newsfirstkannada.com

ಪೇಪರ್​ ವರ್ಕ್​ ಶುರು ಮಾಡಿದ ಮತ್ತೊಂದು ಟೀಂ.. ದರ್ಶನ್ ಗ್ಯಾಂಗ್​ನ ಮತ್ತಷ್ಟು ಕ್ರೂರತ್ವ ಬಯಲಾದ್ರೂ ಅಚ್ಚರಿ ಇಲ್ಲ

Share :

Published June 26, 2024 at 7:38am

    ತಾರ್ಕಿಕ ಅಂತ್ಯದ ಹಾದಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ

    ದರ್ಶನ್​ ಅಂಡ್ ಗ್ಯಾಂಗ್​ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಗೆ ಪೊಲೀಸರ ಸಿದ್ಧತೆ

    ಡಿ ಗ್ಯಾಂಗ್ ಕ್ರೌರ್ಯಕ್ಕೆ 8 ಮಂದಿ ಐ ವಿಟ್ನೆಸ್, ಏನೆಲ್ಲ ಸಾಕ್ಷಿ ಸಂಗ್ರಹ ಆಗಿದೆ?

ರೇಣುಕಾಸ್ವಾಮಿ ಕೊಲೆ ಇದೊಂದು ಸಾಮಾನ್ಯವಾದ ಪ್ರಕರಣವೇನು ಅಲ್ಲ. ಇದರಲ್ಲಿ ದೊಡ್ಡ ಸೆಲೆಬ್ರೆಟಿಯೇ ಜೈಲು ಪಾಲಾಗಿದ್ದಾರೆ.. ಇದಕ್ಕೆ ಕಾರಣ ಪೊಲೀಸರ ಖಡಕ್​ ತನಿಖೆ.. ಯಾವುದೇ ಒತ್ತಡಕ್ಕೂ ಮಣಿಯದೇ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದಾರೆ.. ಸಣ್ಣ ಸಾಕ್ಷ್ಯವನ್ನೂ ಬಿಡದೇ ಸಂಗ್ರಹಿಸಿರುವ ಪೊಲೀಸರು ಕೊಲೆ ಪ್ರಕರಣದಲ್ಲಿ ಡಿ-ಗ್ಯಾಂಗ್​ ವಿರುದ್ಧ ಚಾರ್ಚ್​ಶೀಟ್​ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ತಿದ್ದಾರೆ.

ಉಗುರುನಿಂದ ಆಗುವ ಕೆಲಸಕ್ಕೆ ಕೊಡಲಿ ಯಾಕೆ ಬೇಕು.. ಸದ್ಯ ನಟ ದರ್ಶನ್​ ಪರಿಸ್ಥಿತಿ ನೋಡ್ತಿದ್ರೆ ಈ ಗಾದೆ ಮಾತು ನೆನಪಾಗುತ್ತೆ.. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಡಿ ಗ್ಯಾಂಗ್​ ಅಮಾನವೀಯವಾಗಿ.. ಬರ್ಬರವಾಗಿ ಕೊಲೆ ಮಾಡಿ ಜೈಲು ಸೇರಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ತಾರ್ಕಿಕ ಅಂತ್ಯದ ಹಾದಿಯಲ್ಲಿದ್ದು, ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಸಿದ್ಧತೆ ಮಾಡಿಕೊಳ್ತಿದ್ದಾರೆ.

ಇದನ್ನೂ ಓದಿ:ಬಲಿಷ್ಠ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಹೋರಾಟ.. ಸೇಡು ತೀರಿಸಿಕೊಳ್ಳಲು ಚಿನ್ನದಂಥ ಅವಕಾಶ

ಸಾಕ್ಷ್ಯ ಸಂಗ್ರಹಕ್ಕೆ ಪ್ರತ್ಯೇಕ ತಂಡ.. ಪೇಪರ್​ ವರ್ಕ್​ಗೆ ಮತ್ತೊಂದು ಟೀಂ
ದರ್ಶನ್ ಗ್ಯಾಂಗ್‌ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಹತ್ಯೆ ಮಾಡಿದ್ದರು. ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸರು ಯಾವುದೇ ಸಣ್ಣ ಸಾಕ್ಷ್ಯವನ್ನೂ ಬಿಡದೆ ಕಲೆ ಹಾಕಿದ್ದಾರೆ. ಪ್ರತ್ಯೇಕ ತಂಡವನ್ನೇ ರಚಿಸಿಕೊಂಡಿರುವ ಪೊಲೀಸರು, ಇದುವರೆಗೆ ಬರೋಬ್ಬರಿ 180 ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ದಾರೆ.. ನಟ ದರ್ಶನ್ ಧರಿಸಿದ್ದ ಬೆಲ್ಟ್ ಅನ್ನು ಬಿಡದೆ ಪೊಲೀಸರು ಪತ್ತೆ ಮಾಡಿದ್ದಾರೆ..

ಡಿ ಗ್ಯಾಂಗ್ ಕ್ರೌರ್ಯಕ್ಕೆ 8 ಮಂದಿ ಐ ವಿಟ್ನೆಸ್!
ದರ್ಶನ್‌ ಗ್ಯಾಂಗ್​​ನಿಂದ ನಡೆದ ಕೊಲೆ ಕೇಸ್​ಗೆ ಒಂದಲ್ಲ, ಎರಡಲ್ಲ 8 ಮಂದಿ ಐ ವಿಟ್ನೆಸ್ ಇದ್ದಾರೆ ಅನ್ನೋ ರೋಚಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ. ಪಟ್ಟಣಗೆರೆ ಶೆಡ್​ ಸೆಕ್ಯೂರಿಟಿ ಸೇರಿ 8 ಮಂದಿಯ ಸಾಕ್ಷಿಧಾರರನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಈಗಾಗಲೇ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿಯಿಂದ ಜಡ್ಜ್​​ ಮುಂದೆ ಸಿಆರ್​ಪಿಸಿ 164 ಹೇಳಿಕೆಯನ್ನು ಪೊಲೀಸರು ದಾಖಲಿಸಿದ್ದಾರೆ. ಇದೀಗ ಉಳಿದ 7 ಮಂದಿಯ 164 ಹೇಳಿಕೆ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?

ಟೆಕ್ನಿಕಲ್ ಎವಿಡೆನ್ಸ್​ಗಳನ್ನೂ ಕಲೆಹಾಕ್ತಿರುವ ಪೊಲೀಸರು
ಇದು ಹೈಪ್ರೊಫೈಲ್​ ಕೇಸ್​ ಆಗಿದ್ದು, ನಟ ದರ್ಶನ್​ ಸೇರಿದಂತೆ ಬಂಧಿತರಲ್ಲಿ ಕೆಲವರು ಪ್ರಭಾವಿ ವ್ಯಕ್ತಿಗಳು. ಹೀಗಾಗಿ ಪೊಲೀಸರು ಬಹಳ ಜಾಗರುಕತೆಯಿಂದ ಸಾಕ್ಷ್ಯಾಧಾರ ಕಲೆ ಹಾಕ್ತಿದ್ದಾರೆ. ಈ ಮಧ್ಯೆ ಮಹತ್ವದ ಟೆಕ್ನಿಕಲ್ ಎವಿಡೆನ್ಸ್​ಗಳನ್ನು ಪೊಲೀಸರು ಕಲೆ ಹಾಕ್ತಿದ್ದಾರೆ.

ಟೆಕ್ನಿಕಲ್ ಎವಿಡೆನ್ಸ್ ಕಲೆ

  • ಟೆಕ್ನಿಕಲ್ ಸೆಲ್​ನಲ್ಲಿ 17 ಆರೋಪಿಗಳ ಮೊಬೈಲ್​ಗಳ ರಿಟ್ರೀವ್
  • ದರ್ಶನ್, ಪವಿತ್ರಾ, ಪವನ್, ವಿನಯ್ ಮೊಬೈಲ್ ರಿಟ್ರೀವ್ ಪ್ರಕ್ರಿಯೆ
  • ಕೊಲೆ ಕೇಸ್​ನಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ ಸಂಗ್ರಹ
  • ಶೆಡ್​ನಿಂದ ಸುಮ್ಮನಹಳ್ಳಿ ಮೋರಿವರೆಗೂ 25ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ

ಇದನ್ನೂ ಓದಿ:ಹಿರಿಯರಿಗೆ ಕೊಕ್, ಗಿಲ್ ಕ್ಯಾಪ್ಟನ್.. ಇದು ನಿವೃತ್ತಿ ಕೇಳುವ ಮುನ್ಸೂಚನೆ.. ಪಾಂಡ್ಯ, ಪಂತ್​ಗೂ ಪರೋಕ್ಷ ಎಚ್ಚರಿಕೆ..!

ಒಟ್ಟಾರೆ.. ರೇಣುಕಾಸ್ವಾಮಿ ಕಿಡ್ನ್ಯಾಪ್​ ಆದ ಸ್ಥಳದಿಂದ ಹಿಡಿದು, ಆತ ಕೊಲೆಯಾಗಿ.. ಮೃತದೇಹ ಸಿಕ್ಕ ಸ್ಥಳದವರೆಗೂ ಪೊಲೀಸರು ಹದ್ದಿನ ಕಣ್ಣಿಟ್ಟು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಸಣ್ಣ ಸಾಕ್ಷ್ಯವನ್ನು ಬಿಡದೇ ಸಂಗ್ರಹಿಸಿರುವ ಪೊಲೀಸರು, ಮೂರು ತಿಂಗಳಲ್ಲಿ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆಗೆ ತಯಾರಿ ಆರಂಭಿಸಿದ್ದಾರೆ. ಆ ದೋಷಾರೋಪ ಪಟ್ಟಿಯಲ್ಲಿ ಡಿ ಗ್ಯಾಂಗ್​ನ ಮತ್ತಷ್ಟು ಕ್ರೂರತ್ವ ಬಯಲಾದ್ರೂ ಅಚ್ಚರಿ ಇಲ್ಲ.

ಇದನ್ನೂ ಓದಿ:ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದವರ ಮೇಲೆ ಫೈರಿಂಗ್.. ಐವರು ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೇಪರ್​ ವರ್ಕ್​ ಶುರು ಮಾಡಿದ ಮತ್ತೊಂದು ಟೀಂ.. ದರ್ಶನ್ ಗ್ಯಾಂಗ್​ನ ಮತ್ತಷ್ಟು ಕ್ರೂರತ್ವ ಬಯಲಾದ್ರೂ ಅಚ್ಚರಿ ಇಲ್ಲ

https://newsfirstlive.com/wp-content/uploads/2024/06/DARSHAN-JAIL-3.jpg

Load More