ಕನ್ನಡ ಕಿರುತೆರೆ ದಂಪತಿ ಮನೆಯಲ್ಲಿ ಸಂಭ್ರಮ..ನಟಿ ಶಿಲ್ಪಾ ರವಿ ಕ್ಯೂಟ್ ಮಗನಿಗೆ ಇಟ್ಟ ಹೆಸರೇನು?

author-image
Veena Gangani
Updated On
ಕನ್ನಡ ಕಿರುತೆರೆ ದಂಪತಿ ಮನೆಯಲ್ಲಿ ಸಂಭ್ರಮ..ನಟಿ ಶಿಲ್ಪಾ ರವಿ ಕ್ಯೂಟ್ ಮಗನಿಗೆ ಇಟ್ಟ ಹೆಸರೇನು?
Advertisment
  • 2020ರಲ್ಲಿ ಮದುವೆಯಾಗಿದ್ದ ದರ್ಶಕ್, ಶಿಲ್ಪಾ ರವಿ
  • ಕಿರುತೆರೆಯ ಮುದ್ದಾದ ಜೋಡಿ ಮನೆಯಲ್ಲಿ ಸಂಭ್ರಮ
  • ತಮಿಳು ಅಂಗಳದಲ್ಲಿ ಬ್ಯುಸಿಯಾಗಿರೋ ನಟ ದರ್ಶಕ್​

ದರ್ಶಕ್ ಗೌಡ ಹಾಗೂ ಶಿಲ್ಪಾ ಕಿರುತೆರೆಯ ಮುದ್ದಾದ ಜೋಡಿ. ದರ್ಶಕ್​ ಕಾವ್ಯಾಂಜಲಿ, ಬೆಟ್ಟದ ಹೂ ಧಾರಾವಾಹಿಯಲ್ಲಿ ನಟಿಸಿದ್ದು, ಸದ್ಯ ಪರಭಾಷೆಯಲ್ಲಿ ನಟಿಸುತ್ತಿದ್ದಾರೆ. ಶಿಲ್ಪಾ ರವಿ ಅವರು ನಾಗಿಣಿ, ಜೀವ ಹೂವಾಗಿದೆ, ಮಾನಸ ಸರೋವರ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಕರುಳು ಚುರ್ ಅನ್ನೋ ದೃಶ್ಯ.. ಗುಡ್ಡ ಕುಸಿತದಲ್ಲಿ ಸಿಲುಕಿ ಕೈ ಅಲ್ಲಾಡಿಸ್ತಿದೆ ಪುಟ್ಟ ಕಂದಮ್ಮ..

publive-image

ದಂಪತಿ ಆಗೋ ಮೊದಲು ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ರು. ನಂತರ ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಕೂಡ ಸಿಕ್ಕಿತ್ತು. ಬೆಂಗಳೂರಿನಲ್ಲಿ 2020, ನವೆಂಬರ್ 25ರಂದು ದರ್ಶಕ್, ಶಿಲ್ಪಾ ಮದುವೆಯಾದ್ರು. ಮದುವೆ ಬಳಿಕ ಶಿಲ್ಪಾ ಅವರು ಅಷ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿಲ್ಲ.

publive-image

ಸದ್ಯ ಈ ಜೋಡಿ ಸುಖ ದಾಂಪತ್ಯ ಜೀವನ ನಡೆಸ್ತಿದೆ. ಇಬ್ಬರ ಪ್ರೇಮದ ಸಂಕೇತವಾಗಿ ಮುದ್ದು ಮಗ ಜನಿಸಿದ್ದಾನೆ. ಹೀಗಾಗಿ ನಟನೆಯಿಂದ ದೂರ ಉಳಿದು, ಕಂಪ್ಲೀಟ್​ ಮಗನ ಕಡೆ ಗಮನ ಕೊಟ್ಟಿದ್ದಾರೆ ಶಿಲ್ಪಾ. ದರ್ಶಕ್​ ತಮಿಳು ಭಾಷೆಯಲ್ಲಿ ನಟನೆ ಮಾಡ್ತಿದ್ದಾರೆ. ಸದ್ಯ ಈ ಜೋಡಿಯ ಮಗನ ನಾಮಕರಣ ಜರುಗಿದೆ. ಮಗುವಿ ಪೂರಕ್​ ಗೌಡ ಎಂದು ನಾಮಕರಣ ಮಾಡಿದ್ದಾರೆ ದರ್ಶಕ್ ಶಿಲ್ಪಾ.

ಮಗುವಿನ ನಾಮಕರಣ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗು ಸಖತ್​ ಕ್ಯೂಟ್ ಆಗಿದ್ದು, ಹೆಸರು ಕೂಡ ಅಷ್ಟೇ ಮುದ್ದಾಗಿದೆ. ಈ ಹ್ಯಾಪಿ ಫ್ಯಾಮಿಲಿಗೆ ಯಾರ್​ ದೃಷ್ಟಿನೂ ತಾಗದಿರಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment