/newsfirstlive-kannada/media/post_attachments/wp-content/uploads/2024/09/Darshan-Bellary-Jail-9.jpg)
ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಜಾಮೀನು​ ಮೂಲಕ ಹೊರಬರಲು ಪರದಾಡುತ್ತಿದ್ದಾರೆ. ಆದರೆ ಜೈಲಲ್ಲಿರುವ ಕೊಲೆ ಆರೋಪಿ ದರ್ಶನ್​​ಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದ್ದು, ಇದರಿಂದ ತಪಾಸಣೆಯನ್ನು ನಿರಾಕರಿಸಿದ್ದಾರೆ.
ದರ್ಶನ್​ ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೋವು ಹೆಚ್ಚಾಗಿದ್ದರಿಂದ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಜೈಲಿನಲ್ಲೇ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸದ್ಯ ಆರೋಪಿ ದರ್ಶನ್​ಗಿರುವ ಬೆನ್ನು ನೋವಿಗೆ ಸರ್ಜರಿ ಮಾಡಿಸಲೇಬೇಕಿದೆ.
ಇದನ್ನೂ ಓದಿ: ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ.. ತಪ್ಪಿನ ಅರಿವಾಗಿ ಕ್ಷಮೆ ಕೋರಿದ ಸಚಿವೆ ಕೊಂಡ ಸುರೇಖಾ
ದರ್ಶನ್​ ಬೆನ್ನಿನ ಹಿಂಭಾಗ ಊತ ಬಂದಿರುವ ಸಾಧ್ಯತೆ ಹಿನ್ನೆಲೆ ವೈದ್ಯರು ಸ್ಕ್ಯಾನ್ ಮಾಡಿಸಲು ಸೂಚನೆ ನೀಡಿದ್ದರು. ಆದರೆ ಆರೋಪಿ ದರ್ಶನ್ ಸ್ಕ್ಯಾನ್ ಮಾಡಿಸೋದನ್ನ ನಿರಾಕರಿಸಿದ್ದಾರೆ. ನಾನು ಬೆಂಗಳೂರಿಗೆ ಹೋದ ಮೇಲೆ ಸ್ಕ್ಯಾನ್ ಮಾಡಿಸ್ತೀನಿ,
ಸದ್ಯಕ್ಕೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಮಾತ್ರ ಕೊಡಿ ಸಾಕು ಎಂದು ದರ್ಶನ್ ಹೇಳಿದ್ದಾರೆ.
ಸದ್ಯ 10 ದಿನಗಳ ಮಾತ್ರೆ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. 10 ದಿನಗಳ ಬಳಿಕ MRI ಸ್ಕ್ಯಾನ್ ಮಾಡಲು ವೈದ್ಯರ ಸಲಹೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us