ನಟ ದರ್ಶನ್ ಟೀಂನಲ್ಲಿದ್ದ ಈ ಮೂವರಿಗೆ ಗೇಟ್‌ ಪಾಸ್‌ ಕೊಟ್ಟ ವಿಜಯಲಕ್ಷ್ಮಿ; ಕಾರಣವೇನು?

author-image
admin
Updated On
ನಟ ದರ್ಶನ್ ಟೀಂನಲ್ಲಿದ್ದ ಈ ಮೂವರಿಗೆ ಗೇಟ್‌ ಪಾಸ್‌ ಕೊಟ್ಟ ವಿಜಯಲಕ್ಷ್ಮಿ; ಕಾರಣವೇನು?
Advertisment
  • ದಿನಕರ್, ವಿಜಯಲಕ್ಷ್ಮಿ ಕೈ ಸೇರಿದ ದರ್ಶನ್ ಇಡೀ ಸಾಮ್ರಾಜ್ಯ!
  • ನಟ ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಪತ್ನಿ ವಿಜಯಲಕ್ಷ್ಮಿ
  • ಆರ್.ಆರ್ ನಗರದಲ್ಲಿರುವ ವಿನಯ್‌ ಕೂಡ ದರ್ಶನ್‌ನಿಂದ ದೂರ!

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಜೀವನ ಶೈಲಿ ಈಗ ಬದಲಾಗಿದೆ. ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಅವರು ಸ್ವಲ್ಪ ದಿನ ವಿಶ್ರಾಂತಿಗೆ ಜಾರಿದ್ದು, ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾರೆ. ಇದೀಗ ನಟ ದರ್ಶನ್ ಸಾಮ್ರಾಜ್ಯ ಈಗ ತಮ್ಮ ದಿನಕರ್ ತೂಗುದೀಪ ಹಾಗು ಪತ್ನಿ ವಿಜಯಲಕ್ಷ್ಮಿ ಕೈ ಸೇರಿದೆ ಎನ್ನಲಾಗುತ್ತಿದೆ.

ನಟ ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಪತ್ನಿ ವಿಜಯಲಕ್ಷ್ಮಿ ಅವರು ರೇಣುಕಾಸ್ವಾಮಿ ಕೊಲೆಗೂ ಮುಂಚೆ ದರ್ಶನ್ ಸುತ್ತಾ ತಿರುಗುತ್ತಿದ್ದ ಹಲವರಿಗೆ ಗೇಟ್ ಪಾಸ್ ನೀಡುತ್ತಿದ್ದಾರೆ. ಪ್ರಮುಖವಾಗಿ ದರ್ಶನ್ ಕಾರು ಚಾಲಕ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜು ಅವರಿಂದ ದರ್ಶನ್ ಅವರು ಅಂತರ ಕಾಯ್ದುಕೊಂಡಿದ್ದಾರೆ.

publive-image

ರೇಣುಕಾಸ್ವಾಮಿ ಕೇಸ್‌ನಲ್ಲಿ ಡ್ರೈವರ್ ಲಕ್ಷ್ಮಣ್ ಹಾಗೂ ಮ್ಯಾನೇಜರ್ ನಾಗರಾಜ್ ಕೂಡ ಜೈಲು ಸೇರಿದ್ದರು. ಈ ಇಬ್ಬರಿಗೂ ದರ್ಶನ್‌ ಅವರಿಂದ ದೂರ ಇರಲು ವಕೀಲರು ಹೇಳಿದ್ದರು. ಲಾಯರ್ ಕೊಟ್ಟ ಸೂಚನೆಯ ಹಿನ್ನೆಲೆಯಲ್ಲಿ ಸದ್ಯಕ್ಕೆ ಪತ್ನಿ ವಿಜಯಲಕ್ಷ್ಮಿ ಅವರು ಲಕ್ಷ್ಮಣ್ ಹಾಗೂ ನಾಗರಾಜ್ ಇಬ್ಬರಿಗೂ ಗೇಟ್ ಪಾಸ್ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪಿ ಆರ್.ಆರ್ ನಗರದಲ್ಲಿರೋ ವಿನಯ್‌ಗೂ ವಿಜಯಲಕ್ಷ್ಮಿ ಅವರು ದರ್ಶನ್ ಟೀಂನಿಂದ ಗೇಟ್ ಪಾಸ್ ಕೊಟ್ಟಿದ್ದಾರೆ. ಸದ್ಯ ಸಿನಿಮಾ ಕೆಲಸ ಶುರುವಾಗೋವರೆಗೂ ದರ್ಶನ್‌ಗೆ ಮ್ಯಾನೇಜರ್ ಇಲ್ಲ. ದರ್ಶನ್‌ರನ್ನ ಭೇಟಿ ಮಾಡಲು ವಿಜಯಲಕ್ಷ್ಮಿ ಅಥವಾ ಸಹೋದರ ದಿನಕರ್ ತೂಗುದೀಪ್ ಮೂಲಕವೇ ಸಂಪರ್ಕಿಸಬೇಕು.

ಇದನ್ನೂ ಓದಿ: ದರ್ಶನ್‌ಗೆ ಸುಪ್ರೀಂಕೋರ್ಟ್‌ ಸಂಕಷ್ಟಕ್ಕಿಂತ ತುಂಬಾ ಅಪಾಯಕಾರಿ ಈ ಮಾಫಿ ಸಾಕ್ಷಿ; ಏನಿದು? ಮುಂದೇನಾಗುತ್ತೆ? 

ಸದ್ಯಕ್ಕೆ ದರ್ಶನ್ ಎಲ್ಲಾ ಜವಾಬ್ದಾರಿಯನ್ನು ಈಗ ವಿಜಯಲಕ್ಷ್ಮಿ ಅವರೇ ನೋಡಿಕೊಳ್ಳುತ್ತಿದ್ದಾರೆ. ಅತ್ತಿಗೆಯ ಜೊತೆಗೆ ನಾನು ಇದ್ದೇನೆ. ಸಿನಿಮಾ ಕೆಲಸಗಳು ಶುರುವಾದ ಮೇಲೆ ಎಲ್ಲರೂ ಬರುತ್ತಾರೆ ಎಂದು ದರ್ಶನ್ ಸಹೋದರ ದಿನಕರ್ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment