​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌

author-image
Veena Gangani
Updated On
​ಅಣ್ಣನನ್ನು ಭೇಟಿಯಾಗಲು ಜೈಲಿಗೆ ಬಂದ ತಮ್ಮ ದಿನಕರ್ ತೂಗುದೀಪ; ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಸಾಥ್‌
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಅಂಡ್​ ಗ್ಯಾಂಗ್ ಜೈಲಿಗೆ ​
  • ಮೊದಲ ಬಾರಿಗೆ ದರ್ಶನ್​ರನ್ನು ಭೇಟಿಯಾಗಲು ಬಂದ ತಮ್ಮ ದಿನಕರ್
  • ವಿಜಯಲಕ್ಷ್ಮಿ ದರ್ಶನ್​ ಜತೆಗೆ ಜೈಲಿಗೆ ಭೇಟಿ ಕೊಟ್ಟ ದಿನಕರ್ ತೂಗುದೀಪ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಅಂಡ್​ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದೆ. ಜುಲೈ 18ರವರೆಗೂ ದರ್ಶನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ ನಟ ದರ್ಶನ್​ ಅವರನ್ನು ಭೇಟಿ ಮಾಡಲು ಕುಟುಂಬಸ್ಥರು ಆಗಮಿಸಿದ್ದಾರೆ.

publive-image

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಲುಕ್ ಫುಲ್ ಚೇಂಜ್.. ವಿಗ್‌ ತೆಗೆಸಿದ್ರಾ ಪೊಲೀಸ್? ದಾಸನ ಹೊಸ ಮುಖ ಅನಾವರಣ 

ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್​​ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್​​ ಬಂದಿದ್ದರು. ಇದಾದ ಬಳಿಕ ನಟಿ ರಕ್ಷಿತಾ ಹಾಗೂ ನಟ ಪ್ರೇಮ್​ ಅವರು ಕೂಡ ಆಗಮಿಸಿದ್ದರು. ದರ್ಶನ್​​ನನ್ನು ಜೈಲಿನಲ್ಲಿ ನೋಡಿದ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಭಾವುಕರಾಗಿದ್ದರು.

publive-image

ಇದೀಗ ಮತ್ತೆ ಪರಪ್ಪನ ​​ಅಗ್ರಹಾರ ಜೈಲಿಗೆ ದರ್ಶನ್ ಕುಟುಂಬಸ್ಥರು ಭೇಟಿ ಕೊಟ್ಟಿದ್ದಾರೆ. ದರ್ಶನ್​ ಸಹೋದರ ದಿನಕರ್ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ ಜೈಲಿನ ಊಟವನ್ನು ತಿನ್ನದ ದರ್ಶನ್​ ಮನೆ ಊಟಕ್ಕೆ ಹಂಬಲಿಸುತ್ತಿದ್ದರು. ಜೊತೆಗೆ ಮನೆಯೂಟವನ್ನು ಮಿಸ್​ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಜೈಲಿನ ಅಧಿಕಾರಿಗಳ ಬಳಿಯೂ ಮನೆಯೂಟ ಬೇಕು ಅಂತ ಆಸೆ ವ್ಯಕ್ತಪಡಿಸಿದ್ದರಂತೆ. ಸದ್ಯ ಜೈಲಿನಲ್ಲಿ ಕಾಲ ಕಳೆಯಲು ನಟ ದರ್ಶನ್​ ಅವರಿಗೆ ಕಷ್ಟ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಕಣ್ತಪ್ಪಿಸಿ ಓಡಾಡಲು ಶಾಸಕ ಬಸನಗೌಡ ದದ್ದಲ್ ಹರಸಾಹಸ; ಸಿಎಂ ಜೊತೆ ಮಹತ್ವದ ಚರ್ಚೆ; ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment