/newsfirstlive-kannada/media/post_attachments/wp-content/uploads/2024/11/DARSHAN_NEW.jpg)
ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್ ಬೆನ್ನು ನೋವಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಸರ್ಜರಿ ಮಾಡಬೇಕಾ ಅಥವಾ ಫಿಸಿಯೋಥೆರಪಿ ಸಾಕಾ ಎನ್ನುವ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.
ಇಂದು ಬಿಜಿಎಸ್ ಆಸ್ಪತ್ರೆಯ ವೈದ್ಯರ ‘ಕೈ’ ಸೇರಲಿದೆ ರಿಪೋರ್ಟ್​
131 ದಿನಗಳ ಸೆರೆವಾಸ. ಕತ್ತಲ ಕೋಣೆಯಲ್ಲಿ ಕಾಡುತ್ತಿದ್ದ ಬೆನ್ನು ನೋವು ದರ್ಶನ್​ ನರಕ ದರ್ಶನ ಮಾಡಿಸಿತ್ತು. ಸಂಕಷ್ಟಗಳನ್ನ ಅನುಭವಿಸಲಾಗದೇ ಮಧ್ಯಂತರ ಜಾಮೀನು ಪಡೆದು ಹೊರಬಂದ ದರ್ಶನ್​​ ಇದೀಗ ವೈದ್ಯರ ಸುಪರ್ದಿಗೆ ಜಾರಿದ್ದಾರೆ. ಸದ್ಯ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ 4ನೇ ಮಹಡಿ ವಿಐಪಿ ಸೂಟ್​ನಲ್ಲಿ ನಟ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್​ಗೆ ಸರ್ಜರಿ ಮಾಡಬೇಕಾ ಅಥವಾ ಫಿಸಿಯೋಥೆರಪಿ ಸಾಕಾ ಅನ್ನು ಪ್ರಶ್ನೆ ಸದ್ಯ ವೈದ್ಯರನ್ನು ಕಾಡುತ್ತಿದೆ. ಇದಕ್ಕೆಲ್ಲ ಇವತ್ತು ಉತ್ತರ ಸಿಗಲಿದೆ.
ವೈದ್ಯರ ಅಬ್ಸರ್ವೇಷನ್​ನಲ್ಲಿರುವ ದಾಸನಿಗೆ ಒಟ್ಟು 7 ಟೆಸ್ಟ್​ಗಳನ್ನು ಮಾಡಲಾಗಿದೆ. ಅವು ಯಾವಯಾವ ಪರೀಕ್ಷೆಗಳು ಅಂತ ನೋಡೋದಾದ್ರೆ..
ದರ್ಶನ್​ಗೆ ‘7’ ಪರೀಕ್ಷೆ
- ಸ್ಕ್ಯಾನಿಂಗ್ ಇಸಿಜಿ ಹಾಗೂ ಟ್ರೆಡ್ ಮಿಲ್ ಟೆಸ್ಟ್
- ಲಿವರ್ ಫಂಕ್ಷನ್ ಟೆಸ್ಟ್, ರೀನಲ್ ಫಂಕ್ಷನ್ ಟೆಸ್ಟ್
- ಯೂರಿನ್ ಟೆಸ್ಟ್, ಬ್ಲಡ್ ಪ್ರೆಷರ್, ಶುಗರ್ ಟೆಸ್ಟ್
ಇದನ್ನೂ ಓದಿ: ಬೆನ್ನು ನೋವಿನ ಜೊತೆ ನಟ ದರ್ಶನ್‌ಗೆ ಮತ್ತೊಂದು ಸಮಸ್ಯೆ; ನ್ಯೂರೋಸರ್ಜನ್ ಡಾ. ನವೀನ್ ಹೇಳಿದ್ದೇನು?
ಇವತ್ತು ಈ ಎಲ್ಲಾ ಪರೀಕ್ಷೆಗಳ ವರದಿ ವೈದ್ಯರ ಕೈ ಸೇರಿಲಿದ್ದು, ಎನ್ಒಸಿ ಬಂದ ಬಳಿಕ ಮುಂದೆ ಏನು ಚಿಕಿತ್ಸೆ ನೋಡಬೇಕೆಂಬ ಬಗ್ಗೆ ವೈದ್ಯರು ನಿರ್ಧಾರ ಮಾಡಲಿದ್ದಾರೆ. ನುರಿತ ನರರೋಗ ತಜ್ಞ ಡಾ. ನವೀನ್ ಅಪ್ಪಾಜಿಯವರು, ಮೂಳೆ ರೋಗ ತಜ್ಞರು, ಹೃದ್ರೋಗ ತಜ್ಞರು, ಮೂತ್ರಪಿಂಡ ತಜ್ಞರು, ಜನರಲ್ ಫಿಸಿಶಿಯನ್, ಲ್ಯಾಬ್ ಬಯೋ ಕೆಮಿಸ್ಟ್ ಸೇರಿದಂತೆ 7 ಜನ ನುರಿತ ವೈದ್ಯರು ದರ್ಶನ್​ಗೆ ಚಿಕಿತ್ಸೆ ನೀಡಲಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ.. ಇಂದು ಸಿದ್ದೇಶ್ವರಸ್ವಾಮಿ ಕೊಂಡೋತ್ಸವ ಬೆನ್ನಲ್ಲೇ ಗರ್ಭಗುಡಿ ಬಾಗಿಲು ಬಂದ್
ಇನ್ನು, ನಟ ದರ್ಶನ್​ ಚಿಕಿತ್ಸೆ ಬಗ್ಗೆ ಗೌಪ್ಯತೆ ಕಾಪಾಡುವಂತೆ ಪತ್ನಿ ವಿಜಯಲಕ್ಷ್ಮೀ, ಆಸ್ಪತ್ರೆ ವೈದ್ಯರಿಗೆ ಪರ್ಸನಲ್ ಆಗಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಧ್ಯಮಗಳಿಗೆ ಹಾಗೂ ಇತರೆ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡದಂತೆ ವಿಜಯಲಕ್ಷ್ಮೀ ರಿಕ್ವಸ್ಟ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ದರ್ಶನ್​ ಇರುವ ವಿಐಪಿ ಸೂಟ್​ಗೆ ಕೇವಲ 7 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಸದ್ಯ ದರ್ಶನ್​ಗೆ ಆಪ್ತರಾಗಿರುವ ನಟ ಧನ್ವೀರ್​ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದಾರೆ.
ಏನೇ ಹೇಳಿ, ಸದ್ಯಕ್ಕೆ ದರ್ಶನ್​ಗೆ ಶಸ್ತ್ರ ಚಿಕಿತ್ಸೆ ಮಾಡಿಸ್ಬೇಕೋ ಅಥವಾ ಬೇಡ್ವೋ? ಅನ್ನೋದು ಇನ್ನೂ ತೀರ್ಮಾನ ಆಗಿಲ್ಲ. ವರದಿ ಬಂದ ಬಳಿಕವಷ್ಟೇ ಈ ಪ್ರಶ್ನೆಗೆ ಉತ್ತರ ಬಹಿರಂಗವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ