newsfirstkannada.com

ಮಧ್ಯಾಹ್ನದವರೆಗೆ ಏನನ್ನೂ ತಿನ್ನಲಿಲ್ಲ; ಬಳ್ಳಾರಿ ಜೈಲಿನಲ್ಲಿ ನರಕ ದರ್ಶನ.. ಮೊದಲ ರಾತ್ರಿ ಕಳೆದ ಆರೋಪಿ..!

Share :

Published August 30, 2024 at 6:49am

Update August 30, 2024 at 6:52am

    ಸೆಲ್‌ ನಂಬರ್ 15.. ರಾತ್ರಿ ಜೈಲೂಟ ಸೇವಿಸಿದ ದಾಸ

    ಬಳ್ಳಾರಿ ಜೈಲಿನಲ್ಲಿ ಮೊದಲ ರಾತ್ರಿ ಕಳೆದ ದರ್ಶನ್​

    ಮತ್ತೆ ಟ್ರೆಂಡ್ ಆಯ್ತು ದರ್ಶನ್ ಖೈದಿ ನಂಬರ್

ಬೆಂಗಳೂರು ಟು ಬಳ್ಳಾರಿ. ಇದು ನಟ ದರ್ಶನ್‌ನ ಸೆರೆವಾಸದ ಹಿಸ್ಟರಿ. ಪರಪ್ಪನ ಅಗ್ರಹಾರದಲ್ಲಿ ನಟೋರಿಯಸ್ ರೌಡಿಗಳ ಜೊತೆ ಸೇರ್ಕೊಂಡು ಫುಲ್ ಎಂಜಾಯ್ ಮಾಡ್ತಿದ್ದ ದರ್ಶನ್‌ಗೆ ಈಗ ಬಳ್ಳಾರಿ ಜೈಲಿನ ದರ್ಶನವಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್‌ ಒಂದು ದಿನ ಕಳೆದಿದ್ದು, ದರ್ಶನ್‌ಗೆ ನೀಡಿರೋ ಖೈದಿ ನಂಬರ್ ಮತ್ತೆ ಟ್ರೆಂಡ್ ಆಗಿದೆ.

ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿ ಫುಲ್ ಬಿಂದಾಸ್‌ನಲ್ಲಿದ್ದ ಆರೋಪಿ ದರ್ಶನ್‌ಗೆ ಈಗ ಬಳ್ಳಾರಿ ಜೈಲಿನ ದರ್ಶನವಾಗಿದೆ. ನಿನ್ನೆ ದರ್ಶನ್‌ನ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ್ದು, ದರ್ಶನ್‌ನ ಒಂದು ದಿನ ಬಳ್ಳಾರಿ ಜೈಲಿನ ಅನುಭವ ಪಡೆದಿದ್ದಾರೆ.

ಇದನ್ನೂ ಓದಿ:ಕೂಲಿಂಗ್ ಗ್ಲಾಸ್​​, ಹ್ಯಾಂಡ್​ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!

ನಿನ್ನೆ ಮಧ್ಯಾಹ್ನದವರೆಗೆ ಏನನ್ನು ತಿನ್ನದ ದರ್ಶನ್ ರಾತ್ರಿಯ ಜೈಲೂಟವನ್ನ ಮಾಡಿದ್ದಾರೆ. ಸಂಜೆ 5 ಗಂಟೆಯಿಂದ 6 ಗಂಟೆವರೆಗೂ ಜೈಲಿನಲ್ಲಿ ಊಟ ವಿತರಣೆ ಮಾಡಲಾಗುತ್ತೆ. ದರ್ಶನ್‌ ಇರೋ ಹೈ ಸೆಕ್ಯೂರಿಟಿ ಸೇಲ್‌ನ 15ರ ಬ್ಯಾರಕ್ ಮುಂದೆಯೇ ಸಿಬ್ಬಂದಿ ಊಟ ತಂದಿಟ್ಟಿದ್ದು, ರಾತ್ರಿಯ ಮುದ್ದೆ, ಅನ್ನ ಹಾಗೂ ಕಾಳುಸಾರನ್ನ ಊಟ ಮಾಡಿದ್ದಾರೆ. ಎಸ್​ಪಿ ಶೋಭಾರಾಣಿ ಕೂಡ ದರ್ಶನ್​ ಸೆಲ್​ ಬಳಿಯೇ ಸುಮಾರು 20 ನಿಮಿಷಗಳ ಕಾಲ ನಿಂತು ಪರಿಶೀಲನೆ ಮಾಡಿದ್ದಾರೆ.

ಬಳ್ಳಾರಿ ಜೈಲಿಗೆ ನಟ ದರ್ಶನ್​ ಕಲರ್​ ಫುಲ್​ ಆಗಿ ಎಂಟ್ರಿ ಕೊಟ್ಟಿದ್ದರು.. ಕೂಲಿಂಗ್ ಗ್ಲಾಸ್ ಅನ್ನು ತಂದಿದ್ದರು.. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.. ಈ ಬಗ್ಗೆ ಬಳ್ಳಾರಿ ಎಸ್‌ಪಿ ಶೋಭಾರಾಣಿ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಕೂಲಿಂಗ್ ಗ್ಲಾಸ್ ಅಲ್ಲ.. ಪವರ್ ಗ್ಲಾಸ್ ಎಂದಿದ್ದಾರೆ. ದರ್ಶನ್ ಜೈಲಿನ ನಿಯಮಗಳನ್ನ ಪಾಲನೆ ಮಾಡ್ತಿದ್ದಾರೆ ಎಂದಿದ್ದಾರೆ.

ಮತ್ತೆ ಟ್ರೆಂಡ್ ಆಯ್ತು ದರ್ಶನ್ ಖೈದಿ ನಂಬರ್
ಪರಪ್ಪನ ಅಗ್ರಹಾರ ವಾಸಿಯಾಗಿದ್ದ ಆರೋಪಿ ದರ್ಶನ್‌ಗೆ ಖೈದಿ 6106 ನಂಬರ್ ಕೊಡಲಾಗಿತ್ತು. ಆದ್ರೀಗ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ ಮೇಲೆ ಮತ್ತೆ ಖೈದಿ ನಂಬರ್ ಚೇಂಜ್ ಮಾಡಲಾಗಿದೆ. ಈಗ ವಿಚಾರಣಾಧೀನ ಖೈದಿ ನಂಬರ್ 511 ನೀಡಲಾಗಿದೆ. ಇದೀಗ ಮತ್ತೆ ದರ್ಶನ್ ಖೈದಿ ನಂಬರ್ ಟ್ರೆಂಡ್ ಆಗಿದೆ. ಈ ಹಿಂದೆ ತಮ್ಮ ತಮ್ಮವಾಹನಗಳ ಮೇಲೆ ಹಾಕಿಸಿದ್ದ ನಂಬರ್​ ಅನ್ನು ತೆಗೆದು, ಅಭಿಮಾನಿಯೊಬ್ಬ ಬಳ್ಳಾರಿ ಖೈದಿ 511 ಸ್ಟಿಕರ್ ಹಾಕಿಸಿದ್ದಾನೆ.

ಒಟ್ನಲ್ಲಿ.. ಕೊಲೆ ಕೇಸ್‌ನಲ್ಲಿ ಜೈಲು ಪಾಲಾದ್ರೂ ಕೂಡ ಬಿಂದಾಸ್ ಲೈಫ್‌ ಲೀಡ್ ಮಾಡ್ತಿದ್ದ ದರ್ಶನ್‌ಗೆ ಇದೀಗ ಬಳ್ಳಾರಿಯ ಜೈಲಿನ ಸೆರೆವಾಸ ಶುರುವಾಗಿದೆ. ಭಯೋತ್ಪಾದರಿಗೆ ಮೀಸಲಿಟ್ಟಿದ್ದ ಸೆಲ್‌ನಲ್ಲಿಯೇ ದರ್ಶನ್‌ ಮೊದಲ ದಿನ ಕಳೆದಿದ್ದಾರೆ.

ಇದನ್ನೂ ಓದಿ:ಬಳ್ಳಾರಿ ಜೈಲು ಸೇರಿದ ನಟ ದರ್ಶನ್.. ಜೈಲಿಗೆ ಎಂಟ್ರಿಯಾಗುವ ಫೋಟೋಗಳು ಇಲ್ಲಿವೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯಾಹ್ನದವರೆಗೆ ಏನನ್ನೂ ತಿನ್ನಲಿಲ್ಲ; ಬಳ್ಳಾರಿ ಜೈಲಿನಲ್ಲಿ ನರಕ ದರ್ಶನ.. ಮೊದಲ ರಾತ್ರಿ ಕಳೆದ ಆರೋಪಿ..!

https://newsfirstlive.com/wp-content/uploads/2024/08/DARSHAN-3-1.jpg

Load More