/newsfirstlive-kannada/media/post_attachments/wp-content/uploads/2025/05/Darshan-pavithra-gowda-14.jpg)
ನಟ ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಬ್ಯಾಡ್ ಮಸೇಜ್ಗಳನ್ನು ಕಳಿಸಿದ್ದ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ ಹೋಗಬೇಕಾಯಿತು. ಈ ಕೇಸ್ನ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಪೊಲೀಸರು ಈಗ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಎಲ್ಲಾ 17 ಆರೋಪಿಗಳ ವಿರುದ್ಧದ ಸಾಕ್ಷ್ಯಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ಇಂದು ಕಾಮಾಕ್ಷಿಪಾಳ್ಯ ಪೊಲೀಸರು 57ನೇ ಸಿಟಿ ಸಿವಿಲ್ ಕೋರ್ಟ್‌ಗೆ ಹೆಚ್ಚುವರಿ ಜಾರ್ಜ್ಶೀಟ್ ಸಲ್ಲಿಕೆ ಸಲ್ಲಿಸಿದ್ರು. ಈ ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯಗಳ ಬಗ್ಗೆ ಪೊಲೀಸರು ಉಲ್ಲೇಖ ಮಾಡಿದ್ದಾರೆ. ನಮಗೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಿಕ್ಕಿಲ್ಲ. ಅದನ್ನು ಓಪನ್ ಕೋರ್ಟ್ನಲ್ಲಿ ಸಲ್ಲಿಕೆ ಮಾಡಿಲ್ಲ ಎಂದು ಸರ್ಕಾರಿ ಪರ ವಕೀಲರು ವಾದಿಸಿದ್ರು. ಹೀಗಾಗಿ ವಿಚಾರಣೆಯನ್ನು ನ್ಯಾಯಾಧೀಶರು ಜುಲೈ 10ಕ್ಕೆ ಮುಂದೂಡಿಕೆ ಮಾಡಿದ್ರು. ಇನ್ನು ತಮ್ಮ ಬಳಿ ಸೀಜ್ ಮಾಡಿದ್ದ ಹಣ ಬಿಡುಗಡೆ ಮಾಡುವಂತೆ ದರ್ಶನ್ ಅರ್ಜಿ ಸಲ್ಲಿಸಿದ್ರು. ಇದರ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಕೋರ್ಟ್ ಹಾಲ್ನಲ್ಲಿ ಅಕ್ಕ-ಪಕ್ಕ ನಿಂತ ಪವಿತ್ರಾ ಗೌಡ ದರ್ಶನ್
ಇವತ್ತು ವಿಚಾರಣೆ ಇದ್ದ ಕಾರಣ, 3ನೇ ಆರೋಪಿ ಪವನ್ ಹೊರತುವಪಡಿಸಿ ಉಳಿದೆಲ್ಲ ಆರೋಪಿಗಳು ಕೋರ್ಟ್‌ಗೆ ಹಾಜರಾಗಿದ್ರು. ಎ1 ಆರೋಪಿ ಪವಿತ್ರಾಗೌಡ ಮೊದಲೇ ಕೋರ್ಟ್‌ಗೆ ಬಂದ್ರೆ. ನಂತರ ಕೋರ್ಟ್‌ಗೆ ಬಂದ ದರ್ಶನ್. ಪವಿತ್ರಾ ಗೌಡಳಿಂದ ಅಂತರವನ್ನು ಕಾಯ್ದುಕೊಂಡಿದ್ರು. ಆದ್ರೆ ಆರೋಪಿಗಳ ಹಾಜರಾತಿ ತೆಗೆದುಕೊಳ್ಳುವಾಗ ನ್ಯಾಯಾಧೀಶರು. ಒಂದನೇ ಆರೋಪಿ ಜೊತೆ ಬಂದು ನಿಲ್ಲುವಂತೆ ದರ್ಶನ್ಗೆ ಸೂಚಿಸಿದ್ರು. ಹೀಗಾಗಿ ನಟ ದರ್ಶನ್, ಪವಿತ್ರಾಗೌಡ ಪಕ್ಕದಲ್ಲಿ ಬಂದು ನಿಲ್ಲುವಂತಾಯ್ತು.
ದುಬಾರಿ ಟೀ ಶರ್ಟ್ ಧರಿಸಿದ್ದ ದರ್ಶನ್!
ಕೋರ್ಟ್‌ಗೆ ಹಾಜರಾದ ನಟ ದರ್ಶನ್ ಅವರು ಕಪ್ಪು ಬಣ್ಣದ ದುಬಾರಿ ಟೀ ಶರ್ಟ್ ಧರಿಸಿ ಬಂದಿದ್ದರು. ಇದು ಬರ್ಬೆರಿ (Burberry) ಅನ್ನೋ ಬ್ರಾಂಡೆಂಡ್ ಟೀ ಶರ್ಟ್ ಆಗಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ 850 ಡಾಲರ್‌ಗಳಿದೆ. 850 ಡಾಲರ್ ಅಂದ್ರೆ ಭಾರತದ ರೂಪಾಯಿ ಮೌಲ್ಯ ಬರೋಬ್ಬರಿ 72 ಸಾವಿರದ 700 ರೂಪಾಯಿಗಳಾಗಿದೆ.
ಕೋರ್ಟ್ ಒಳಗೆ ಗಪ್ಚುಪ್... ಹೊರಗೆ ಬರ್ತಿದ್ದಂತೆ ದರ್ಶನ್ಗೆ ದುಂಬಾಲು
ಲಿಫ್ಟ್ ಒಳಗೆ ಕಾಡಿ ಬೇಡಿ ಹಠ ಮಾಡಿ ನಂಬರ್ ತೆಗೆದುಕೊಂಡ ಪವಿತ್ರಾಗೌಡ
ಕೋರ್ಟ್ ಹಾಲ್ನಲ್ಲಿ ನಟ ದರ್ಶನ್ ಪಕ್ಕದಲ್ಲಿ ಬಂದು ನಿಂತಿದ್ದು ಪವಿತ್ರಾಗೌಡಗೆ ಸಂತೋಷವಾಗಿತ್ತು.. ನ್ಯಾಯಾಧೀಶರ ಮುಂದೆ ಗಪ್ಚುಕ್ ಆಗಿದ್ದ ಪವಿತ್ರಾಗೌಡ, ವಿಚಾರಣೆ ಬಳಿಕ ಹೊರಗೆ ಬರ್ತಿದ್ದಂತೆ. ಗೆಳೆಯ ದರ್ಶನ್ನ ದುಂಬಾಲು ಬಿದ್ದಿದ್ದಾರೆ. ರೇಣುಕಾಸ್ವಾಮಿ ಕೇಸ್ನಲ್ಲಿ ಲಾಕ್ ಆಗಿ, ನರಕಯಾತನೆ ಅನುಭವಿಸಿದ್ದ ದರ್ಶನ್, ಜೈಲಿಂದ ಹೊರಗೆ ಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ ಜೊತೆ ಖುಷಿ ಖುಷಿಯಾಗಿದ್ದಾರೆ. ಮೊನ್ನೆಯಷ್ಟೇ ವಿವಾಹವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.. ಇವತ್ತು ಕೋರ್ಟ್ನಲ್ಲಿ ಅಪರೂಪದ ಘಟನೆ ನಡೆದು ಹೋಗಿದೆ.
ಕೋರ್ಟ್ ಹಾಲ್ನಿಂದ ಹೊರಗೆ ಬರುವಾಗ ಪವಿತ್ರಾಗೌಡ ನಟ ದರ್ಶನ್ರ ಕೈ ಹಿಡಿದುಕೊಂಡು ಬಂದಿದ್ದಾರೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲ, ಕೋರ್ಟ್ ಒಳಗೆ ದೂರ ದೂರ ಇದ್ದವರು.. ಲಿಫ್ಟ್ ಒಳಗೆ ಮಾತ್ರ ಜೊತೆ ಜೊತೆಯಾಗಿ ಹೋಗಿದ್ದಾರೆ.
ಲಿಫ್ಟ್ ಒಳಗೆ ಪವಿತ್ರಾಗೌಡ ನಟ ದರ್ಶನ್ಗೆ ದುಂಬಾಲು ಬಿದ್ದಿದ್ದಾರೆ. ಫೋನ್ ನಂಬರ್ ಅನ್ನು ನೀಡುವಂತೆ ಪಟ್ಟು ಹಿಡಿದಿದ್ದಾರೆ. ನಟ ದರ್ಶನ್ ಮೊದಲು ನಂಬರ್ ನೀಡಲು ನಿರಾಕಿಸಿದ್ದಾರೆ. ಆದ್ರೆ ಪಟ್ಟು ಬಿಡದ ಪವಿತ್ರಾಗೌಡ, ದರ್ಶನ್ರ ಕೈಹಿಡಿದು ಒತ್ತಾಯ ಮಾಡಿದ್ದಾರೆ. ಅಷ್ಟೇ ಅಲ್ಲ, ದರ್ಶನ್ ಕೈಗೆ ತನ್ನ ಮೊಬೈಲ್ ಅನ್ನು ಕೊಟ್ಟಿದ್ದಾರೆ. ಗೆಳತಿ ಪವಿತ್ರಾಳ ಒತ್ತಾಯಕ್ಕೆ ಕರಗಿದ ದಾಸ, ಆಕೆಯ ಮೊಬೈಲ್ನಲ್ಲಿ ತನ್ನ ನಂಬರ್ ಅನ್ನು ಡಯಲ್ ಮಾಡಿಕೊಟ್ಟಿರುವ ಬಗ್ಗೆ ತಿಳಿದು ಬಂದಿದೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ಮತ್ತೆ ಅಕ್ಕ-ಪಕ್ಕ.. ಬರೀ ಫೋನ್ ನಂಬರ್ ಒಂದೇ ಎಕ್ಸ್‌ಚೇಂಜ್ ಆಗಿಲ್ಲ; ಏನೇನಾಯ್ತು?
ಜೈಲಿನಿಂದ ಹೊರ ಬಂದ ಬಳಿಕ.. ನಟ ದರ್ಶನ್ ಮತ್ತು ಪವಿತ್ರಾಗೌಡ ಇಬ್ಬರು ತಮ್ಮ ಪಾಡಿಗೆ ತಾವು ಎಂಬಂತಿದ್ರು. ದರ್ಶನ್ ಡೆವಿಲ್ ಶೂಟಿಂಗ್ ಜೊತೆ ಪತ್ನಿ ವಿಜಯಲಕ್ಷ್ಮಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿದ್ದರು. ಪವಿತ್ರಾಗೌಡ ಮಗಳ ಜೊತೆ ಹಾಗೂ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದ್ರೀಗ ಮೊಬೈಲ್ ನಂಬರ್ ನೆಪದಲ್ಲಿ ಮತ್ತೆ ಹಳೆ ಗೆಳೆತನವನ್ನು ನೆನಪಿಸಿಕೊಳ್ಳಲು ಮುಂದಾದ್ರಾ ಎಂಬ ಅನುಮಾನ ಅಭಿಮಾನಿಗಳ ಮನದಲ್ಲಿ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ