Advertisment

ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ

author-image
AS Harshith
Updated On
ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ
Advertisment
  • ದರ್ಶನ್​ ಭೇಟಿಯ ನೆಪವೊಡ್ಡಿ ಕರೆದೊಯ್ದ ರಾಘು
  • ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಅರೆಸ್ಟ್​
  • ಅರೆಸ್ಟ್​ ಆಗಿರುವ ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ತಾಯಿ

ರೇಣುಕಾಸ್ವಾಮಿ ಮರ್ಡರ್ ಕೇಸ್​ನಲ್ಲಿ ದರ್ಶನ್​ ಅಭಿಮಾನಿಗಳು ಕೂಡ ತಗಲಾಕಿಕೊಂಡಿದ್ದಾರೆ. ಚಿತ್ರದುರ್ಗ ಮೂಲಕ ಆರೋಪಿ ಅನು ಕೂಡ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ಅರೆಸ್ಟ್​ ಆಗಿದ್ದು ಪೊಲೀಸರ ವಶದಲ್ಲಿದ್ದಾರೆ. ಆದರೆ ಇತ್ತ ಬಂಧಿತ ಆರೋಪಿಯ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ. ನನ್ನ ಮಗ ತಪ್ಪು ಮಾಡಿಲ್ಲ ಎಂದು ಗೋಗರೆಯುತ್ತಿದ್ದಾರೆ. ಮಗನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Advertisment

ಪೆಟ್ರೋಲ್ ಬಂಕ್​ನಲ್ಲಿ ಕೆಲಸ

ಮೊದಲೇ ಹೇಳಿದಂತೆ ಆರೋಪಿ ಅನಿಲ್ ಕುಮಾರ್ (ಅನು) ಚಿತ್ರದುರ್ಗ ಮೂಲದವನು. ಚಿತ್ರದುರ್ಗ ನಗರದ ಸಿಹಿ ನೀರು ಹೊಂಡದ ರಸ್ತೆಯಲ್ಲಿರುವ ಈತನ ಮನೆಯಿದೆ. ತಾಯಿ ಜಯಮ್ಮ, ತಂದೆ ಚಂದ್ರಪ್ಪ ದಂಪತಿಯ ಪುತ್ರನೀತ. ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಇದಕ್ಕಿಂತ ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಅನು ಸಭ್ಯ ಹುಡುಗನಾಗಿದ್ದು ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ವಶದಲ್ಲಿದ್ದಾನೆ.

publive-image

ದರ್ಶನ್​ ಭೇಟಿಯ ನೆಪವೊಡ್ಡಿ ಕರೆದೊಯ್ದ ರಾಘು

ಸದ್ಯ ಅನು ಮನೆಯವರು ಕಣ್ಣೀರ ಕೋಡಿ ಹರಿಸುತ್ತಿದ್ದಾರೆ. ನನ್ನ ಮಗನಿಗೆ ಏನು ಗೊತ್ತಿಲ್ಲ ಬಡವರ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ನಟ ದರ್ಶನ್ ಭೇಟಿ ಮಾಡಿಸುವ ನೆಪವೊಡ್ಡಿ ಕರೆದೊಯ್ದಿದ್ದಾರೆ ಎಂದು ಅಧ್ಯಕ್ಷ ರಾಘುವೇಂದ್ರನ ವಿರುದ್ದ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ಪೊಲೀಸ್​ ವಶದಲ್ಲಿರುವ ಮಗನನ್ನು ನೆನೆದು ಅನು ತಾಯಿ ಜಯಮ್ಮ ಕಣ್ಣೀರು ಹಾಕುತ್ತಿದ್ದಾರೆ.

ಮನೆಯ ಆಧಾರಸ್ತಂಭವಾಗಿದ್ದ ಅನು

ಅನು ಮನೆಯ ಆಧಾರಸ್ತಂಭವಾಗಿದ್ದನು, ಆತ ಮತ್ತು ತಾಯಿ ಜಯಮ್ಮ ಬೇರೆಯವರ ಮನೆಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದೀಗ ಮನೆಯಲ್ಲಿ ನಾಲ್ಕೈದು ದಿನಗಳಿಂದ ಆತಂಕ ಮನೆಮಾಡಿದ್ದು, ದರ್ಶನ್ ಬಡವರ ಮಕ್ಕಳನ್ನು ಹೀಗೆ ಮಾಡಬಾರದು ಎಂದು ಆತನ ತಾಯಿ ಹೇಳಿದ್ದಾರೆ.

Advertisment

publive-image

ಮಗನನ್ನು ನೆನೆದು ಹೆತ್ತಕರುಳು ಕಣ್ಣೀರು

ಆಟೋ ಚಾಲಕನಾಗಿದ್ದ ಅನು ಅಕ್ಕಪಕ್ಕದವರ ಬಳಿ ವಿಶ್ವಾಸ ಗಳಿಸಿದ್ದನು. ರಘು ನನ್ನ ಮಗನಿಗೆ ಮೋಸ ಮಾಡಿ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರ ವಶದಲ್ಲಿರುವ ಮಗನನ್ನು ನೆನೆದು ಹೆತ್ತಕರಳು ಕಣ್ಣೀರು ಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment