/newsfirstlive-kannada/media/post_attachments/wp-content/uploads/2025/04/Darshan-Devil-film-Shooting-1.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ರಿಲೀಫ್ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಶಾಕ್ ಆಗಬೇಡಿ ಇದು ರಿಯಲ್ ಅಲ್ಲ ಡೆವಿಲ್ ಸಿನಿಮಾದಲ್ಲಿರುವ ದರ್ಶನ್ ಹೊಸ ಅವತಾರ.
ಡೆವಿಲ್ ಸಿನಿಮಾದಲ್ಲಿ ನಟ ದರ್ಶನ್ ಅವರು ಮುಖ್ಯಮಂತ್ರಿ ಆಗಿದ್ದಾರೆ. ಕರುನಾಡ ಪ್ರಜಾ ಪಕ್ಷದ ಮೂಲಕ ದರ್ಶನ್ ಮುಖ್ಯಮಂತ್ರಿ ಆಗಿದ್ದು, ಡೆವಿಲ್ ಸಿನಿಮಾದ ಶೂಟಿಂಗ್ ಸೆಟ್‌ನಲ್ಲಿ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಡೆವಿಲ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಹಾಕಿರುವ ಮುಖ್ಯಮಂತ್ರಿ ಆದ ನಟ ದರ್ಶನ್ ಫೋಟೋ ಫುಲ್ ವೈರಲ್ ಆಗಿದೆ.
ನಟ ದರ್ಶನ್ ಅವರು ಡೆವಿಲ್ ಸಿನಿಮಾದಲ್ಲಿ ಕರುನಾಡ ಪ್ರಜಾ ಪಕ್ಷದ ಮೂಲಕ ಇಡೀ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರ ಹೆಸರು ಧನುಶ್ ರಾಜಶೇಖರ್.
ಇದನ್ನೂ ಓದಿ: ಮಲತಾಯಿ ಮಸಲತ್ತು? ಮುತ್ತಪ್ಪ ರೈ 2ನೇ ಪತ್ನಿ ಮೇಲೆ ಅನುಮಾನ ಯಾಕೆ? ಅಸಲಿಗೆ ಆಗಿದ್ದೇನು?
ಮುಖ್ಯಮಂತ್ರಿ ಶ್ರೀ ಧನುಶ್ ರಾಜಶೇಖರ್ ಪಾತ್ರದಲ್ಲಿ ನಟ ದರ್ಶನ್ ಅಭಿನಯಿಸುತ್ತಿದ್ದ, ಪ್ರಕಾಶ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ