ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿ ಎಷ್ಟು ದಿನಗಳು ಆಗಿವೆ?
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ
ಜೈಲಿನ ಅನ್ನ ಬಿಟ್ಟು ಈ ಆಹಾರ ಮಾತ್ರ ತಿನ್ನುತ್ತಿರುವುದು ಏಕೆ?
ಬಳ್ಳಾರಿ: ನಟ ದರ್ಶನ್ ಅವರನ್ನ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಿ ಇಂದಿಗೆ 11 ದಿನಗಳು ಆಗುತ್ತಿವೆ. ಈ 11 ದಿನಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಜೊತೆಗೆ ದರ್ಶನ್ರನ್ನ ಬಳ್ಳಾರಿ ಜೈಲಿನಲ್ಲೇ ಪತ್ನಿ ಹಾಗೂ ಸಹೋದರ ಭೇಟಿಯಾಗಿ ಬೇಲ್ ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದರು. ಈ ಎಲ್ಲದರ ಮಧ್ಯೆ ಜೈಲಿನಲ್ಲೇ ದಾಸ ಫುಲ್ ಫಿಟ್ ಅಂಡ್ ಫೈನ್ ಆಗಿರಲು ಬಾಡಿ ಮೆಂಟೇನೆನ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ಭೇಟಿ ಮಾಡಲು ಬಳ್ಳಾರಿ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ.. ಕೈಯಲ್ಲಿ ಇದ್ದಿದ್ದು ಏನು?
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ಇದರ ನಡುವೆ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿ 11 ದಿನಗಳು ಆಗುತ್ತಿವೆ. ಜೈಲಿನಲ್ಲಿದ್ದರೂ ದರ್ಶನ್ ತಮ್ಮ ದೇಹವನ್ನು ಸದೃಢವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಬಾಡಿ ಮೆಂಟೇನೆನ್ಸ್ ಮಾಡುತ್ತಿದ್ದು ಅನ್ನ ತಿನ್ನುವುದು ಬಿಟ್ಟಿದ್ದಾರೆ. ಅನ್ನದ ಬದಲಿಗೆ ಚಪಾತಿ ಹಾಗೂ ಮುದ್ದೆ ಮಾತ್ರ ಸೇವಿಸುತ್ತಿದ್ದಾರೆ. ಇದರ ಜೊತೆಗೆ ವಿಟಮಿನ್ ಮಾತ್ರೆಗಳನ್ನು ದರ್ಶನ್ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹಾರ್ಟ್ಗೂ ಆಪತ್ತು, ಆಯಸ್ಸಿಗೂ ಕುತ್ತು.. ಬೆಚ್ಚಿ ಬೀಳಿಸಿದೆ ಹೊಸ ಅಧ್ಯಾಯ.. ಮಕ್ಕಳಿಗಂತೂ ಮೊಬೈಲ್ ಕೊಡಲೇಬೇಡಿ!
ದರ್ಶನ್ ಜೈಲು ಸೇರಿದ ಮೇಲೆ ಮಾನಸಿಕವಾಗಿ ಕುಗ್ಗಿದ್ದರೂ ಬಾಡಿ ಮೆಂಟೇನೆನ್ಸ್ಗೆ ಹೆಚ್ಚು ಹೊತ್ತು ಕೊಡುತ್ತಿದ್ದಾರೆ. ಹಾಗೇ ಬಿಟ್ಟರೆ ಬಾಡಿ ಶೇಪ್ ಹಾಳಾಗುತ್ತದೆಂದು ದರ್ಶನ್ ದೇಹದ ಕಡೆ ಗಮನಹರಿಸುತ್ತಿದ್ದಾರೆ. ಅಲ್ಲದೇ ಡೆವಿಲ್ ಸಿನಿಮಾ ಬಗ್ಗೆನೂ ಚಿಂತೆ ಮಾಡುತ್ತಿದ್ದಾರಂತೆ. ಸಾಮಾನ್ಯವಾಗಿ ಜಿಮ್ ಮಾಡಿದವರು ಕೂಡಲೇ ವರ್ಕೌಟ್ ಬಿಟ್ಟರೆ ಚರ್ಮ ಜೋತು ಬಿದ್ದು ವಿಲಕ್ಷಣವಾಗಿ ಕಾಣುತ್ತದೆ. ಹೀಗಾಗಿ ದಾಸ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಲು ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ