Advertisment

ಅಪ್ಪನ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅನು.. ಕಣ್ಣೀರಾಗಿ ಹರಿಯಿತು ಪಶ್ಚಾತಾಪ..!

author-image
Ganesh
Updated On
ಅಪ್ಪನ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಅನು.. ಕಣ್ಣೀರಾಗಿ ಹರಿಯಿತು ಪಶ್ಚಾತಾಪ..!
Advertisment
  • ರೇಣುಕಾಸ್ವಾಮಿ ಕೇಸ್ ಆರೋಪಿ ಅನು ತಂದೆ ಅಂತ್ಯಕ್ರಿಯೆ
  • ಚಿತ್ರದುರ್ಗದಲ್ಲಿ ತಂದೆಯ ಅಂತ್ಯಕ್ರಿಯೆಯಲ್ಲಿ ಆರೋಪಿ ಭಾಗಿ
  • ಕೊಲೆ ಪ್ರಕರಣದ ಎ-7 ಅನು ಕರೆತಂದಿದ್ದ ಪೊಲೀಸರು

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯಿಂದಾಗಿ ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. ರೇಣುಕಾ ಸ್ವಾಮಿ ಹತ್ಯೆಯ ಆರೋಪಿ ಎ-7 ಅನಿಲ್​ ಅಲಿಯಾಸ್​ ಅನು ತಂದೆ ಚಂದ್ರಣ್ಣ ಸಾವನ್ನಪ್ಪಿದ್ದು, ತಡ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

Advertisment

ರೇಣುಕಾಸ್ವಾಮಿ ಕೇಸ್ ಆರೋಪಿ ಅನು ತಂದೆ ಅಂತ್ಯಕ್ರಿಯೆ
ಪ್ರಪಂಚವನ್ನೇ ನೋಡದ ಕಂದಮ್ಮನ ತಂದೆಯನ್ನ ಕೊಂದವರಿಗೆ ಸಹಾಯ ಮಾಡಿದ ಆರೋಪಿ ತನ್ನ ತಂದೆಯ ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಇದೆಲ್ಲಾ ನನಗೆ ಬೇಕಿತ್ತಾ ಅಂತಾ ಪಶ್ಚತ್ತಾಪ ಕಣ್ಣೀರಾಗಿ ಹೊರ ಬಂದಿತ್ತು. ಇಡೀ ದೇಶವನ್ನ ನಡುಗಿಸಿರೋ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದಿನಕ್ಕೊಂದು ವಿಚಾರಗಳು ಹೊರ ಬರ್ತಿದೆ.. ಚಾಟ್ ಮಾಡೋದಕ್ಕೆ ಒಬ್ಬ.. ಕರ್ಕೊಂಡು ಬರೋದಕ್ಕೆ ಒಬ್ಬ.. ಪಿಕ್ ಮಾಡೋದಕ್ಕೆ ಒಬ್ಬ.. ಕಿಡ್ನ್ಯಾಪ್​ ಮಾಡೋದಕ್ಕೆ ಒಬ್ಬ.. ಅಂತಾ ಕೊಲೆ ಮಾಡಲು ಸಾಥ್​ ನೀಡಿದ್ದ ಚಿತ್ರದುರ್ಗದವರೇ ನಾಲ್ಕು ಮಂದಿಯನ್ನ ಅರೆಸ್ಟ್ ಮಾಡಲಾಗಿದೆ. ಇನ್ನು ಎ-7 ಆರೋಪ ಅರೆಸ್ಟ್ ಆದ ವಿಚಾರ ತಿಳಿದು ಆತನ ತಂದೆ ಚಂದ್ರಪ್ಪ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್‌, ಡೀಸೆಲ್‌​ ಬೆಲೆ​ ಮಾತ್ರವಲ್ಲ.. ಬಡವರ ಜೇಬಿಗೆ ಇನ್ನೂ ಬೀಳಲಿದೆ ಕತ್ತರಿ.. ಯಾಕೆ ಗೊತ್ತಾ?

publive-image

ನಟ ದರ್ಶನ್​ ಗ್ಯಾಂಗ್ ಎ-7 ಆರೋಪಿ ಅನು ತಂದೆ ಚಂದ್ರಪ್ಪ ಸಾವನ್ನಪ್ಪಿ 24 ಗಂಟೆ ಕಳೆದ್ರು ಅಂತ್ಯಕ್ರಿಯೆ ನೆರವೇರಿಸಿರಲ್ಲಿಲ್ಲ. ಶವದ ಮುಂದೆ ಅನು ಬರುವಿಕೆಗಾಗಿ ಸಂಬಂಧಿಕರು ಕಾದು ಕುಳಿತಿದ್ರು. ಅನುಕುಮಾರ್ ಬಂದ ಬಳಿಕವೇ ತಂದೆ ಚಂದ್ರಪ್ಪನ ಅಂತ್ಯಕ್ರಿಯೆ ನಡೆಯ ಬೇಕು ಅನ್ನೋ ತೀರ್ಮಾನದಲ್ಲಿದ್ರು. ಮಗ ಬರುವ ನೀರಿಕ್ಷೆಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಪೊಲೀಸರು ಅನುಗೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿದ್ರು. ಅದರಂತಯೇ ಚಿತ್ರದುರ್ಗಕ್ಕೆ ಕರೆದುತಂದಿದ್ರು.

Advertisment

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

publive-image

ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಇತರ ಆರೋಪಿಗಳಿಗೆ ನೆರವಾಗಿರುವ ಆರೋಪ ಅನು ಶುಕ್ರವಾರ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದ. ಕೊಲೆ ಪ್ರಕರಣದಲ್ಲಿ ತಮ್ಮ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ತಿಳಿದು ನೊಂದಿದ್ದ ಆರೋಪಿ ಅನು ತಂದೆ ಚಂದ್ರಪ್ಪ ಅದೇ ದಿನ ಮನೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಚಂದ್ರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಹೃದಯ ಸ್ತಂಭನ ಸಂಭವಿಸಿ ಅವರು ಸಾವನ್ನಪ್ಪಿದ್ದರು. ನಿನ್ನೆ ಅಂತ್ಯಕ್ರಿಯೆಗೆಂದು ಪೊಲೀಸ್ ಬಂದೋಬಸ್ತ್​ನಲ್ಲಿ ಬಂದಿದ್ದ ಅನು ತನ್ನ ತಂದೆ ಶವ ನೋಡ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ಆಪರೇಷನ್ ಡಿ..! ದರ್ಶನ್ ಬಂಧನ ನೀವು ಅಂದುಕೊಂಡಷ್ಟು ಸುಲಭ ಇರಲಿಲ್ಲ..!

Advertisment

publive-image

ಆರೋಪಿ ಅನು ಬರುತ್ತಿದ್ದಂತೆ ತಂದೆ ಚಂದ್ರಪ್ಪ ಅಂತ್ಯಕ್ರಿಯೆ ನೆರವೇರಿಸಲಾಯ್ತು. ತಡರಾತ್ರಿ ಕನಕ ವೃತ್ತದ ಬಳಿ ಇರೋ ಹಿಂದೂ ರುದ್ರ ಭೂಮಿಯಲ್ಲಿ ಕುರುಬ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿದೆ. ಅಂತ್ಯಕ್ರಿಯೆ ಮುಗೀತಾ ಇದ್ದಂತೆ ಪೊಲೀಸರು ಅನುನನ್ನ ಮತ್ತೆ ವಾಪಸ್ ಕರೆತಂದಿದ್ದಾರೆ. ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅನೇಕರ ಪೋಷಕರಿಂದ ದೂರಾದ ಮಕ್ಕಳು.. ಮಕ್ಕಳಿಂದ ದೂರಾದ ಹೆತ್ತವರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಇದನ್ನೂ ಓದಿ:ಕೊಹ್ಲಿ ಬದಲಾವಣೆ ತಂಡಕ್ಕೆ ಅನಿವಾರ್ಯ.. ಕೈಸುಟ್ಟುಕೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಸಿಸಿಐ..!

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment