/newsfirstlive-kannada/media/post_attachments/wp-content/uploads/2024/06/DARSHAN-JAIL-2-1.jpg)
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ ನಟ ದರ್ಶನ್ ತಮಗೆ ಜೈಲೂಟ ಬೇಡ ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್​ ಮನೆಯೂಟದ ಅರ್ಜಿಯನ್ನು ವಜಾ ಮಾಡಿ ಮಹತ್ವದ ಆದೇಶ ನೀಡಿದೆ.
ನನಗೆ ಜೈಲೂಟ ಸೇವಿಸಲು ಆಗುತ್ತಿಲ್ಲ. ಬದಲಾಗಿ ಮನೆಯೂಟಕ್ಕೆ ಅವಕಾಶ ನೀಡುವಂತೆ ನಟ ದರ್ಶನ್​ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ವಾದ, ಪ್ರತಿವಾದ ಆಲಿಸಿದ 24ನೇ ಎಸಿಎಂಎಂ ಕೋರ್ಟ್​ನಿಂದ ಅರ್ಜಿಯನ್ನು ವಜಾ ಮಾಡಿದೆ. ಈ ಹಿಂದೆ ನಟ ದರ್ಶನ್ ಪರ ವಕೀಲರು ಜೈಲೂಟದಿಂದ ತಮ್ಮ ಕಕ್ಷಿದಾರರು ತೂಕ ಇಳಿಕೆಯಾಗಿದ್ದಾರೆ. ಅವರಿಗೆ ಮನೆಯೂಟಕ್ಕೆ ಅವಕಾಶ ನೀಡಬೇಕು. ಜೊತೆಗೆ ಓದೋದಕ್ಕೆ ಪುಸ್ತಕ ಹಾಸಿಗೆ ಅವಕಾಶ ನೀಡಬೇಕು ಅಂತ ನ್ಯಾಯಪೀಠವನ್ನು ಕೋರಿದ್ದರು. ಆದರೆ ಇಂದು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ಆ ಅರ್ಜಿಯನ್ನು ವಜಾಗೊಳಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ.
ಮನೆಯೂಟದ ಅರ್ಜಿ ವಜಾ ಆಗಲು ಕಾರಣ ಏನು?
- ಕಾರಣ 01: ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021 ರ ಸೆಕ್ಷನ್ 728 ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ.
- ಕಾರಣ 02: ಜೈಲು ಅಧಿಕಾರಿಗಳ ವರದಿಯಲ್ಲಿ ಮನೆಯೂಟ ಅವಶ್ಯಕತೆ ಕಾಣಿಸ್ತಿಲ್ಲ. ದರ್ಶನ್​​ ಊಟದ ಬಗ್ಗೆ ವರದಿ ನೀಡಿದ್ದ ಜೈಲಿನ ಅಧಿಕಾರಿಗಳು.
- ಕಾರಣ 03: ಮನೆಯೂಟ ಪೂರೈಕೆ ಸಂಬಂಧ ಪೂರಕವಾದ ಪ್ರಮಾಣ ಪತ್ರಗಳಿಲ್ಲ. ಮನೆ ಊಟದ ಅವಶ್ಯಕತೆ ಸಂಬಂಧ ವೈದ್ಯಕೀಯ ಪ್ರಮಾಣಪತ್ರಗಳಿಲ್ಲ.
ಈ ಮೇಲಿನ ಮೂರು ಅಂಶಗಳನ್ನು ಇಟ್ಟುಕೊಂಡು ನಟ ದರ್ಶನ್ ಅವರ ಅರ್ಜಿಯನ್ನು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ವಜಾ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ