ಕಾಸರಕೋಡುಗೆ ನಟ ಚೇತನ್ ದಿಢೀರ್​ ಭೇಟಿ, ತೀವ್ರ ಹೋರಾಟದ ಎಚ್ಚರಿಕೆ..! ಏನಾಯ್ತು..?

author-image
Veena Gangani
Updated On
ಕಾಸರಕೋಡುಗೆ ನಟ ಚೇತನ್ ದಿಢೀರ್​ ಭೇಟಿ, ತೀವ್ರ ಹೋರಾಟದ ಎಚ್ಚರಿಕೆ..! ಏನಾಯ್ತು..?
Advertisment
  • ಬಂದರು‌ ವಿರೋಧಿಸಿ ಹೋರಾಟ ಮಾಡುತ್ತಿರುವ ಮೀನುಗಾರರು
  • ಬಂದರು ಪ್ರದೇಶಕ್ಕೆ ಭೇಟಿ ನೀಡಿದ ಸ್ಯಾಂಡಲ್​ವುಡ್ ನಟ ಚೇತನ್
  • ಮೀನುಗಾರರ ಮೇಲಿನ ದಬ್ಬಾಳಿಕೆಗೆ ಖಂಡನೆ ವ್ಯಕ್ತಪಡಿಸಿದ ನಟ

ಕಾರವಾರ: ಕಾಸರಕೋಡು ಬಂದರು ವಿರೋಧಿ ಹೋರಾಟಕ್ಕೆ ನಟ ಚೇತನ್ ಬೆಂಬಲ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಬಂದರು ವಿರೋಧಿಸಿ ಮೀನುಗಾರರು ಹೋರಾಟ ಮಾಡುತ್ತಿದ್ದಾರೆ.

ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!

ಏನಿದು ಸ್ಟೋರಿ?

ಹೊನ್ನಾವರ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಬಂದರು ನಿರ್ಮಾಣ ಮಾಡಲಾಗುತ್ತಿದೆ. ಪೋರ್ಟ್ ನಿರ್ಮಾಣ ಮಾಡಿದ್ದೇ ಆದ್ರೆ ಅಲ್ಲಿರುವ ನಿವಾಸಿಗಳ ಜೀವನವೇ ನಾಶವಾಗಿ ಹೋಗುತ್ತೆ ಎಂದು ಬಂದರು ನಿರ್ಮಾಣಕ್ಕೆ‌ ವಿರೋಧಿಸಿ ಮೀನುಗಾರರು ಹೋರಾಟ ಮಾಡುತ್ತಿದ್ದಾರೆ. ಅಲ್ಲದೇ ಇದೇ ವಿಚಾರಕ್ಕೆ ಮೀನುಗಾರರ ಮೇಲೆ ನಡೆಯುತ್ತಿರೋ ದಬ್ಬಾಳಿಕೆಯನ್ನು ಖಂಡಿಸಿದ್ದಾರೆ ನಟ ಚೇತನ್.

publive-image

ಈ ಬಗ್ಗೆ ಮಾತಾಡಿದ ನಟ ಚೇತನ್, ಈ ಒಂದು ಸುಂದರ ಪ್ರದೇಶದಲ್ಲಿ ದೊಡ್ಡ ದುರಂತ ನಡೆಯುತ್ತಿದೆ. 2010ರಿಂದ ಈ ಭಾಗದಲ್ಲಿ ಒಂದು ಪೋರ್ಟ್ ಕಟ್ಟಬೇಕು ಅನ್ನೋ ಹುನ್ನಾರ ನಡೆಯುತ್ತಿದೆ. ಬಂದರು ಕಟ್ಟಿದರೆ, ಇಲ್ಲಿರುವ ಎಲ್ಲರಿಗೂ ತೊಂದರೆ ಆಗುತ್ತೆ. ಮೀನುಗಾರರ ಮೇಲೆ‌ ಪೊಲೀಸರು ಬಂಧಿಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಸರ್ಕಾರ ಹಿಂಬಾಗಿಲಿನಿಯಿಂದ ಬಂದರು‌ ನಿರ್ಮಾಣಕ್ಕೆ ಅನುಮತಿ ನೀಡಿದೆ. ಮೀನುಗಾರರ ವೃತ್ತಿ ಉಳಿಸಲು ಹೋರಾಟ ಅನಿವಾರ್ಯ. ಸಮಾನ‌ ಮನಸ್ಕರನ್ನು ಒಗ್ಗೂಡಿಸಿ ಹೋರಾಟ ಮಾಡುತ್ತೇವೆ ಎಂದ ಚೇತನ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment