25 ವರ್ಷಗಳ ಆಪ್ತ ಹೊನ್ನೆಗೌಡ ನಿಧನಕ್ಕೆ ನಟ ದರ್ಶನ್ ಸಂತಾಪ

author-image
admin
Updated On
25 ವರ್ಷಗಳ ಆಪ್ತ ಹೊನ್ನೆಗೌಡ ನಿಧನಕ್ಕೆ ನಟ ದರ್ಶನ್ ಸಂತಾಪ
Advertisment
  • 25 ವರ್ಷಗಳಿಂದ ದರ್ಶನ್‌ಗೆ ಬಣ್ಣ ಹಚ್ಚುತ್ತಿದ್ದ ಮೇಕಪ್ ಆರ್ಟಿಸ್ಟ್
  • ಹೊನ್ನೆಗೌಡರ ಗುಣವನ್ನು ಕೊಂಡಾಡಿದ ನಟ ದರ್ಶನ್ ಹೇಳಿದ್ದೇನು?
  • ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು

ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಕಳೆದ 25 ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ನಿಧನರಾಗಿದ್ದಾರೆ. ಅತ್ಯಂತ ಆಪ್ತರಲ್ಲಿ ಒಬ್ಬರಾದ ಹೊನ್ನೆಗೌಡರ ಅಕಾಲಿಕ ಸಾವಿಗೆ ನಟ ದರ್ಶನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಹೊನ್ನೆಗೌಡರ ಫೋಟೋ ಜೊತೆ ಪೋಸ್ಟ್ ಮಾಡಿರುವ ನಟ ದರ್ಶನ್ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹೊನ್ನೆಗೌಡರ ಗುಣವನ್ನು ಕೊಂಡಾಡಿರುವ ದರ್ಶನ್, ಹೊನ್ನೆಗೌಡ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

25 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ್ರು ಇಂದು ಅಗಲಿದ ಸುದ್ದಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ.

ಇದನ್ನೂ ಓದಿ: ಪವಿತ್ರಾಗೌಡ ಕೈ ಹಿಡಿದುಕೊಂಡು ಹೊರಗೆ ಬಂದ ದರ್ಶನ್‌.. ಕೋರ್ಟ್‌ನಲ್ಲಿ ಅಸಲಿಗೆ ಆಗಿದ್ದೇನು?  

ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ ಎಂದು ದರ್ಶನ್ ಪೋಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment