/newsfirstlive-kannada/media/post_attachments/wp-content/uploads/2024/06/DARSHAN_MURDER_NEW_5.jpg)
ಬೆಂಗಳೂರು: ಇಡೀ ರಾಜ್ಯಾದ್ಯಂತ ರೇಣುಕಾಸ್ವಾಮಿಯನ್ನು ನಟ ದರ್ಶನ್ ಆ್ಯಂಡ್ ಗ್ಯಾಂಗ್ ಕೊಲೆ ಮಾಡಿರುವ ಸುದ್ದಿನೇ ಹೈಲೈಟ್ನಲ್ಲಿದೆ. ಈ ಕೇಸ್ ಸಂಬಂಧ ಪವಿತ್ರಾಗೌಡ, ದರ್ಶನ್ ಸೇರಿ ಒಟ್ಟು 13 ಮಂದಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿದ್ದಾರೆ. ಆದರೆ ಪ್ರಕರಣದ ಟೆನ್ಷನ್ ತಾಳಲಾರದೇ ನಟ ದರ್ಶನ್ ಸಿಗರೇಟ್ ಕೊಡುವಂತೆ ಪೊಲೀಸರನ್ನು ಕೇಳಿದ್ರೆ ಇದಕ್ಕೆ ಪೊಲೀಸ್ರು ಕ್ಯಾರೆ ಎನ್ನುತ್ತಿಲ್ಲ.
ಅನ್ನಪೂರ್ಣೇಶ್ವರಿ ಠಾಣೆಯಲ್ಲಿರುವ ನಟ ದರ್ಶನ್ ಸಿಗರೇಟ್ ಕೊಡುವಂತೆ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿದ್ರೂ ಆರೋಪಿ ದರ್ಶನ್ ಸಿಗರೇಟ್ ಕೇಳ್ತಿದ್ದಾರೆ. ಆದರೆ ಇಲ್ಲಿ ಸಿಗರೇಟ್ ನೀಡಲು ಸಾಧ್ಯವಿಲ್ಲ ಎಂದು ದರ್ಶನ್‌ಗೆ ಪೊಲೀಸರು ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ:ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..
ನಿನ್ನೆಯಿಂದಲೂ ಊಟ ಮಾಡದ ದರ್ಶನ್ ಕೇವಲ ಜ್ಯೂಸ್ ಮತ್ತು ಮಜ್ಜಿಗೆ ಕುಡಿದು ಹಾಗೇ ಇದಾರೆ. ಊಟ ಸೇರುತ್ತಿಲ್ಲ ಎಂದು ನಿನ್ನೆ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ ಇಡ್ಲಿ ತಿಂದಿದ್ದ ದರ್ಶನ್ ಮಧ್ಯಾಹ್ನನೂ ಏನು ಊಟ ಮಾಡಿರಲಿಲ್ಲ. ಸಂಜೆ ಕೂಡ ಊಟ ಬೇಡವೆಂದು ಮಜ್ಜಿಗೆ ಕುಡಿದು ಮಲಗಿದ್ದರು. ಆದರೆ ಅರೆಸ್ಟ್ ಆಗಿರೋ ಟೆನ್ಷನ್ನಲ್ಲಿರುವ ದರ್ಶನ್ ಪೊಲೀಸರ ಬಳಿ ಸಿಗರೇಟ್ಗೆ ಬೇಡಿಕೆ ಇಟ್ಟಿದ್ದರು. ಪೊಲೀಸ್ ಠಾಣೆಯಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ ಎಂದು ಪೊಲೀಸರು ದರ್ಶನ್‌ಗೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ