/newsfirstlive-kannada/media/post_attachments/wp-content/uploads/2024/06/DARSHAN-38.jpg)
ರೇಣುಕಾಸ್ವಾಮಿ ಕೊಲೆ ಕೇಸ್​ನ ಆರೋಪದ ಮೇಲೆ ನಟ ದರ್ಶನ್ ಅಂಡ್​ ಗ್ಯಾಂಗ್ ಜೈಲುವಾಸ ಅನುಭವಿಸುತ್ತಿತ್ತು. ಆದರೆ ಜೈಲು ಸೇರಿರೋ ದರ್ಶನ್​ ರಾಜ್ಯಾತಿಥ್ಯದ ವೈರಲ್ ಫೋಟೋಗಳು ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಕೇಸ್​ಗೆ ಸಂಬಂಧಪಟ್ಟಂತೆ ಕೋರ್ಟ್​ ನಿರ್ದೇಶನದಂತೆ ನಟ ದರ್ಶನ್​ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ಸಾಧ್ಯತೆ ಇದೆ. ದರ್ಶನ್​ ಬಳ್ಳಾರಿ ಶಿಫ್ಟ್​ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನ ಸಿಬ್ಬಂದಿ ಮತ್ತು ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ.
ಇದನ್ನೂ ಓದಿ:332 ಕಿ.ಮೀ ದೂರಕ್ಕೆ ದಾಸನ ಪಯಣ.. ದಿಕ್ಕಾಪಾಲಾದ ದರ್ಶನ್ ಗ್ಯಾಂಗ್; ಯಾರ್, ಯಾರು ಯಾವ ಜೈಲಿಗೆ?
/newsfirstlive-kannada/media/post_attachments/wp-content/uploads/2024/08/darshan-2.jpg)
ಈ ಮಧ್ಯೆ ನಟ ದರ್ಶನ್ ಜೈಲು ಸಿಬ್ಬಂದಿ ಜೊತೆ ಅಳಲು ತೋಡಿಕೊಂಡಿದ್ದಾರಂತೆ. ಇದೆಲ್ಲಾ ಬೇಕಿತ್ತಾ ನಂಗೆ ಎಂದು ದುಖಃ ವ್ಯಕ್ತಪಡಿಸಿದ್ದಾರಂತೆ. ಅದರಲ್ಲೂ ಬಳ್ಳಾರಿ ಜೈಲಿಗೆ ಹೋಗಲು ನಟ ಹಿಂದೇಟು ಹಾಕುತ್ತಿದ್ದಾರಂತೆ. ಕಾರಣ ಇದಕ್ಕೂ ಮುನ್ನ ನಟ ದರ್ಶನ್​ ಈ ಜೈಲಿಗೆ ಭೇಟಿ ನೀಡಿದ್ದರು. ಆದರೆ ಕೈದಿಯಾಗಿ ಅಲ್ಲ ನಟನಾಗಿ ಹೋಗಿದ್ದರು. 2017ರಲ್ಲಿ ತೆರೆಕಂಡ ಚೌಕ ಸಿನಿಮಾದಲ್ಲಿ ದರ್ಶನ್​​ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾದಲ್ಲಿ ನಟ ದರ್ಶನ್ ಫೈಟಿಂಗ್ ಸೀನ್​ ಮಾಡಿದ್ದರು. ಹೀಗಾಗಿ ದರ್ಶನ್​ ಬಳ್ಳಾರಿ ಜೈಲಿಗೆ 7 ವರ್ಷದ ಹಿಂದೆ ಬಂದಿದ್ದರು.
/newsfirstlive-kannada/media/post_attachments/wp-content/uploads/2024/07/darshan_renuka.jpg)
ಹೀಗಾಗಿ ಈ ಚಿತ್ರೀಕರಣ ಸಂದರ್ಭದಲ್ಲಿ ಅಲ್ಲಿನ ಬಂಧಿಗಳ ಜೊತೆ ಸಹಜ ಮಾತುಕತೆ ನಡೆಸಿದ್ದರು. ಈ ವೇಳೆ ಬಳ್ಳಾರಿ ಜೈಲಿನ ಕಷ್ಟಗಳು ಅಲ್ಲಿನ ವಾತಾವರಣ, ಕಷ್ಟದ ಬಗ್ಗೆ ಕೈದಿಗಳು ಹೇಳಿಕೊಂಡಿದ್ದರು. ಹೀಗಾಗಿ ಸಹಜವಾಗಿಯೇ ದರ್ಶನ್ ಆತಂಕಗೊಂಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us