newsfirstkannada.com

‘ಇವ್ರೆಲ್ಲಾ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪ..!

Share :

Published June 16, 2024 at 6:32am

  ವಿಚಾರಣೆ ವೇಳೆ ಪೊಲೀಸರ ಮುಂದೆ ನಟ ದರ್ಶನ್​ ಪಶ್ಚಾತ್ತಾಪದ ಮಾತು

  ‘ನಾನು ಹೆದರಿಸಿದ್ದು ಅಷ್ಟೇ ಸರ್.. ನಾನು ಕೊಲೆ ಮಾಡಿಲ್ಲ ಅಂತ ಕಣ್ಣೀರು

  ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾದ ರೇಣುಕಾಸ್ವಾಮಿ ಕೊಲೆ ಕೇಸ್​

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅರೆಸ್ಟ್​ ಆಗಿರೋದು ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದೊಂದು ಹೈಪ್ರೊಫೈಲ್​ ಕೇಸ್​ ಆಗಿರುವುದರಿಂದ ಸ್ವಲ್ಪ ಎಡವಟ್ಟಾದರೂ ಪೊಲೀಸ್​ ಇಲಾಖೆಗೆ ಕೆಟ್ಟ ಹೆಸರು ಬರುತ್ತೆ. ಇದೇ ಕಾರಣ ಖುದ್ದು ಬೆಂಗಳೂರು ನಗರ ಪೊಲೀಸ್​ ಆಯುಕ್ತರೇ ದರ್ಶನ್​ ಕೇಸ್​ನಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ವಿಚಾರಣೆ ವೇಳೆ ನಟ ದರ್ಶನ್​, ನಾನು ರೇಣುಕಾಸ್ವಾಮಿಗೆ ಹೆದರಿಸಿದ್ದು ಅಷ್ಟೇ ಸರ್. ನಾನು ಕೊಲೆ ಮಾಡಿಲ್ಲ ಸರ್ ಎಂದು ಹೇಳ್ತಿದ್ದಾರಂತೆ.

ಇದನ್ನೂ ಓದಿ: ‘ರೌಡಿ ಬಾಸ್‌ನಿಂದ ಖ್ಯಾತ ಸಂಗೀತ ನಿರ್ದೇಶಕನಿಗೆ ಹಾರ್ಟ್ ಅಟ್ಯಾಕ್‌’- ಪ್ರಶಾಂತ್​ ಸಂಬರಗಿ ಹೊಸ ಬಾಂಬ್‌!

ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದ ಅನ್ನೋದಷ್ಟೇ ನನಗೆ ಗೊತ್ತಾಗಿದ್ದು. ಅದು ಎಲ್ಲಿ ಹೇಗೆ ಅನ್ನುವುದು ನನಗೆ ಗೊತ್ತಿಲ್ಲ. ನಾನು ಸೋಷಿಯಲ್ ಮೀಡಿಯಾ ಯೂಸ್ ಮಾಡಲ್ಲ. ನನ್ನ ಖಾತೆಯನ್ನು ಯೂಸ್ ಮಾಡೋದು ನನ್ನ ಟೀಂ. ಅಲ್ಲಿ ಏನಾಗ್ತಿದೆ ಅನ್ನುವುದು ನನಗೆ ಗೊತ್ತಿಲ್ಲ. ನಾನು ರೇಣುಕಾಸ್ವಾಮಿಗೆ ಎರಡೇಟು ಹೊಡೆದು, ಬಳಿಕ ಊಟಕ್ಕೆ ಕಾಸ್ ಕೊಟ್ಟು ಊಟ ಮಾಡಿಕೊಂಡು ಊರಿಗೆ ಹೋಗು ಎಂದು ಹೇಳಿ ಬಂದೆ. ನಾನು ಅಲ್ಲಿಂದ ಬಂದ್ಮೇಲೆ ಇವ್ರೆಲ್ಲಾ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ. ನಾನು ಕೊಲೆ ಮಾಡಿಲ್ಲ.. ಕೊಲೆ ಮಾಡಿ ಅಂತ ಯಾರಿಗೂ ಹೇಳಿಲ್ಲ ಎಂದು ಹೇಳ್ತಿದ್ದಾರಂತೆ.

ಕೊಲೆ ಕೇಸ್​ನಲ್ಲಿ ಆರೋಪಿ ಆಗಿದ್ದಕ್ಕೆ ಪಶ್ಚಾತ್ತಾಪ

ನಟ ದರ್ಶನ್​ ಪರಿಸ್ಥಿತಿ ಹೇಗಾಗಿದೆ ಅಂದ್ರೆ ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಎನ್ನುವಂತಾಗಿದೆ. ಕಸ್ಟಡಿಯಲ್ಲಿ ಪಶ್ಚಾತ್ತಾಪದಿಂದ ನರಳುತ್ತಿರುವ ನಟ ದರ್ಶನ್, ಪರಿಚಯಸ್ಥ ಅಧಿಕಾರಿಗಳ ಬಳಿ ನನ್ನಿಂದ ತಪ್ಪಾಗೋಯ್ತು ಎಂದು ಘಟನೆ ಬಗ್ಗೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರಂತೆ. ತನ್ನೊಂದಿಗೆ ಸಹಚರರ ಜೀವನವೂ ಹಾಳಾಯ್ತು. ಸೆಲೆಬ್ರಿಟಿ ಸ್ಥಾನದಲ್ಲಿದ್ದುಕೊಂಡು, ಕೊಲೆ ಆರೋಪಿ ಆಗಿದ್ದು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರನ್ನ ಫೇಸ್ ಮಾಡೋದು ಹೇಗೆ ಎಂದು ಚಿಂತೆ ನಟ ದರ್ಶನ್​ನನ್ನು ಕಾಡ್ತಿದೆಯಂತೆ. ಅವತ್ತು ರೇಣುಕಾಸ್ವಾಮಿ ಕ್ಷಮೆ ಕೇಳಿದಾಗಿ ಇನ್ಮುಂದೆ ಈ ರೀತಿ ಮಾಡ್ಬೇಡ ಎಂದು ಬಿಟ್ಟಿದ್ರೂ ಸಾಕಿತ್ತು. ಇವತ್ತು ದರ್ಶನ್​ಗೆ ಕಂಬಿ ಹಿಂದೆ ಕುಳಿತು, ಪಶ್ಚಾತ್ತಾಪ ಪಡುವ ಪರಿಸ್ಥಿತಿಯೇ ಬರ್ತಿರಲಿಲ್ಲ. ಕೋಪದ ಕೈ ಬುದ್ಧಿಕೊಟ್ಟು ತಪ್ಪು ಕೆಲಸ ಮಾಡೋದು ಮೊದಲು ಯೋಚನೆ ಮಾಡಬೇಕಿತ್ತು. ಈಗ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇವ್ರೆಲ್ಲಾ ಹೀಗೆ ಮಾಡಿ ನನ್ನ ತಲೆಗೆ ತಂದಿದ್ದಾರೆ ಸರ್..’ ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತಾಪ..!

https://newsfirstlive.com/wp-content/uploads/2024/06/darshan25.jpg

Load More