/newsfirstlive-kannada/media/post_attachments/wp-content/uploads/2025/02/Dhananjay9.jpg)
ಸ್ಯಾಂಡಲ್ವುಡ್ ಸ್ಟಾರ್ ನಟ ಡಾಲಿ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟ ಡಾಲಿ ಧನಂಜಯ ಮತ್ತು ಚಿತ್ರದುರ್ಗ ಮೂಲದ ಡಾ. ಧನ್ಯತಾ ಗುರು ಹಿರಿಯರ, ಅಭಿಮಾನಿಗಳ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಡಾಲಿ ಧನಂಜಯ ಹಾಗೂ ಡಾ. ಧನ್ಯತಾ ಅವರ ಮದುವೆಯು ಮೈಸೂರಿನ ಎಕ್ಸಿಬಿಷಬ್ ಗ್ರೌಂಡ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ.
ಮದುವೆಗೆ ಸಾವಿರಾರು ಮಂದಿ ಆಗಮಿಸಿದ್ದು, ಫೆ.16ರ ಬೆಳಗ್ಗೆ ಮೀನಾ ಲಗ್ನದಲ್ಲಿ ಧನಂಜಯ ಅವರು ಧನ್ಯತಾಗೆ ತಾಳಿ ಕಟ್ಟಿದ್ದಾರೆ.
ಇದನ್ನೂ ಓದಿ:ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ ನಿಶ್ಚಿತಾರ್ಥ.. ಮನಗೆದ್ದ ಹುಡುಗಿ ಯಾರು?
ಧನಂಜಯ ಅವರು ಸಿಂಪಲ್ ಆಗಿ, ರಿಜಿಸ್ಟರ್ ಮ್ಯಾರೇಜ್ ಅಥವಾ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ ರೀತಿಯಲ್ಲೇ ಆಗಬೇಕು ಎಂದುಕೊಂಡಿದ್ದರು. ಆದರೆ ಕುಟುಂಬದವರ ಆಸೆಯಂತೆ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.
ಅಲ್ಲದೆ, ಅಭಿಮಾನಿಗಳೂ ಕೂಡ ಮದುವೆಯಲ್ಲಿ ಭಾಗಿಯಾಗಬೇಕು ಎಂಬ ಆಸೆಯಿಂದ ಅದಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು ನಟ ಧನಂಜಯ.
ಇನ್ನೂ, ನಟ ಡಾಲಿ ಅವರ ಮದುವೆಗೆ ರಾಜಕೀಯ ನಾಯಕರು, ಸಿನಿಮಾ ನಟರು, ಮಠಾಧೀಶರು, ಆಪ್ತರು, ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬಸ್ಥರ ಸಾಕ್ಷಿಯಾಗಿ ಧನ್ಯಾ ಅವರಿಗೆ ದಾಳಿ ಕಟ್ಟಿದ್ದಾರೆ.
ಇದನ್ನೂ ಓದಿ: ಧನಂಜಯ-ಧನ್ಯತಾ ಮದುವೆ; ಪ್ರೀತಿಯ ಗೆಳೆಯ ಡಾಲಿಗೆ ವಸಿಷ್ಠ ಸಿಂಹ ಕೊಟ್ಟ ಗಿಫ್ಟ್ ಏನು?
ಇದೇ ವೇಳೆ ತಾವು ಆಚರಿಸಿದ ಸಂಪ್ರದಾಯಗಳ ಬಗ್ಗೆ ಡಾಲಿ ಧನಂಜಯ್ ಸ್ಪಷ್ಟನೆಗಳನ್ನ ಕೊಟ್ಟರು. ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ. ಕುಟುಂಬದವರ ಬಹುದಿನದ ಕನಸು ನನಸಾಗಿದೆ ಎಂದು ಕ್ಲಾರಿಟಿ ಕೊಟ್ಟರು.
ಸೋಷಿಯಲ್ ಮೀಡಿಯಾದಲ್ಲಿ ಡಾಲಿ ಆಚರಿಸಿದ ಆಚರಣೆಗಳ ಬಗ್ಗೆ ಟ್ರೋಲ್ ಮಾಡಲಾಗಿತ್ತು. ತಾವು ಆಚರಿಸಿದ ಸಂಪ್ರದಾಯಗಳ ಬಗ್ಗೆ ಡಾಲಿ ಧನಂಜಯ್ ಸ್ಪಷ್ಟನೆಗಳನ್ನು ಸಹ ಕೊಟ್ಟಿದ್ದಾರೆ.
ತಾಳಿ ಕಟ್ಟುವಾಗ ಡಾಲಿಗೆ ಭಯ ಆಗಿದೆ ಅಂತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಸಖತ್ ಟ್ರೋಲ್ ಆಗಿದ್ದವು. ಆದ್ರೆ ಈ ಬಗ್ಗೆ ಸ್ಪಷ್ಟಬೆ ಕೊಟ್ಟ ಡಾಲಿ, ತಾಳಿ ಕಟ್ಟುವಾಗ ನನಗೆ ಭಯ ಯಾವುದು ಆಗಿಲ್ಲ. ಕುಟುಂಬದವರ ಬಹುದಿನದ ಕನಸು ನನಸಾಗಿದೆ ಎಂದು ಹೇಳಿದ್ದಾರೆ.
ಇನ್ನೂ, ಡಾಲಿ ಹಾಗೂ ಧನ್ಯತಾ ಅವರ ಮದುವೆಗೆ ನಟ ಅರುಣ್ ಸಾಗರ್ ಅವರ ಕಲಾ ನಿರ್ದೇಶನದಲ್ಲಿ ಅದ್ದೂರಿ ಸೆಟ್ ನಿರ್ಮಾಣವಾಗಿತ್ತು. ಅಲ್ಲದೇ ಮದುವೆಗೆ ಆಗಮಿಸಿದ್ದ ಎಲ್ಲಾ ಗಣ್ಯರಿಗೂ, ಕುಟುಂಬದವರಿಗೂ ಮತ್ತು ಅಭಿಮಾನಿಗಳಿಗೂ ಒಂದೇ ರೀತಿಯ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸ್ಟಾರ್ ನಟನ ವಿವಾಹ ಮಹೋತ್ಸವಕ್ಕೆ ಇಡೀ ಸ್ಯಾಂಡಲ್ವುಡ್ ತಾರಾಬಳಗವೇ ಆಗಮಿಸಿತ್ತು. ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕ ಉಪೇಂದ್ರ, ಅಮೂಲ್ಯ ಜಗದೀಶ್, ರಮ್ಯಾ, ರಕ್ಷಿತಾ, ಪ್ರೇಮ್ ಸೇರಿದಂತೆ ಎಲ್ಲರೂ ಮದುವೆಗೆ ಬಂದು ಧನಂಜಯ ಹಾಗೂ ಧನ್ಯತಾ ಅವರಿಗೆ ಶುಭ ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ