/newsfirstlive-kannada/media/post_attachments/wp-content/uploads/2024/06/DARSHAN_MURDER_NEW_2.jpg)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬರ್ಬರ ಹತ್ಯೆಯಾಗಿದೆ. ಕೊಲೆ ಕೇಸಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಜೈಲು ಸೇರಿದೆ. ಕೋರ್ಟ್ ಕೂಡ 6 ದಿನಗಳ ಕಾಲ ದರ್ಶನ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ. ಪೊಲೀಸ್ರು ಕೂಡ ಕೇಸ್ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಇದರ ಮಧ್ಯೆ ದಿನಗಳು ಕಳೆದಂತೆ ಕೇಸ್ ಸಂಬಂಧ ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಿಂದ ಬಚಾವ್ ಆಗಲು ದರ್ಶನ್ ಮತ್ತು ಗ್ಯಾಂಗ್ ಸಾಕಷ್ಟು ಸರ್ಕಸ್ ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದರ್ಶನ್ ಮತ್ತು ಗ್ಯಾಂಗನ್ನು ತಪ್ಪಿಸಲು ರಾಜ್ಯದ ಪ್ರಭಾವಿ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿದ್ದಾರಂತೆ. ಸ್ಥಳ ಮಹಜರು ವೇಳೆ ಆರೋಪಿ ಕೈಯಲ್ಲಿ ಫೋನ್ ನೀಡಲಾಗಿದ್ದು, ಅನ್ನಪೂರ್ಣೇಶ್ವರಿ ಠಾಣೆಗೆ ಶಾಮಿಯಾನದ ಪರದೆ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಾಕ್ಷ್ಯ ಸಂಗ್ರಹದ ವೇಳೆ ಉದ್ದೇಶಪೂರ್ವಕ ಲೋಪದ ಜತೆಗೆ ಆರೋಪಿಗಳಿಗೆ ಲಾಭ ಆಗುವಂತೆ ಕೆಲಸ ಮಾಡುವ ಆರೋಪ ಕೂಡ ಇದೆ.
ಈ ಹಿಂದೆ ಕೇಸ್ ಮುಚ್ಚಿ ಹಾಕಲು ಐವರನ್ನು ದರ್ಶನ್ ಸರೆಂಡರ್ ಮಾಡಿಸಿದ್ರು. ಸರೆಂಡರ್ ಆಗಲು 30 ಲಕ್ಷ ರೂಪಾಯಿ ಡೀಲ್ ನಡೆದಿತ್ತು. ಮೂವರಿಗೆ ತಲಾ 5 ಲಕ್ಷ ರೂಪಾಯಿ ನೀಡಿದ್ರು ಅನ್ನೋ ಗಂಭೀರ ಆರೋಪ ಕೂಡ ಕೇಳಿ ಬಂದಿದೆ.
ಇದನ್ನೂ ಓದಿ: ದರ್ಶನ್ ಹುಚ್ಚು ಅಭಿಮಾನಿ.. ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದ A5 ನಂದೀಶ್ ಹಿನ್ನೆಲೆ ಏನು? ಯಾರಿವರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ