Advertisment

ದರ್ಶನ್​​ನಿಂದಾಗಿ ಸೈಡ್​​ ವಾಲ್​.. ಶಾಮಿಯಾನ ಹಿಂದಿನ ಅಸಲಿ ರಹಸ್ಯ ರಿವೀಲ್..!

author-image
Ganesh
Updated On
‘ದರ್ಶನ್‌ ಒಬ್ಬ ಆರೋಪಿ ಅಷ್ಟೇ’- ಪೊಲೀಸ್ ಅಧಿಕಾರಿಗಳಿಗೆ CM ಖಡಕ್ ವಾರ್ನಿಂಗ್; ಹೇಳಿದ್ದೇನು?
Advertisment
  • ಅನ್ನಪೂರ್ಣೇಶ್ವರಿ ಠಾಣೆ ಮುಂದೆ ಶಾಮಿಯಾನದ ಸೈಡ್​ವಾಲ್
  • ಸೈಡ್ ​ವಾಲ್ ಹಾಕಿರೋದಕ್ಕೆ ಭಾರೀ ಚರ್ಚೆ ಆಗ್ತಿದೆ
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಅರೆಸ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಇತರೆ ಆರೋಪಿಗಳ ತನಿಖೆ ತೀವ್ರಗೊಂಡಿದೆ. ನಿನ್ನೆಯವರೆಗೆ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದ ಪೊಲೀಸರು ಇಂದು ಆರೋಪಿಗಳಿಂದ ಹೇಳಿಕೆಗಳನ್ನು ದಾಖಲು ಮಾಡಿಕೊಳ್ತಿದ್ದಾರೆ.

Advertisment

ಈ ಮಧ್ಯೆ ಆರೋಪಿಗಳ ತನಿಖೆ ನಡೆಸುತ್ತಿರುವ ಸ್ಥಳ, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಶಾಮಿಯಾನ ಹಾಕಲಾಗಿತ್ತು. ಇದು ಭಾರೀ ಚರ್ಚೆಯನ್ನು ಹುಟ್ಟಿಹಾಕಿತ್ತು. ಇದೀಗ ಶಾಮಿಯಾನ ಹಾಕಿರುವ ಹಿಂದಿನ ಕಾರಣ ಬಯಲಾಗಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?

ದರ್ಶನ್ ಹೇಳಿದ್ದೇನು..?
ಶಾಮಿಯಾನದ ಸೈಡ್ ವಾಲ್ ಹಾಕಿಸಿದ್ದು ನಟ ದರ್ಶನ್​ಗಾಗಿ. ಪೊಲೀಸರ ಮುಂದೆ ದರ್ಶನ್ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾಮಿಯಾನದ ಸೈಡ್ ವಾಲ್ ಹಾಕಲಾಗಿದೆ. ಸಾರ್ ನನಗೆ ಒಂದೇ ಕಡೆ ಕುಳಿತು ಇರಲು ಆಗ್ತಾ ಇಲ್ಲ. ನಾನು ವಾಕ್ ಮಾಡಬೇಕು. ನನ್ನ ಬಾಡಿಯನ್ನು ಫ್ರೀ ಮಾಡಿ ರಿಲ್ಯಾಕ್ಸ್ ಮಾಡಬೇಕು. ಸಿಗರೇಟ್ ಇಲ್ಲವಾದ್ರೆ ನನಗೆ ಕೈನಡುಗುತ್ತದೆ. ನೀವು ಪದೇಪದೆ ಪ್ರಶ್ನೆ ಮಾಡುತ್ತಲೇ ಇದ್ದೀರಿ. ನನಗೆ ಏನು ಗೊತ್ತಿಲ್ಲ ಎಂದು ಎಷ್ಟು ಸಲ ಹೇಳಲಿ? ಪದೇ ಪದೆ ಅದೇ ಪ್ರಶ್ನೆ ಕೇಳ್ತೀರಿ ದರ್ಶನ್ ಹೇಳಿಕೊಂಡಿದ್ದಾರೆ. ಠಾಣೆ ಒಳಗೆ ತಿರುಗಾಡಲು ಜಾಗ ಇಲ್ಲ. ಅದಕ್ಕೆ ಸೈಡ್ ವಾಲ್ ಹಾಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಇನ್ನೂ ಮೂವರು ನಿಗೂಢ ನಾಪತ್ತೆ.. ಯಾರು ಅವರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment