Advertisment

ನಟ ದರ್ಶನ್, ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಮತ್ತೆ ವಾರ್! ಬಾಸಿಸಂ ಕಾಲ‌ ಮುಗಿತಾ? VIDEO

author-image
admin
Updated On
ಜೋಡೆತ್ತು ಮಧ್ಯೆ ನಿಂತ ಫೋಟೋ ಹಾಕಿ ಮಾರ್ಮಿಕವಾಗಿ ಬರೆದ ಚಾಲೆಂಜಿಂಗ್ ಸ್ಟಾರ್; ಹೊಸ ಸಂದೇಶ ಕೊಟ್ಟ ದರ್ಶನ್..!
Advertisment
  • ಕಿಚ್ಚ ಸುದೀಪ್ ಮನೆಯಲ್ಲಿ ಮ್ಯಾಕ್ಸ್‌ ಚಿತ್ರತಂಡದ ಸೆಲೆಬ್ರೇಷನ್‌
  • ಬಾಸಿಸಂ ಕಾಲ ಮುಗಿತು... ಮ್ಯಾಕ್ಸ್ ಮ್ಯಾಕ್ಸಿಸಂ ಅಂದಿದ್ದೇಕೆ?
  • ಪರೋಕ್ಷವಾಗಿ ನಟ ದರ್ಶನ್‌ಗೆ ಟಾಂಗ್ ಕೊಡಲಾಗುತ್ತಿದೆಯಾ?

ಸೂಪರ್‌ ಸ್ಟಾರ್ ನಟರ ಸಿನಿಮಾ ರಿಲೀಸ್ ಆದಾಗ ವಿವಾದಗಳು ಸೃಷ್ಟಿಯಾಗೋದು ಸಾಮಾನ್ಯ. ಸ್ಯಾಂಡಲ್‌ವುಡ್ ಕೂಡ ಇದಕ್ಕೆ ಹೊರತಾಗಿಲ್ಲ. ಡಿಸೆಂಬರ್ ತಿಂಗಳಲ್ಲಿ ಕನ್ನಡ ಚಿತ್ರರಂಗ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಕಂಡಿದೆ. ಸ್ಯಾಂಡಲ್‌ವುಡ್‌ ಮತ್ತೆ ಎಚ್ಚೆತ್ತುಕೊಂಡಿದೆ ಎನ್ನುವಾಗಲೇ ನಟ ದರ್ಶನ್, ಕಿಚ್ಚ ಸುದೀಪ್ ಅಭಿಮಾನಿಗಳ ಮಧ್ಯೆ ಕೋಲ್ಡ್‌ ವಾರ್ ಶುರುವಾಗಿದೆ.

Advertisment

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಡುತ್ತಿದೆ. ಮ್ಯಾಕ್ಸ್ ಮ್ಯಾಗ್ಸಿಮಮ್‌ ಸಕ್ಸಸ್ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಸುದೀಪ್ ಮನೆಯಲ್ಲಿ ಮ್ಯಾಕ್ಸ್ ಟೀಂಗೆ ಔತಣಕೂಟ ಏರ್ಪಡಿಸಿದ್ದು, ಸುದೀಪ್ ಆತ್ಮೀಯರು ಕೇಕ್ ಕಟ್ ಮಾಡಿ ಭರ್ಜರಿ ಸೆಲಬ್ರೇಟ್ ಮಾಡಿದ್ದಾರೆ.

ಇದನ್ನೂ ಓದಿ: ಕಿಚ್ಚನ ಮ್ಯಾಕ್ಸ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್; ಖುಷಿಯಲ್ಲಿ ಸುದೀಪ್ ಮಾಡಿದ್ದೇನು? ಇಲ್ಲಿವೆ ಫೋಟೋಗಳು 

ಬಾಸಿಸಂ ಕಾಲ ಮುಗಿತಾ?
ಕಿಚ್ಚ ಸುದೀಪ್‌ ಮ್ಯಾಕ್ಸ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಡೆದ ಸೆಲೆಬ್ರೇಷನ್ ಈಗ ವಿವಾದಕ್ಕೆ ಕಾರಣವಾಗಿದೆ. ಮ್ಯಾಕ್ಸ್‌ ಚಿತ್ರತಂಡದ ಸಂಭ್ರಮದಲ್ಲಿ ಪರೋಕ್ಷವಾಗಿ ದರ್ಶನ್‌ಗೆ ಟಾಂಗ್ ಕೊಡಲಾಗುತ್ತಿದೆ ಅನ್ನೋ ಚರ್ಚೆ ಶುರುವಾಗಿದೆ.

Advertisment

ಅಸಲಿಗೆ ಆಗಿದ್ದೇನು?
ಕಿಚ್ಚ ಸುದೀಪ್ ಮನೆಗೆ ಭೇಟಿ ಕೊಟ್ಟ ಮ್ಯಾಕ್ಸ್‌ ಚಿತ್ರತಂಡ ಸೆಲೆಬ್ರೇಷನ್‌ಗಾಗಿ ಕೇಕ್ ಕಟ್ ಮಾಡಿತ್ತು. ಈ ವೇಳೆ ಕೇಕ್ ಮೇಲೆ ಒಂದು ಸಾಲು ಬರೆಯಲಾಗಿದ್ದು, ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಬಾಸಿಸಂ ಕಾಲ ಮುಗಿತು... ಮ್ಯಾಕ್ಸ್ ಮ್ಯಾಕ್ಸಿಸಂ ಎಂದು ಬರೆಸಿ ಮ್ಯಾಕ್ಸ್‌ ಚಿತ್ರ ತಂಡ ಸಂಭ್ರಮಿಸಿತ್ತು. ಇದನ್ನು ನೋಡಿದ ಫ್ಯಾನ್ಸ್ ಬಾಸಿಸಂ ಕಾಲ ಮುಗಿತು ಅನ್ನೋದನ್ನ ನಟ ದರ್ಶನ್‌ಗೆ ಉಲ್ಲೇಖಿಸಲಾಗಿದೆ ಎಂದು ಟೀಕಿಸಿದ್ದಾರೆ. ಉದ್ದೇಶಪೂರ್ವಕವಾಗಿ ಹೀಗೆ ಬರೆಸಿ ಟಾಂಗ್ ಕೊಡಲಾಗಿದೆ ಎನ್ನುತ್ತಿದ್ದಾರೆ.

ನಟ ಪ್ರದೀಪ್ ಸ್ಪಷ್ಟನೆ!
ಈ ಬಾಸಿಸಂ ವಿವಾದ ಭುಗಿಲೇಳುತ್ತಿದ್ದಂತೆ ನಟ ಪ್ರದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ಬಾಸಿಸಂ ಕಾಲ‌ ಮುಗಿತು ಅನ್ನೋ ಪದ ಕೇಕ್ ಮೇಲೆ ಬರೆಸಿದ್ದು ನಾನೇ. ಆದರೆ ಯಾವ ನಟನಿಗೂ ಟಾಂಗ್ ಕೊಟ್ಟಿದ್ದಲ್ಲ. ಇದು ಮ್ಯಾಕ್ಸ್ ಸಿನಿಮಾದ ಹಾಡಿನ ಸಾಲು. ಬಾಸ್ ಅನ್ನೋದು ಯಾವೊಬ್ಬ ನಟನಿಗೆ ಮೀಸಲಾಗಿಲ್ಲ.

Advertisment

ಪ್ರತಿಯೊಬ್ಬ ನಟನಿಗೂ ಸಪರೇಟ್ ಅಭಿಮಾನಿಗಳು ಇದ್ದಾರೆ. ಅವರಿಗೆ ಇಷ್ಟ ಬಂದಂತೆ ಅವರು ಸಂಭ್ರಮಿಸುತ್ತಾರೆ. ಬಾಸ್ ಅನ್ನೋದು ಯಾವ ಒಬ್ಬ ನಾಯಕ ನಟನಿಗೆ ಸೀಮಿತವಲ್ಲ. ಅಭಿಮಾನಿಗಳು ತಮ್ಮ ನಾಯಕ ನಟನನ್ನ ಹೇಗೆ ಬೇಕಾದರೂ ಕರೆಯಬಹುದು. ಅನಾವಶ್ಯಕವಾಗಿ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ನಟ ಪ್ರದೀಪ್ ಅವರು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment