/newsfirstlive-kannada/media/post_attachments/wp-content/uploads/2024/06/darshan-wife.jpg)
ಮೈಸೂರು: ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ನಟ ದರ್ಶನ್ ಅಂಡ್ ಗ್ಯಾಂಗ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಕೇಸ್ ಬಗ್ಗೆ ಪೊಲೀಸ್ ಅಧಿಕಾರಿಗಳು ದಿನದಿಂದ ದಿನಕ್ಕೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದರ ಮಧ್ಯೆ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ಮೆಗ್ಗರ್ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!
ಹೌದು, ನಟ ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿಗೂ ಈ ಕೇಸ್ನಲ್ಲಿ ಸಂಕಷ್ಟ ಎದುರಾಗಿದೆ. ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ ಕೇಸ್ಗೆ ಸಂಬಂಧಿಸಿದ್ದಂತೆ FIR ದಾಖಲಾಗಿ ನೋಟಿಸ್ ಕೊಟ್ಟರು ಕೂಡ ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. ಒಂದಲ್ಲಾ ಎರಡಲ್ಲಾ ಒಟ್ಟು ಐದು ನೋಟಿಸ್ ನೀಡಿದ್ದರೂ ನಟ ದರ್ಶನ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಈ ಕೇಸ್ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ A1, ಪ್ರಾಪರ್ಟಿ ಮ್ಯಾನೇಜರ್ ನಾಗರಾಜ್ A2 ಹಾಗೂ ನಟ ದರ್ಶನ್ A3 ಸ್ಥಾನದಲ್ಲಿದ್ದಾರೆ.
ನಟ ದರ್ಶನ್ ತೋಟವು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಇದೆ. ಈ ಪ್ರಕರಣದಲ್ಲಿ ದರ್ಶನ್ರನ್ನು ಬಂಧಿಸದೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ನಿಯಮಗಳ ಪ್ರಕಾರ ಬಾರ್ ಹೆಡೆಡ್ ಗೂಸ್ ಸಾಕುವುದು ಕಾನೂನು ಬಾಹಿರವಾಗಿದೆ. ಆದರೆ ಕಾನೂನು ಬಾಹಿರವಾಗಿ ವಿಶಿಷ್ಟ ಪ್ರಬೇಧದ ಬಾತುಕೋಳಿ ಸಾಕಿದ್ದರಿಂದ ನಟ ದರ್ಶನ್ನನ್ನು ಅರೆಸ್ಟ್ ಮಾಡಬೇಕಿತ್ತು. ಆದರೆ ಸೆಲೆಬ್ರಿಟಿ ಆಗಿದ್ದರಿಂದ ವಿಚಾರಣೆಗೆ ಅವಕಾಶ ನೀಡಲಾಗಿತ್ತು. ನಟ ದರ್ಶನ್ ತಲೆಮರೆಸಿಕೊಳ್ಳದ ಕಾರಣ ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ಬಂಧಿಸಿರಲಿಲ್ಲ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಈ ಕೇಸ್ ಅನ್ನು ಚುರುಕುಗೊಳಿದೆ. ಜೊತೆಗೆ 2 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಕೈಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ