/newsfirstlive-kannada/media/post_attachments/wp-content/uploads/2025/05/Darshan-pavithra-gowda-10.jpg)
ಬಾಲಿಯಲ್ಲಿ ಪತ್ನಿ ಜೊತೆ ಆ್ಯನಿವರ್ಸರಿ ಆಚರಿಸಿ ಜಾಲಿಯಾಗಿದ್ದ ನಟ ದರ್ಶನ್‌ಗೆ ಕಾಮಾಕ್ಷಿಪಾಳ್ಯ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ರು. ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿ ಹೊಸ ಸಾಕ್ಷಿಗಳ ಉಲ್ಲೇಖ ಮಾಡಿದ್ರು. ಹಾಗಾಗಿ ದರ್ಶನ್ ಮತ್ತು ಪವಿತ್ರಾಗೌಡ ಸೇರಿ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳು ಇಂದು ಕೋರ್ಟ್‌ಗೆ ಹಾಜರಾಗಿದ್ದಾರೆ.
ಕೋರ್ಟ್ ಒಳಗೆ ಮತ್ತು ಹೊರಗೆ ನಡೆದಿರೋ ಕೆಲ ಘಟನೆಗಳು, ದಾಸನ ಅಭಿಮಾನಿಗಳ ಕುತೂಹಲವನ್ನ ಹೆಚ್ಚು ಮಾಡಿದೆ. ಅಷ್ಟಕ್ಕೂ ಪವಿತ್ರಾಗೌಡ ದರ್ಶನ್ ನಂಬರ್ಗಾಗಿ ದುಂಬಾಲು ಬಿದ್ರಾ? ಕಟ ಕಟೆಯಲ್ಲಿ ಅಕ್ಕ ಪಕ್ಕವೇ ನಿಂತಿದ್ರಾ? ಏನೇನಾಯ್ತು ಅನ್ನೋ ಕಂಪ್ಲೀಟ್ ಕಹಾನಿ ಇಲ್ಲಿದೆ.
ರೇಣುಕಾಸ್ವಾಮಿ ಕೇಸ್ನಿಂದ ದರ್ಶನ್ ಬಾಳಲ್ಲಿ ಬಿರುಗಾಳಿಯೊಂದು ನುಸುಳಿ ಅಲ್ಲೋಲ ಕಲ್ಲೋಲವಾಗಿ ಎಲ್ಲವೂ ತಣ್ಣಗಾಗಿದೆ. ಪತ್ನಿ ವಿಜಯಲಕ್ಷ್ಮಿ ಕೂಡ ದರ್ಶನ್ ಪಟಾಲಂಗೆ ಕತ್ತರಿ ಹಾಕಿ ಗಂಡನನ್ನ ಸರಿದಾರಿಗೆ ತರೋ ಪ್ರಯತ್ನ ಮಾಡಿದ್ರು. ಇದೇ ಖುಷಿಯಲ್ಲೇ ದರ್ಶನ್ ಮದುವೆ ವಾರ್ಷಿಕೋತ್ಸವವನ್ನ ಸಡಗರ ಸಂಭ್ರಮದಲ್ಲಿ ಆಚರಿಸಿದ್ರು. ಆದ್ರೆ ಈ ಸಂಭ್ರಮದ ಮರು ದಿನವೇ ದರ್ಶನ್ ಮತ್ತು ಪವಿತ್ರಾಗೌಡ ಮತ್ತೆ ಮುಖಾಮುಖಿಯಾಗಿದ್ದಾರೆ.
ದರ್ಶನ್ ಗೆಳತಿ ಪವಿತ್ರಾಗೌಡರಿಂದ ದೂರಾಗಿ ಪತ್ನಿ, ಮಗ, ಶೂಟಿಂಗ್ ಅಂತ ಬ್ಯುಸಿಯಾಗಿದ್ರು. ಅತ್ತ ಪವಿತ್ರಗೌಡ ಕೂಡ ದೇವಸ್ಥಾನಗಳನ್ನೆಲ್ಲ ಸುತ್ತಿ ಬಂದು ತನ್ನ ಬ್ಯುಸಿನೆಸ್ ರೀ ಲಾಂಚ್ ಮಾಡಿದ್ರು. ಆದ್ರೀಗ ದರ್ಶನ್ ಮತ್ತು ಪವಿತ್ರಗೌಡ ಮತ್ತೆ ಮುಖಾಮುಖಿಯಾಗಿದ್ದಾರೆ. ಅಷ್ಟೆೇ ಅಲ್ಲ ಇಬ್ಬರ ನಂಬರ್ ಎಕ್ಸ್‌ಚೇಂಜ್ ಆಗಿ ಮಾತುಕತೆ ಕೂಡ ನಡೆದಿದೆ. ಈ ಹಿಂದೆ ದರ್ಶನ್, ಪವಿತ್ರಾ ಒಟ್ಟಿಗೆ ವಿಚಾರಣೆಗೆ ಬಂದಿದ್ರು ಇಬ್ಬರ ಮಧ್ಯೆ ಮಾತಿಲ್ಲ, ಕತೆಯಿಲ್ಲ.. ನಾನಲ್ಲಿ ಅವನಲ್ಲಿ ಅನ್ನೋ ಪರಿಸ್ಥಿತಿ ಇತ್ತು.
ದರ್ಶನ್ ಮತ್ತು ವಿಜಯಲಕ್ಷ್ಮಿ ಆ್ಯನಿವರ್ಸರಿ ಸಂಭ್ರಮ ಮುಗಿದ ಮರು ದಿನವೇ ಇಬ್ಬರು ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಮಾತ್ರವಲ್ಲ ಇಬ್ಬರ ಮಧ್ಯೆ ನಡೆದ ಮಾತುಕತೆ ದಾಸನ ಅಭಿಮಾನಿಗಳ ದುಗಡ ಹೆಚ್ಚುವಂತೆ ಮಾಡಿದೆ. ಅಷ್ಟಕ್ಕೂ ದರ್ಶನ್ ಮತ್ತು ಪವಿತ್ರಾಗೌಡ ಮದ್ಯೆ ನಡೆದ ಮಾತುಕತೆ ಏನು? ಕೋರ್ಟ್‌ನಲ್ಲಿ ಏನೇನ್ ಆಯ್ತು ಅಂತ ಹೇಳ್ತೀವಿ.
ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು
A3 ಪವನ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಹಾಜರು
2024ರಲ್ಲಿ ಅತಿ ಹೆಚ್ಚು ಸುದ್ದಿ ಸದ್ದು ಮಾಡಿದ್ದೇ ಈ ರೇಣುಕಾಸ್ವಾಮಿ ಕೇಸ್. ದರ್ಶನ್ ಮತ್ತು ಗೆಳತಿ ಪವಿತ್ರಾಗೌಡ ಸೇರಿ 17 ಜನ ಜೈಲು ಸೇರಿ ಜಾಮೀನು ಪಡೆದು ಆಚೆ ಬಂದಿದ್ದಾರೆ. ಆದ್ರೆ ಕೇಸ್ ವಿಚಾರಣೆ ಇನ್ನೂ ನಡೀತಿದೆ. ಈ ಮಧ್ಯೆ ಕಾಮಾಕ್ಷಿ ಪಾಳ್ಯ ಪೊಲೀಸರು ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಹೀಗಾಗಿ ಮಂಗಳವಾರ ದರ್ಶನ್ ಮತ್ತು ಪವಿತ್ರಾಗೌಡ ಸೇರಿ 17 ಜನ ಕೊಲೆ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ರು. ಆದ್ರೆ ಈ ಟೈಮ್ನಲ್ಲಿ ಯಾರೂ ಉಹಿಸಲಾರದಂತ ಶಾಕಿಂಗ್ ಘಟನೆ ನಡೆದಿರೋದು ದಾಸನ ಅಭಿಮಾನಿಗಳ ಕಿವಿಯನ್ನ ನೆಟ್ಟಗೆ ಮಾಡಿದೆ.
ಕೋರ್ಟ್‌ನಲ್ಲಿ ದರ್ಶನ್, ಪವಿತ್ರಾ!
ಕೋರ್ಟ್‌ಗೆ ಕಾಮಾಕ್ಷಿ ಪಾಳ್ಯ ಪೊಲೀಸರು ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಸಿದ್ದ ಕಾರಣ, ಆರೋಪಿಗಳ ವಿರುದ್ಧ ಹೆಚ್ಚುವರಿ ಸಾಕ್ಷ್ಯಗಳನ್ನ ಉಲ್ಲೇಖ ಮಾಡಲಾಗಿತ್ತು. ಇದೇ ಕಾರಣಕ್ಕೆ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ರು. A3 ಪವನ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ರು. ಬಿಳಿ ಸೀರೆಯಲ್ಲಿ ಪವಿತ್ರಾ ಕೋರ್ಟ್‌ಗೆ ಎಂಟ್ರಿ ಕೊಟ್ಟಿದ್ರೆ, ಕಪ್ಪು ಟೀ ಶರ್ಟ್ನಲ್ಲಿ ಕೋರ್ಟ್‌ಗೆ ದರ್ಶನ್ ಹಾಜರಾಗಿದ್ರು. ಕೊನೆಗೆ ಪ್ರಕರಣದ ವಿಚಾರಣೆ ನಡೆಸಿದ್ದ ಜಡ್ಜ್ ವಿಚಾರಣೆಯನ್ನ ಜುಲೈ 10 ಕ್ಕೆ ಮುಂದೂಡಲಾಗಿದೆ.
ಕಟಕಟೆಯಲ್ಲಿ ಅಕ್ಕ-ಪಕ್ಕ ನಿಂತಿದ್ದ ದರ್ಶನ್, ಪವಿತ್ರಾ!
ಕೋರ್ಟ್‌ಗೆ ಮೊದಲು ಪವಿತ್ರಗೌಡ ಎಂಟ್ರಿ ಕೊಟ್ಟಿದ್ರೆ, ಬಳಿಕ ದರ್ಶನ್ ಎಂಟ್ರಿ ಕೊಟ್ಟಿದ್ರು. ಕೋರ್ಟ್ ಹಾಲ್ನಲ್ಲಿ ಆರೋಪಿಗಳ ಹಾಜರಾತಿ ತೆಗೆದುಕೊಳ್ಳುವವರೆಗೂ ದರ್ಶನ್ ಮತ್ತು ಪವಿತ್ರಾ ದೂರ ದೂರವೇ ಇದ್ರಂತೆ. ಕೋರ್ಟ್ ಹಾಲ್ ಒಳಗೆ ಪವಿತ್ರಗೌಡ ನಿಂತಿದ್ರೆ, ಹೊರಗಡೆ ದರ್ಶನ್ ನಿಂತಿದ್ರು.
ಆದ್ರೆ, ಈ ಟೈಮ್ನಲ್ಲಿ ನ್ಯಾಯಾದೀಶರು A1 ಪಕ್ಕ ನಿಲ್ಲುವಂತೆ ಸೂಚಿಸಿದ್ರಂತೆ. ಈ ಟೈಮ್ನಲ್ಲೂ ದರ್ಶನ್ ಸ್ವಲ್ಪ ಹಿಂಜರಿದ್ರು ಕೊನೆಗೆ ಜಡ್ಜ್ ಮತ್ತೊಮ್ಮೆ ಸೂಚಿಸಿದ್ಮೇಲೆ ದರ್ಶನ್ ಮತ್ತು ಪವಿತ್ರಾ ಇಬ್ಬರು ಅಕ್ಕಪಕ್ಕವೇ ಕಟ, ಕಟೆಯಲ್ಲಿ ಜೊತೆಯಾಗಿ ನಿಂತಿದ್ರಂತೆ.
ಇದಾದ ಮೇಲೆ ಐಪಿಸಿ ಸೆಕ್ಷನ್ 302, ಕೊಲೆ, 364, ಕಿಡ್ನ್ಯಾಪ್ ಹಾಗೂ 201, ಸಾಕ್ಷಿನಾಶ ಕೇಸ್ ಇದೆ. ನೀವು ಇದನ್ನ ಒಪ್ಪಿಕೊಳ್ಳುವಿರಾ ಎಂದು ನ್ಯಾಯಾಧೀಶರು ಕೇಳಿದರು. ಇಲ್ಲ ಸ್ವಾಮಿ.. ಇದೆಲ್ಲಾ ಸುಳ್ಳು, ವಿಚಾರಣೆ ನಡೆಯಲಿ ಅಂತ ನಿವೇದನೆ ಮಾಡಿದ ಬಳಿಕ ಜುಲೈ 10ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಗಿತ್ತು.
ನಂಬರ್ ಕೊಡು ಅಂತಾ ದರ್ಶನ್ ದುಂಬಾಲು ಬಿದ್ರಾ ಪವಿತ್ರಾ?
ಕೋರ್ಟ್‌ಲ್ಲಿ ನಡೆದಿದ್ದೇನು? ಲಿಫ್ಟಲ್ಲಿ ಆಗಿದ್ದೇನು? ನಂಬರ್ ಕೊಟ್ರಾ?
ದರ್ಶನ ಪವಿತ್ರಾ ಮುಖಾಮುಖಿಯಾಗಿದ್ರೂ ಇಬ್ಬರ ಮಧ್ಯೆ ಮಾತುಕತೆ ನಡೆದು ತಿಂಗಳುಗಳೇ ಆಗಿವೆ. ಪತ್ನಿ ವಿಜಯಲಕ್ಷ್ಮಿ ದರ್ಶನ್ ಸಾಮ್ರಾಜ್ಯದ ಉಸ್ತುವಾರಿ ತಗೊಂಡು ಹಳೆ ಗ್ಯಾಂಗ್ ಸಂಪರ್ಕ ಕಟ್ ಮಾಡಿ, ಹಳೆ ನಂಬರ್ ಕೂಡ ಡಿಲೀಟ್ ಮಾಡಿಸಿದ್ರು. ಹಳೆ ಪಟಾಲಂಗಳಿಂದ ಗಂಡನ ದೂರ ಮಾಡಿಸಿ ದರ್ಶನ್ ಬದುಕನ್ನ ತಳಹದಿಗೆ ತರೋ ಪ್ರಯತ್ನವನ್ನ ವಿಜಯಲಕ್ಷ್ಮಿ ಮಾಡಿದ್ರು.
ರೇಣುಕಾಸ್ವಾಮಿ ಕೇಸ್ ಬಳಿಕ ಪವಿತ್ರಾಗೌಡ ಮತ್ತು ದರ್ಶನ್ ನಡುವಿನ ಗೆಳೆತನ ಹಳಸಿದೆ. ಆದ್ರೀವತ್ತು ಕೋರ್ಟ್‌ನಲ್ಲಿ ನಡೆದ ಘಟನೆ ಈ ಎಲ್ಲಾ ಉಹೆಗಳನ್ನ ಸುಳ್ಳಾಗಿಸಿದೆ. ಪವಿತ್ರಾ ಗೌಡ, ಮತ್ತೆ ದರ್ಶನ್ ನಂಬರ್ ಪಡೆದುಕೊಂಡಿದ್ದಾರೆ. ಕೋರ್ಟ್ ಹಾಲ್ ಒಳಗೆ ದರ್ಶನ್ ಗಪ್ ಚುಪ್ ಆಗಿದ್ರು, ಆದರೆ ಲಿಫ್ಟ್‌ನಲ್ಲಿ ನಟ ದರ್ಶನ್‌ಗೆ ಪವಿತ್ರಾಗೌಡ ದುಂಬಾಲು ಬಿದ್ದು ಮಾತನಾಡಿಸಿದ್ದಾರಂತೆ. ಕೈ ಹಿಡಿದು ಫೋನ್ ನಂಬರ್ ನೀಡುವಂತೆ ಒತ್ತಾಯ ಮಾಡಿದ್ರಂತೆ. ಕೊನೆಗೆ ದರ್ಶನ್ ತನ್ನ ಫೋನ್ ನಂಬರ್ ಅನ್ನ ಡಯಲ್ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ದರ್ಶನ್ ನಂಬರ್ಗಾಗಿ ಪವಿತ್ರಾ ದುಂಬಾಲು!
ಕೋರ್ಟ್‌ನಲ್ಲಿ ವಿಚಾರಣೆ ಮುಗಿಸಿ ದರ್ಶನ್ ಮತ್ತು ಪವಿತ್ರಗೌಡ ಒಂದೇ ಲಿಫ್ಟ್ ಹತ್ತಿದ್ರು. ಈ ಟೈಮ್ನಲ್ಲಿ ದರ್ಶನ್‌ಗೆ ನಂಬರ್ ಕೊಡುವಂತೆ ದುಂಬಾಲು ಬಿದ್ದಿದ್ದ ಪವಿತ್ರಾಗೌಡ ಅವರು ನಂಬರ್ ಬೇಕು ಅಂತ ದರ್ಶನ್ ಕೈ ಹಿಡಿದು ಎಳೆದಿದ್ದಾರಂತೆ. ಕೊನೆಗೆ ಪವಿತ್ರಾಗೌಡ ಮೊಬೈಲ್ ತಗೊಂಡು ನಂಬರ್ ಡಯಲ್ ಮಾಡಿದ್ದ ದರ್ಶನ್, ಕಾಲ್ ಮಾಡಿ ಪವಿತ್ರಾಗೌಡಗೆ ವಾಪಸ್ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಯಾದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ದೂರ ಆಗಿದ್ದರು. ಪವಿತ್ರಾ ಜೊತೆಗೆ ಸ್ವತಃ ದರ್ಶನ್ ಕೂಡ ಅಂತರ ಕಾಯ್ದುಕೊಂಡಿದ್ದರು. ಈ ಹಿಂದೆ ಕೋರ್ಟ್‌ಗೆ ಆಗಮಿಸಿದಾಗ ಕೂಡ ಪವಿತ್ರಾ ಜೊತೆ ದರ್ಶನ್ ಮಾತನಾಡುತ್ತಿರಲಿಲ್ಲ. ಆದ್ರೀಗ ಇಬ್ಬರ ಮದ್ಯೆ ನಂಬರ್ ಎಕ್ಸ್‌ಚೇಂಜ್ ಆಗಿರೋದು ದಾಸನ ಅಭಿಮಾನಿಗಳನ್ನ ಆತಂಕಕ್ಕೆ ದೂಡಿರೋದಂತು ಸುಳ್ಳಲ್ಲ.
ಇದನ್ನೂ ಓದಿ: ಪವಿತ್ರಾಗೌಡ ಕೈ ಹಿಡಿದುಕೊಂಡು ಹೊರಗೆ ಬಂದ ದರ್ಶನ್.. ಕೋರ್ಟ್‌ನಲ್ಲಿ ಅಸಲಿಗೆ ಆಗಿದ್ದೇನು?
ದರ್ಶನ್ ಕೈ ಹಿಡಿದುಕೊಂಡೆ ಬಂದ ಪವಿತ್ರಾಗೌಡ?
ಕೇವಲ ನಂಬರ್ ಎಕ್ಸ್‌ಚೇಜ್ ಮಾತ್ರವಲ್ಲ. ವಿಚಾರಣೆ ಮುಗಿಸಿ ಒಂದೇ ಲಿಫ್ಟ್‌ನಲ್ಲಿ ಜೊತೆಯಾಗಿ ಬಂದಿದ್ದ ಪವಿತ್ರಾಗೌಡ ಕೋರ್ಟ್ನಿಂದ ಆಚೆ ಬರುವಾಗ್ಲೂ ಕೈ, ಕೈ ಹಿಡಿದು ಜೊತೆಯಾಗಿ ಬಂದಿದ್ರು ಎನ್ನಲಾಗಿದೆ. ಈಗ ಇದೇ ವಿಚಾರಗಳು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದು ಎಲ್ಲ ಸರಿ ಹೋಯ್ತು ಅನ್ನುವಾಗ್ಲೇ ಇದೇನಪ್ಪಾ ಹೀಂಗಾಯ್ತಲ್ಲ ಅಂತ ದಿಗಿಲು ಬಿದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ