Advertisment

ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್​ನ ರಘು ಸಹೋದರಿ ಕಣ್ಣೀರು

author-image
Ganesh
Updated On
ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್​ನ ರಘು ಸಹೋದರಿ ಕಣ್ಣೀರು
Advertisment
  • ‘ಜೈಲಿಗೆ ಹೋಗುವ ಮೊದಲು ಚೆನ್ನಾಗಿ ಓಡಾಡಿಕೊಂಡಿದ್ದರು’
  • ‘ವಿಷಯ ತಿಳಿದು ತುಂಬಾ ನೋವು ನುಂಗಿ ಕೊರಗುತ್ತಿದ್ದರು’
  • ದರ್ಶನ್ ಕೇಸ್​ನ ರಘು ತಾಯಿ ಅನಾರೋಗ್ಯದಿಂದ ನಿಧನ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವ ರಘು ಅವರ ತಾಯಿ ನಿಧನರಾಗಿದ್ದಾರೆ. 65 ವರ್ಷ ವಯಸ್ಸಿನ ತಾಯಿ ಮಂಜುಳಮ್ಮ ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.

Advertisment

ಅನಾರೋಗ್ಯದಿಂದ ಬಳಲುತ್ತಿದ್ದ ಮಂಜುಳಮ್ಮ ಸಾವನ್ನಪ್ಪಿದ್ದಾರೆ. ಅತ್ತ ಮಗ ರಘು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಯಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇದನ್ನೂ ಓದಿ: ದರ್ಶನ್ ಕೇಸ್​​ನಲ್ಲಿ ಜೈಲು ಸೇರಿದ ಮಗ.. ಕೊರಗಿನಲ್ಲೇ ಪ್ರಾಣಬಿಟ್ಟ ರಘು ತಾಯಿ

publive-image

ಅಮ್ಮನ ಅಗಲಿಕೆ ಬಗ್ಗೆ ಮಾಹಿತಿ ನೀಡಿರುವ ರಘು ಅವರ ಸಹೋದರಿ.. ಇಂದು ಬೆಳಗಿನ ಜಾವ 4.30ರ ಸುಮಾರಿಗೆ ಅಮ್ಮ ಮೃತಪಟ್ಟರು. ಅಮ್ಮನಿಗೆ ಮಗ (ರಘು) ಅಂದರೆ ಜೀವ. ಅವನಿಗೂ ಅಮ್ಮ ಅಂದರೆ ಪ್ರಾಣವಾಗಿತ್ತು. ಅವನು ಇಷ್ಟು ದೊಡ್ಡವನಾಗಿದ್ದರೂ, ಆತ ಮನೆಗೆ ಬಂದಾಗ ಮುದ್ದು ಮಾಡೋರು. ರಘು ಹಾಗೆ ಮಾಡೋನಲ್ಲ. ಇಲ್ಲಿಯವರೆಗೆ ಆತ ಯಾರಿಗೂ ಹೊಡೆದಿದ್ದನ್ನು ನಾನು ನೋಡಿಲ್ಲ.

Advertisment

ಕುಡಿದಾಗ ಹೆಂಡತಿ ಜೊತೆ ಬಾಯಿ ಮಾಡೋನು ಅಷ್ಟೇ. ಅದು ಹೆಂಡತಿ ಜೊತೆ ಮಾತ್ರ. ಈಗ ಅಮ್ಮ ಇಲ್ಲ, ತಮ್ಮ ಜೈಲಿನಲ್ಲಿದ್ದಾನೆ. ಅವನನ್ನು ಕರೆಸಬೇಕು. ಅವನಿಂದಲೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಆತ ಜೈಲಿಗೆ ಹೋದ ಮೇಲೆ ತುಂಬಾ ನೋವು ಅನುಭವಿಸಿದ್ದರು. ಅದಕ್ಕೂ ಮೊದಲು ಚೆನ್ನಾಗಿ ಓಡಾಡಿಕೊಂಡು ಇದ್ದರು ಅಂತಾ ಭಾವುಕರಾಗಿದ್ದಾರೆ.

ಇದನ್ನೂ ಓದಿ:ಗಂಭೀರ್ ಮೇಲೆ ಹಳೇ ದ್ವೇಷ ಸಾಧಿಸಿದ ಅನುಮಾನ.. 12 ವರ್ಷಗಳ ಹಿಂದಿನ ನಡೆಗೆ ಇಂದು ರಿವೇಂಜ್..!

publive-image

ನಮಗೆ ಅಂತ್ಯಸಂಸ್ಕಾರಕ್ಕೂ ಅನುಕೂಲ ಇಲ್ಲ. ನಾವು ಕೂಲಿ ಮಾಡಿ ಬದುಕೋರು. ನನ್ನ ಊರು ತುಂಬಾ ದೂರ ಇದೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಇಲ್ಲ. ಮಕ್ಕಳ ಸಾಕಲು ನಾನು ಕೂಲಿ ಕೆಲಸಕ್ಕೆ ಹೋಗುತ್ತೇನೆ ಎಂದು ರಘು ಸಹೋದರಿ ಕಣ್ಣೀರು ಇಟ್ಟಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment