ಸುಪ್ರೀಂ ಕೋರ್ಟ್​ ಕಟಕಟೆಯಲ್ಲಿ ದರ್ಶನ್​ ಸೇರಿ 7 ಆರೋಪಿಗಳ ಜಾಮೀನು ಭವಿಷ್ಯ.. ಏನಾಗುತ್ತೆ?

author-image
Bheemappa
Updated On
ಬಳ್ಳಾರಿ ಜೈಲಿನ ಹೆಸರು ಕೇಳಿಯೇ ನಡುಗಿದ ದರ್ಶನ್.. 2ನೇ ಅಂಡಮಾನ್‌ ಕಾರಾಗೃಹದಲ್ಲಿದೆ 5 ಭಯಗಳು!
Advertisment
  • ಹೈಕೋರ್ಟ್​ ನೀಡಿದ್ದ ಬೇಲ್ ರದ್ದು ಕೋರಿ ಅರ್ಜಿ ಸಲ್ಲಿಕೆ
  • ಎ1 ಪವಿತ್ರಾಗೌಡ ಒಬ್ಬರಿಗೆ ಜಾಮೀನು ರದ್ದು ಮಾಡುತ್ತಾ?
  • ಬೇಲ್ ರದ್ದು ಮಾಡಿದರೆ ಎಲ್ಲರೂ ಮತ್ತೆ ಜೈಲಿಗೆ ಹೋಗಬೇಕು

ಕೆಲವು ದಿನಗಳ ಹಿಂದಷ್ಟೇ ನಿಟ್ಟುಸಿರು ಬಿಟ್ಟಿದ ದರ್ಶನ್ ಹಾಗೂ 7 ಮಂದಿ ಆರೋಪಿಗಳಿಗೆ ಮತ್ತೆ ನಡುಕ ಶುರುವಾಗಿದೆ. ರೇಣುಕಾಸ್ವಾಮಿ ಪ್ರಕರಣದ ಎಲ್ಲಾ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಆಚೆ ಇದ್ದಾರೆ. ಈಗ ಹೈಕೋರ್ಟ್​ ನೀಡಿರುವ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಕೆಯಾಗಿದ್ದು, ದರ್ಶನ್​ಗೆ ಮತ್ತೆ ಸಂಕಷ್ಟ ಆರಂಭವಾದಂತಿದೆ.

publive-image

ದಾಸನ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೇಸಲ್ಲಿ ನಟ ದರ್ಶನ್​ಗೆ ಕೋರ್ಟ್ ರೆಗ್ಯೂಲರ್ ಜಾಮೀನು ಏನೋ ಕೊಟ್ಟಿದೆ. ಆದರೆ ಅದರ ಜೊತೆ ಜೊತೆಗೆ ಹಲವು ಷರತ್ತುಗಳನ್ನು ಕೊಟ್ಟಿತ್ತು. ಮೈಸೂರಿಗೆ ಹೋಗೋದಕ್ಕೆ ದರ್ಶನ್ ಪಡೆದಿರೋ ಅನುಮತಿ ಮುಕ್ತಾಯವಾಗಿದ್ದು, ದಾಸ ಬೆಂಗಳೂರಿಗೆ ವಾಪಾಸ್ ಆಗಬೇಕಿದೆ. ಇದರ ಬೆನ್ನಲ್ಲೇ ಮತ್ತೊಂದು ಸಂಕಷ್ಟ ಎದುರಾಗಿದೆ.

ಸದ್ಯ ಜಾಮೀನಿನ ಮೇಲೆ ಹೊರಗಿರುವ ಕೊಲೆ ಆರೋಪಿ, ನಟ ದರ್ಶನ್‌ ಮತ್ತು ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ದರ್ಶನ್‌ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ಗೆ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗಂತ ಕೇವಲ ದರ್ಶನ್ ಅಷ್ಟೇ ಅಲ್ಲ. ಇವರೊಂದಿಗೆ 7 ಮಂದಿ ಆರೋಪಿಗಳ ಜಾಮೀನು ರದ್ದು ಮಾಡುವಂತೆ ಅರ್ಜಿಯನ್ನ ಸಲ್ಲಿಸಲಾಗಿದೆ.

ವಕೀಲ ಅನಿಲ್.ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆ

ರೇಣುಕಾಸ್ವಾಮಿ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ, ಪೊಲೀಸರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಅನಿಲ್.ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು, ನಟ ದರ್ಶನ್, ಪವಿತ್ರಾಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಆರೋಪಿಗಳ ಜಾಮೀನು ರದ್ದು ಮಾಡಿವಂತೆ ಮನವಿ ಮಾಡಿದ್ದಾರೆ.

publive-image

ಇದನ್ನೂ ಓದಿ:ಮಾವೋವಾದಿಗಳ ಅಟ್ಟಹಾಸ, ಯೋಧರು ಹುತಾತ್ಮ.. ಹೇಡಿತನದ ದಾಳಿಗೆ ಪ್ರತೀಕಾರದ ಪ್ರತಿಜ್ಞೆ

ಕಳೆದ ಡಿಸೆಂಬರ್​ 13 ರಂದು ಕರ್ನಾಟಕ ಹೈಕೋರ್ಟ್​ನಿಂದ ರೇಣುಕಾಸ್ವಾಮಿ ಪ್ರಕರಣದಲ್ಲಿ ಈ 7 ಆರೋಪಿಗಳು ಜಾಮೀನು ಪಡೆದಿದ್ದರು. ಈ ಜಾಮೀನು ರದ್ದು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನೊಂದು ವಾರದೊಳಗೆ ನಡೆಯಲಿದೆ. ಸದ್ಯ ಈ ಸುದ್ದಿ ಆರೋಪಿಗಳಿಗೆ ನಡುಕ ಹುಟ್ಟಿಸಿದೆ. ಸುಪ್ರೀಂಕೋರ್ಟ್​ ಹೈಕೋರ್ಟ್​ ಆದೇಶವನ್ನ ಎತ್ತಿ ಹಿಡಿಯುತ್ತಾ ಅಥವಾ ಜಾಮೀನು ರದ್ದು ಮಾಡಿ ಆದೇಶ ಹೊರಡಿಸುತ್ತ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment