ್ಲಿ ನಟಿಸಿ ಜನರನ್ನು ರಂಜಿಸಿದ ಇವರು ಪವಿತ್ರಾ ಜಯರಾಮ್. ಆದ್ರೆ ಮೊನ್ನೆ ವಿಧಿಯಾಟಕ್ಕೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಇದು ತೆಲುಗಿನ ಕಿರುತೆರೆ ಇಂಡಸ್ಟ್ರಿಗೆ ಭಾರೀ ಶಾಕ್ ನೀಡಿತ್ತು. ಇವರ ಸಾವಿನ ಬೆನ್ನಲ್ಲೇ ತೆಲಗು ಕಿರುತೆರೆ ನಟ ಚಂದ್ರಕಾಂತ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಿಮ್ಮನ್ನು ಮರೆಯಲು ಸಾಧ್ಯವಿಲ್ಲ.. ಸಾವಿಗೂ ಮುನ್ನ ಪವಿತ್ರಾ ಬಗ್ಗೆ ನಟ ಚಂದು ಏನೆಂದು ಬರೆದುಕೊಂಡಿದ್ರು ಗೊತ್ತಾ?

ನಿವಾಸದಲ್ಲೇ ಆತ್ಮಹತ್ಯೆ

ಚಂದ್ರಕಾಂತ್​. ತ್ರಿನಯನಿ ಧಾರಾವಾಹಿ ಮೂಲಕ ತೆಲುಗು ರಾಜ್ಯದಲ್ಲಿ ಮನೆಮಾತಾದವರು. ಆದ್ರೆ ನಿನ್ನೆ ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 13ರಂದು ಮಂಡ್ಯದಲ್ಲಿ ನಡೆದ ಮೃತ ಪವಿತ್ರಾ ಜಯರಾಂ ಅಂತ್ಯಕ್ರಿಯೆಯಲ್ಲಿ ಚಂದು ಕೂಡ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment