/newsfirstlive-kannada/media/post_attachments/wp-content/uploads/2024/12/Darshan-Discharge-2.jpg)
ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಚಾಲೆಂಜಿಂಗ್ ಸ್ಟಾರ್ ಕೆಂಗೇರಿಯ BGS ಆಸ್ಪತ್ರೆಗೆ ದಾಖಲಾಗಿದ್ದರು. ಬೆನ್ನು ನೋವಿಗೆ ಸರ್ಜರಿ ಮಾಡುವ ಹಿನ್ನೆಲೆಯಲ್ಲಿ ದರ್ಶನ್‌ಗೆ ಹೈಕೋರ್ಟ್ 6 ವಾರಗಳ ಜಾಮೀನು ಕರುಣಿಸಿತ್ತು.
ಬಳ್ಳಾರಿ ಜೈಲಿನಿಂದ BGS ಆಸ್ಪತ್ರೆಗೆ ಬಂದಿದ್ದ ದರ್ಶನ್ ಅವರಿಗೆ ಸರ್ಜರಿ ಮಾಡುವ ಬಗ್ಗೆ ವಿವಿಧ ಪರೀಕ್ಷೆಗಳನ್ನು ಮಾಡಲಾಗಿತ್ತು. ಆದರೆ ಇಷ್ಟು ದಿನ ಫಿಸಿಯೋಥೆರಪಿ ಮಾಡಿಸಿಕೊಂಡಿದ್ದ ದರ್ಶನ್ ಅವರು ಇಂದು ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿದ್ದ ದರ್ಶನ್ ಅವರು ನಿನ್ನೆ ಸೆಷನ್ ಕೋರ್ಟ್‌ಗೆ ತೆರಳಿ ಬೇಲ್‌ಗೆ ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿ ಆಸ್ಪತ್ರೆಗೆ ರಿಟರ್ನ್ ಆಗಿದ್ದರು. ಇಂದು ದರ್ಶನ್‌ಗೆ ಬಿಜೆಎಸ್ ಆಸ್ಪತ್ರೆಯಲ್ಲಿ ವೈದ್ಯರು ಕೌನ್ಸೆಲಿಂಗ್ ಮಾಡಿದ್ದು, ಮತ್ತೆ ಅಗತ್ಯವಿದ್ದಲ್ಲಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ದರ್ಶನ್ ಅವರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ದರ್ಶನ್ ಅವರ ಮುಂದಿನ ಚಿಕಿತ್ಸೆ ಬಗ್ಗೆ ಸಹೋದರ ದಿನಕರ್ ತೂಗುದೀಪ ಅವರು ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: 6 ತಿಂಗಳು ಪ್ರೀತಿಯ ಶ್ವಾನಗಳಿಂದ ದೂರವಿದ್ದ ಪವಿತ್ರಾಗೌಡ.. ಈಗ ಮರಳಿಗೆ ಗೂಡಿಗೆ ಬರಲಿವೆ ನೆಚ್ಚಿನ ನಾಯಿಗಳು
ದರ್ಶನ್ ಅವರಿಗೆ ಕಳೆದ ಡಿಸೆಂಬರ್ 13ರಂದು ಹೈಕೋರ್ಟ್ ಪೂರ್ಣ ಪ್ರಮಾಣದ ಜಾಮೀನು ನೀಡಿತ್ತು. ಈ ಬೇಲ್ ಸಿಕ್ಕ 5 ದಿನಗಳ ಬಳಿಕ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ಫ್ಲಾಟ್‌ಗೆ ತೆರಳಿದ ದರ್ಶನ್!
ಡಿಸ್ಚಾರ್ಜ್ ಆಗಿರುವ ನಟ ದರ್ಶನ್ ಅವರು ಆಸ್ಪತ್ರೆಯಿಂದ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮಿ ಅವರ ಪ್ರೆಸ್ಟೀಜ್ ಸೌತ್ ರಿಡ್ಜ್‌ನ ಫ್ಲಾಟ್‌ಗೆ ತೆರಳಿದ್ದಾರೆ. ದರ್ಶನ್ ಅವರು ಅಪಾರ್ಟ್‌ಮೆಂಟ್‌ಗೆ ಬರುವ ಹಿನ್ನೆಲೆಯಲ್ಲಿ ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿತ್ತು.
ಹೊರಕೆರೆಹಳ್ಳಿ ಅಪಾರ್ಟ್‌ಮೆಂಟ್‌ಗೆ ದರ್ಶನ್ ಬರೋದ್ರಿಂದ ಅಭಿಮಾನಿಗಳು ಕೂಡ ಜಮಾಯಿಸೋ ಸಾಧ್ಯತೆ ಇದೆ. ಹೀಗಾಗಿ ಅಪಾರ್ಟ್‌ಮೆಂಟ್ ಸೆಕ್ಯುರಿಟಿ ಸಿಬ್ಬಂದಿ ಫುಲ್ ಅಲರ್ಟ್ ಆಗಿದ್ದರು. ದರ್ಶನ್ ಸಹಚರರು ಅಪಾರ್ಟ್‌ಮೆಂಟ್ ಮುಂಭಾಗದಲ್ಲಿ ಸೇರಿದ್ದು ದರ್ಶನ್ ಅವರನ್ನು ಮನೆಗೆ ಬರಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ