ಮುಗಿಯದ ಕಾನೂನು ಹೋರಾಟ.. ಕೋರ್ಟ್​ಗೆ ಹಾಜರಾದ ದರ್ಶನ್, ಪವಿತ್ರಾ ಗೌಡ

author-image
Bheemappa
Updated On
ಮುಗಿಯದ ಕಾನೂನು ಹೋರಾಟ.. ಕೋರ್ಟ್​ಗೆ ಹಾಜರಾದ ದರ್ಶನ್, ಪವಿತ್ರಾ ಗೌಡ
Advertisment
  • ದರ್ಶನ್, ಎ1 ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳು ಹಾಜರು
  • ರೇಣುಕಾಸ್ವಾಮಿ ಕೇಸ್​ನಲ್ಲಿ ಜಾಮೀನು ಪಡೆದ ಕೆಲ ಆರೋಪಿಗಳು
  • ಹೋರ್ಟ್​ಗೂ ಹೋಗುವ ಮುನ್ನಾ ದರ್ಶನ್ ಅಭಿಮಾನಿಗಳ ಭೇಟಿ

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆ್ಯಂಡ್ ಗ್ಯಾಂಗ್ ಇಂದು ನಗರದ 57ನೇ ಸಿಸಿಹೆಚ್ ಕೋರ್ಟ್​ಗೆ ಹಾಜರಾಗಿದ್ದಾರೆ. ಎ1 ಆರೋಪಿ ಆಗಿರುವ ಪವಿತ್ರಾ ಗೌಡ, ದರ್ಶನ್ ಅವರು ಈಗಾಗಲೇ ಕೋರ್ಟ್​ಗೆ​ ಕಾರಿನಲ್ಲಿ ಬಂದು ನ್ಯಾಯಾಲಯದ ಒಳಗಡೆ ಹೋಗಿದ್ದಾರೆ.

ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳು ಪ್ರಕರಣದಲ್ಲಿ ಜಾಮೀನು ಪಡೆದು ಹೊರಗಿದ್ದಾರೆ. ಹೀಗಾಗಿ ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ಹಿನ್ನೆಲೆಯಲ್ಲಿ ಇಂದು ಎಲ್ಲರೂ ಕೋರ್ಟ್​ಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಪಾಕ್ ಟೀಮ್ ವೇತನಕ್ಕಿಂತ ಹಾರ್ದಿಕ್ ಪಾಂಡ್ಯ ವಾಚ್ ದುಬಾರಿ.. ಬೆಲೆ ಕೇಳಿದ್ರೆ, ಶಾಕ್ ಆಗುತ್ತೆ!

publive-image

ದರ್ಶನ್ ಅವರು ನ್ಯಾಯಾಲಯಕ್ಕೆ ಹಾಜರಾಗುವ ಮೊದಲೇ ಆರ್.ಆರ್ ನಗರದ ತಮ್ಮ ನಿವಾಸದ ಬಳಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಇದಾದ ಮೇಲೆ ಕೋರ್ಟ್​ನತ್ತ ದರ್ಶನ್ ತೆರಳಿದರು. ಕೋರ್ಟ್​ಗೆ ಹೋಗುವಾಗ ದರ್ಶನ್ ಅವರು ಕುಂಟುತ್ತಾ ನಡೆದುಕೊಂಡು ಹೋಗಿರುವುದು ಕಂಡುಬಂತು. 57ನೇ ಸೆಷನ್ಸ್ ಕೋರ್ಟ್​ನ ನ್ಯಾಯಾಧೀಶ ಜೈ ಶಂಕರ್ ಪೀಠದಲ್ಲಿ ಪ್ರಕರಣದ ಎಲ್ಲ ಆರೋಪಿಗಳ ವಿಚಾರಣೆ ನಡೆಯಲಿದೆ.

ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಇದರಂತೆ ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್​ಗೂ ಷರತ್ತುಬದ್ಧ ಜಾಮೀನು ಅನ್ನು ಕೋರ್ಟ್ ನೀಡಿತ್ತು. ಹೀಗಾಗಿ ವಿಚಾರಣೆ ಹಿನ್ನೆಲೆಯಲ್ಲಿ ಇಂದು ಕೋರ್ಟ್​ಗೆ ಹಾಜರು ಆಗಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment