Advertisment

ಮನೆ ಊಟಕ್ಕೆ ಹಂಬಲಿಸಿದ್ದ ದಾಸನಿಗೆ ಆಘಾತ; ದರ್ಶನ್‌ ಅರ್ಜಿ ವಜಾ ಆಗಿದ್ದಕ್ಕೆ 3 ಕಾರಣಗಳಿವೆ; ಏನದು?

author-image
Veena Gangani
Updated On
ದರ್ಶನ್ ಗ್ಯಾಂಗ್‌ಗೆ ₹40 ಲಕ್ಷ ಕೊಟ್ಟ ರಹಸ್ಯ.. ಪೊಲೀಸರಿಗೆ ಮಹತ್ವದ ಸುಳಿವು; ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್!
Advertisment
  • ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಮನೆಯೂಟದ ಅರ್ಜಿ ವಜಾ
  • ಜೈಲೂಟದ ಮೆನುವಿನಲ್ಲಿ ಏನು ಬರುತ್ತೋ ಅದೇ ದಾಸನಿಗೆ ಫಿಕ್ಸ್!
  • ದರ್ಶನ್​ಗೆ ಜೈಲೂಟ ತಿನ್ನುತ್ತಾ ಸೆರೆಯ ಹಿಂದೆ ಕಾಲ ಕಳೆಯೋ ಸ್ಥಿತಿ

ದರ್ಶನ್‌ ಜೈಲುವಾಸವಂತೂ ಸದ್ಯಕ್ಕೆ ತಪ್ಪಿದಂತೆ ಕಾಣ್ತಿಲ್ಲ. ಮತ್ತೊಂದ್ಕಡೆ ಕಣ್ಣಿಗೆ ನಿದ್ದೆಯಿಲ್ಲ. ಜಾಮೀನು ಸಿಗುವ ಯಾವ ಲಕ್ಷಣವೂ ಕಾಣಿಸ್ತಿಲ್ಲ. ಇನ್ನೊಂದೆಡೆ ಜೈಲೂಟ ಸೇರ್ತಿಲ್ಲ. ಆದ್ರೀಗ ಮನೆಯೂಟದ ಮೇಲಿನ ಆಸೆಯಿಂದ ಕೋರ್ಟ್‌ ಮೆಟ್ಟಿಲೇರಿದ್ದ ಕಾಟೇರನಿಗೆ ನಿರಾಸೆಯಾಗಿದೆ. ಮನೆಯೂಟಕ್ಕಾಗಿ ಸಲ್ಲಿಕೆಯಾಗಿದ್ದ ಅರ್ಜಿ ವಜಾ ಆಗಿದ್ದು, ಜೈಲೂಟ ತಪ್ಪದಾಗಿದೆ.

Advertisment

publive-image

ಇದನ್ನೂ ಓದಿ:‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​

ಒಂದು ತಿಂಗಳಿನಿಂದ ಜೈಲೂಟವೇ ದರ್ಶನ್‌ಗೆ ಗತಿಯಾಗಿತ್ತು. ಇದರಿಂದ ಸೊರಗಿ, ಕೊರಗಿ ಕಂಗಾಲಾಗದ್ದ ದರ್ಶನ್‌ ಲೂಸ್ ಮೋಷನ್, ಡೈರಿಯಾ ಅಂತ ಹೈಕೋರ್ಟ್‌ಗೆ ಮನೆಯೂಟಕ್ಕೆ ಅರ್ಜಿ ಸಲ್ಲಿಸಿದ್ದರು. ಅದು ಕೊನೆಗೂ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ವರ್ಗಾವಣೆ ಆಗಿತ್ತು. ಕಳೆದ ಸೋಮವಾರ ಅರ್ಜಿಯ ಸಂಪೂರ್ಣ ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್ ಇವತ್ತಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು 24ನೇ ಎಸಿಎಂಎಂ ನ್ಯಾಯಾಲಯ ದರ್ಶನ್ ಮನೆಯೂಟದ ಬಗ್ಗೆ ತೀರ್ಪು ಪ್ರಕಟಿಸಿದೆ. ಎರಡೂ ಕಡೆಯ ವಾದ, ಪ್ರತಿವಾದ ಆಲಿಸಿದ್ದ ನ್ಯಾಯಾಲಯ ಮನೆಯೂಟದ ಅರ್ಜಿಯನ್ನ ವಜಾಗೊಳಿಸಿದೆ. ಹೀಗಾಗಿ ದಾಸನಿಗೆ ಮನೆಯೂಟ ಸಿಗದೇ ಜೈಲಿನ ಮುದ್ದೆ-ಸಾರೇ ಗತಿಯಾಗಿದೆ. ಜೈಲೂಟವನ್ನೇ ತಿನ್ನುತ್ತಾ ಸೆರೆಯ ಹಿಂದೆ ಕಾಲ ಕಳೆಯುವ ಸ್ಥಿತಿ ಎದುರಾಗಿದೆ.

publive-image

ನಟ ದರ್ಶನ್ ಅರ್ಜಿ ವಜಾ ಏಕೆ?

ಕಾರಣ-1
ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್​ನಲ್ಲಿ ಅವಕಾಶ ಇಲ್ಲ
2021ರ ಸೆಕ್ಷನ್ 728 ಪ್ರಕಾರ ಕೊಲೆ ಆರೋಪಿಗೆ ಅವಕಾಶವಿಲ್ಲ

Advertisment

ಕಾರಣ-2
ದರ್ಶನ್​​ ಊಟದ ಬಗ್ಗೆ ವರದಿ ನೀಡಿದ್ದ ಜೈಲಿನ ಅಧಿಕಾರಿಗಳು
ಜೈಲಾಧಿಕಾರಿಗಳ ವರದಿಯಲ್ಲಿ ಮನೆಯೂಟ ಅವಶ್ಯಕತೆ ಕಾಣ್ತಿಲ್ಲ

ಕಾರಣ-3
ಮನೆಯೂಟ ಪೂರೈಕೆಗೆ ಪೂರಕವಾದ ಪ್ರಮಾಣಪತ್ರಗಳಿಲ್ಲ
ಅವಶ್ಯಕತೆ ಸಂಬಂಧಪಟ್ಟ ವೈದ್ಯಕೀಯ ಪ್ರಮಾಣಪತ್ರಗಳಿಲ್ಲ

ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021 ರ ಸೆಕ್ಷನ್ 728 ರ ಪ್ರಕಾರ ಕೊಲೆ ಆರೋಪಿಗೆ ಮನೆಯ ಊಟ ನೀಡಲು ಅವಕಾಶವಿಲ್ಲ. ಅಲ್ಲದೇ ದರ್ಶನ್‌ಗೆ ಮನೆಯೂಟ ನೀಡುವ ಕುರಿತಂತೆ ಜೈಲು ಅಧಿಕಾರಿಗಳು ವರದಿ ನೀಡಿದ್ದು, ಆ ರಿಪೋರ್ಟ್ ಪ್ರಕಾರ ಮನೆಯೂಟ ನೀಡಲೇಬೇಕು ಎಂಬ ಅವಶ್ಯಕತೆಯೂ ಕಾಣಿಸುತ್ತಿಲ್ಲ. ಜೊತೆಗೆ ಮನೆ ಊಟ ಪೂರೈಕೆ ಮಾಡಲು ಅವಶ್ಯಕತೆಗೆ ಸಂಬಂಧಪಟ್ಟ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲದೇ ಇರೋದು ನ್ಯಾಯಾಲಯ ದರ್ಶನ್‌ ಅರ್ಜಿ ವಜಾ ಮಾಡಲು ಕಾರಣ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಇದನ್ನೂ ಓದಿ: ದರ್ಶನ್​ಗೆ ಜೈಲೂಟ ಫಿಕ್ಸ್‌.. ಮನೆಯೂಟ ಕೇಳಿದ್ದಕ್ಕೆ ಕೋರ್ಟ್‌ ಬಿಗ್ ಶಾಕ್‌; ಕಾರಣವೇನು?

ಸದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲೂಟದ ಮೆನುವಿನಲ್ಲಿ ಏನು ಬರುತ್ತೋ ಅದೇ ದಾಸನಿಗೆ ಫಿಕ್ಸ್ ಆಗಿದೆ. ದರ್ಶನ್‌ಗೆ ಮನೆಯೂಟಕ್ಕೆ ಅವಕಾಶ ಕೊಟ್ರೆ ಜೈಲಿನಲ್ಲಿರುವ 5 ಸಾವಿರ ಖೈದಿಗಳೂ ಕೇಳ್ತಾರೆ ಎಂಬ ಎಸ್‌ಪಿಪಿ ವಾದಕ್ಕೆ ಜಯ ಸಿಕ್ಕಿದೆ. ಇದ್ರಿಂದ ಸೆಂಟ್ರಲ್ ಜೈಲಿನಲ್ಲಿ ದರ್ಶನ್‌ ಮುದ್ದೆ ಮುರಿಯೋದೇ ಗತಿಯಾಗಿದೆ. ಆದ್ರೆ, ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರೋ ತೀರ್ಪನ್ನು ಪ್ರಶ್ನಿಸಿ ಮೇಲಿನ ನ್ಯಾಯಲಯದ ಮೊರೆ ಹೋಗಲು ಅವಕಾಶವಿದೆ. ಹೀಗಾಗಿ ದರ್ಶನ್‌ ಮತ್ತು ಅವರ ಪರ ವಕೀಲರ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.

publive-image

ದರ್ಶನ್ ಮುಂದಿನ ನಡೆಯೇನು?

ಮನೆ ಊಟಕ್ಕಾಗಿ ಹೈಕೋರ್ಟ್‌ಗೆ ಮೊರೆ ಹೋಗಲು ಅವಕಾಶವಿದೆ
ಹೈಕೋರ್ಟ್‌ಗೇನೇ ರಿಟ್‌ ಅರ್ಜಿ ಸಲ್ಲಿಸಿದ್ದ ದರ್ಶನ್‌ ಪರ ವಕೀಲರು
ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದ ಹೈಕೋರ್ಟ್‌
ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದರ್ಶನ್‌ಗೆ ಮನೆ ಊಟ ನಿರಾಕರಣೆ
ಜುಲೈ 29ಕ್ಕೆ ಹೈಕೋರ್ಟ್‌ನಲ್ಲಿ ದರ್ಶನ್‌ ಅರ್ಜಿ ವಿಚಾರಣೆಗೆ ನಿಗದಿ
ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆದೇಶ ಪ್ರಶ್ನಿಸಲು ದರ್ಶನ್‌ಗೆ ಅವಕಾಶ
ಹೈಕೋರ್ಟ್‌ನಲ್ಲೂ ಮನೆ ಊಟ ನಿರಾಕರಿಸಲ್ಪಟ್ಟರೆ ಜೈಲೂಟವೇ ಗತಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment