/newsfirstlive-kannada/media/post_attachments/wp-content/uploads/2025/01/Charith-Balappa.jpg)
ಬೆಂಗಳೂರು: ಆ ನಟನ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿತ್ತು. ಪ್ರೀತಿ ಹೆಸ್ರಲ್ಲಿ ಕಿರುತೆರೆ ನಟಿ ಜೊತೆ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಲ್ಲದೇ, ಹಣಕ್ಕೆ ಬೇಡಿಕೆ ಇಟ್ಟಿರೋ ಆರೋಪ ಕೂಡ ಇತ್ತು. ಫೋಟೋ ಹರಿಬಿಡೋದಾಗಿ ಬ್ಲ್ಯಾಕ್ಮೇಲ್ ಮಾಡಿದ ಸುದ್ದಿ ಇತ್ತು. ಈ ಕೇಸಲ್ಲಿ ಆ ನಟ ಅರೆಸ್ಟೂ ಆಗಿದ್ರು. ಈಗ ಅದೇ ನಟ ನ್ಯೂಸ್ಫಸ್ಟ್ ಮೂಲಕ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದು ಮತ್ಯಾರು ಅಲ್ಲ ಫೇಮಸ್ ಸೀರಿಯಲ್ ಆ್ಯಕ್ಟರ್ ಚರಿತ್ ಬಾಳಪ್ಪ ಪೂಜಾರಿ.
ಕಳೆದ ವರ್ಷ ಡಿಸೆಂಬರ್ 27ರಂದು ಚರಿತ್ ಬಾಳಪ್ಪ ಅಲಿಯಾಸ್ ಧ್ರುವಂತ್ ಲೈಂಗಿಕ ದೌರ್ಜನ್ಯದ ಆರೋಪದ ಕೇಸ್ಗೆ ಸಂಬಂಧಪಟ್ಟಂತೆ ಅರೆಸ್ಟ್ ಆಗಿದ್ರು. ಸಂತ್ರಸ್ಥ ನಟಿ ಕೊಟ್ಟಿರೋ ದೂರಿನ್ವಯ ಆರ್‌ಆರ್ ನಗರ ಪೊಲೀಸರು ಅರೆಸ್ಟ್ ಮಾಡಿದ್ರು. ಆದ್ರೀಗ ಕೇಸ್ಗೆ ಟ್ವಿಸ್ಟ್ ಸಿಕ್ಕಿದ್ದು, ಮಾಧ್ಯಮದ ಮುಂದೆ ಬಂದಿರೋ ನಟ, ತನ್ನ ಮೇಲಿರೋ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.
ಇದು ದುಡ್ಡಿಗಾಗಿ ನಡೆದಿರೋ ಪ್ರೀಪ್ಲಾನ್ಡ್ ಸಂಚು. ನನ್ನ ಯಾವ ಪ್ರಾಜೆಕ್ಟ್ನಲ್ಲೂ ಈಕೆ ನನ್ನ ಜೊತೆ ಕೆಲಸ ಮಾಡಿಲ್ಲ. ನಾನೇ ಅವಳಿಗೆ ಪಾಪ ಎಂದು ದುಡ್ಡು ಕೊಟ್ಟಿದ್ದೆ. ಅದನ್ನ ಕೇಳಿದ್ದಕ್ಕೆ ಇಷ್ಟೆಲ್ಲಾ ಮಾಡಿದ್ದಾಳೆ ಅಂತ ಆರೋಪಿಸಿದ್ದಾರೆ.
ಏನಂದ್ರು ಚರಿತ್ ಬಾಳಪ್ಪ?
ನಾನು ಪಾಪ ಅಂತ 1 ಲಕ್ಷ ಹಾಕಿದ್ದೆ. ದುಡ್ಡು ಕೊಡು ಅಂದಾಗ ಕೊಡಲ್ಲ ಅಂದಿದ್ದಳು. ಆಕೆ ಸ್ನೇಹಿತ ನನ್ನ ತಂದೆ ಅವರಿಗೆ ಧಮ್ಕಿ ಹಾಕಿದ್ದ. ಆ ಬಗ್ಗೆ ನಾನು ತೆಲಂಗಾಣ ಠಾಣೆಯಲ್ಲಿ ಕೇಸ್ ದಾಖಲಿಸಿದ್ದೆ. ಇನ್ನು ಈ ಎಲ್ಲಾ ಪ್ರಕರಣದಲ್ಲಿ ನನ್ನ ಮಾಜಿ ಹೆಂಡತಿ ಕೈವಾಡ ಕೂಡ ಇದೆ. ಇವರೆ ಮೇಲೆ ನಾನು ಕಾನೂನಾತ್ಮಕವಾಗಿ ಹೋರಾಟ ಮಾಡ್ತಿನಿ ಎಂದಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾಗೆ ಬಿಗ್ ಶಾಕ್; ಸ್ಟಾರ್ ಪ್ಲೇಯರ್ ಅಜಿಂಕ್ಯ ರಹಾನೆಗೆ ಕ್ಯಾಪ್ಟನ್ಸಿ ಪಟ್ಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ