Advertisment

ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?

author-image
Bheemappa
Updated On
ಕಮಲ್ ಹಾಸನ್ ಸಹೋದರ, ನಟಿ ಸುಹಾಸಿನಿ ತಂದೆ ಆಸ್ಪತ್ರೆಗೆ ದಾಖಲು.. ಚಾರುಹಾಸನ್​ಗೆ ಏನಾಯಿತು..?
Advertisment
  • ಆದಷ್ಟು ಬೇಗ ಚಾರುಹಾಸನ್ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ
  • ಹರಾ ಎನ್ನುವ ಸಿನಿಮಾದಲ್ಲಿ ಕೊನೆಯದಾಗಿ ಅಭಿನಯ ಮಾಡಿದ್ದರು
  • ಕಮಲ್ ಹಾಸನ್ ಅವರ ಸಹೋದರನ ಆರೋಗ್ಯಕ್ಕೆ ಏನಾಯಿತು?

ಭಾರತೀಯ ಚಿತ್ರರಂಗದ ಹಿರಿಯ ನಟ ಹಾಗೂ ಕಮಲ್ ಹಾಸನ್ ಅವರ ಸಹೋದರ ಚಾರುಹಾಸನ್ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಹುಭಾಷಾ ನಟ, 93 ವರ್ಷದ ಚಾರುಹಾಸನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisment

ಇದನ್ನೂ ಓದಿ:₹1200 ಕೋಟಿ ವೆಚ್ಚದ ಸಂಸತ್ ಭವನ ಸೋರಿಕೆ.. ₹120 ಬಕೆಟ್​ ಮೇಲೆ ಅವಲಂಬಿತ ಆಯ್ತಾವೆಂದು ವ್ಯಂಗ್ಯ

ಚಾರುಹಾಸನ್ ಅವರು ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಅವರ ಮಗಳು ಹಾಗೂ ಬಹುಭಾಷಾ ನಟಿ ಸುಹಾಸಿನಿ ಮಣಿರತ್ನಂ ಅವರು ತಮ್ಮ ಇನ್​ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ನನ್ನ ತಂದೆಯವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರ, ನರ್ಸ್​ಗಳ ಕಾಳಜಿ ಹಾಗೂ ಅವರ ಪ್ರೀತಿಯಿಂದಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಸುಹಾಸಿನಿ ಅವರು ಇನ್​​ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: KL ರಾಹುಲ್​- ಪಂತ್​ ಮಧ್ಯೆ ವಿಕೆಟ್​ ಕೀಪರ್​ ಸ್ಥಾನಕ್ಕಾಗಿ ಬಿಗ್ ಫೈಟ್​.. ಯಾರಿಗೆ ಸಿಗುತ್ತೆ ಚಾನ್ಸ್​?

Advertisment

ಆದಷ್ಟು ಬೇಗ ಚಾರುಹಾಸನ್ ಅವರು ಚೇತರಿಕೆ ಕಂಡು ಆಸ್ಪತ್ರೆಯಿಂದ ಹೊರ ಬರಲಿ ಎಂದು ನಟಿಯರಾದ ರಾಧಿಕಾ ಶರತ್‌ಕುಮಾರ್, ಅದಿತಿ ರಾವ್ ಹೈದರಿ, ಖುಷ್ಬೂ ಸುಂದರ್ ಸೇರಿ ಇತರೆ ಸೆಲೆಬ್ರಿಟಿಗಳು ಪ್ರಾರ್ಥಿಸಿದ್ದಾರೆ. ಸದ್ಯ ಚಾರುಹಾಸನ್ ಆರೋಗ್ಯವಾಗಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಆಗೋ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇನ್ನು ಚಾರುಹಾಸನ್ ಅವರು ಇತ್ತೀಚೆಗೆ ರಿಲೀಸ್ ಆದ ನಟ ಮೋಹನ್ ಅವರ 'ಹರಾ' ಸಿನಿಮಾದಲ್ಲಿ ಕೊನೆಯದಾಗಿ ಅಭಿನಯ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment