ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿಗೆ
ಎ2 ಆಗಿದ್ದ ದರ್ಶನ್ನನ್ನು ಎ1 ಮಾಡಲು ಸಜ್ಜಾದ ಪೊಲೀಸರು
ಜೂನ್ 8ರಂದು ಪಟ್ಟಣಗೆರೆ ಶೆಡ್ನಲ್ಲಿ ನಡೆದಿತ್ತು ಘನಘೋರ ಹತ್ಯೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಎ2 ಆಗಿದ್ದ ನಟ ದರ್ಶನ್ರನ್ನು ಪೊಲೀಸರು ಎ1 ಮಾಡಿ ಚಾರ್ಜ್‌ಶೀಟ್ ಸಲ್ಲಿಸೋಕೆ ನಿರ್ಧರಿಸಿದ್ದಾರೆ. ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡುವುದರಿಂದ ಹಿಡಿದು, ಹತ್ಯೆ ಮಾಡಿ ಸಾಕ್ಷ್ಯನಾಶಕ್ಕೆ ಯತ್ನಿಸೋವರೆಗೆ ಎಲ್ಲಾ ಕೃತ್ಯಗಳು ಸಾಬೀತಾಗಿದ್ದು, ಇದು ಡೆವಿಲ್ ಗ್ಯಾಂಗ್ಗೆ ಮಗ್ಗುಲ ಮುಳ್ಳಾಗಿವೆ. ಈ ಮಧ್ಯೆ ಸಿಎಫ್‌ಎಸ್‌ಎಲ್ ರಿಪೋರ್ಟ್ ಕೂಡಾ ಪೊಲೀಸರ ಕೈ ಸೇರಿದ್ದು, ಹಲವು ಅಂಶಗಳು ರಿವೀಲ್ ಆಗಿವೆ.
ಇದನ್ನೂ ಓದಿ: ಬಿಗ್ಬಾಸ್ಗೆ ಹೋಗಲು ಸಜ್ಜಾದ್ರಾ ಡಾ. ಬ್ರೋ? ಈ ಬಗ್ಗೆ ಖ್ಯಾತ ಯೂಟ್ಯೂಬರ್ ಹೇಳಿದ್ದೇನು?
ನಟ ದರ್ಶನ್ ಗ್ಯಾಂಗ್ ಕಳೆದ ಜೂನ್ 8ರಂದು ಪಟ್ಟಣಗೆರೆ ಶೆಡ್ನಲ್ಲಿ ಎಸಗಿದ್ದ ಘನಘೋರ ಕ್ರೌರ್ಯ ಮುಳ್ಳಾಗಿ ಚುಚ್ಚುತ್ತಿದೆ. ಫೋಸ್ಟ್ ಮಾರ್ಟಂ, ಎಫ್‌ಎಸ್‌ಎಲ್, ಸಿಸಿಟಿವಿ, ಕಾಲ್ ಡಿಟೇಲ್ಸ್, ಸಾಂದರ್ಭಿಕ ಸಾಕ್ಷ್ಯಗಳು ಡಿ ಗ್ಯಾಂಗ್ ಕೃತ್ಯದತ್ತ ಬೊಟ್ಟು ಮಾಡಿದ್ದು ಸಂಕಷ್ಟದ ಸುರುಳಿ ಸುತ್ತಿದೆ. ದರ್ಶನ್ ಮತ್ತು ಪಟಾಲಂಗೆ ಒಂದು ಕ್ಷಣ ಮನುಷ್ಯತ್ವ ಮರೆತಿದ್ದಕ್ಕೆ ಎದುರಾದ ಸಂಕಷ್ಟ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಪಟ್ಟಣಗೆರೆ ಶೆಡ್ನಲ್ಲಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದವರಿಗೆ ಈಗಾಗಲೇ ಶಿಕ್ಷೆಯ ಫಲಪ್ರಾಪ್ತಿಯಾಗಿದೆ. ಈ ಮಧ್ಯೆ ಚಾರ್ಜ್‌ಶೀಟ್ ಸಲ್ಲಿಕೆಗೆ ಸಜ್ಜಾಗಿರೋ ಪೊಲೀಸರಿಗೆ ಮತ್ತೊಂದು ಮಹತ್ವದ ಅಂಶ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಸಿಎಫ್‌ಎಸ್‌ಎಲ್ ರಿಪೋರ್ಟ್ ತನಿಖಾಧಿಕಾರಿಗಳ ಕೈ ಸೇರಿದೆ. ದರ್ಶನ್, ಪವಿತ್ರಗೌಡ ಸೇರಿ ಡೆವಿಲ್ ಗ್ಯಾಂಗ್‌ನ ಮೊಬೈಲ್ ರಿಟ್ರೀವ್‌ನಲ್ಲಿ ಮಹತ್ವದ ಅಂಶಗಳು ಪತ್ತೆಯಾಗಿವೆ.
ಪೊಲೀಸರ ಕೈ ಸೇರಿದ ವರದಿ
ಹೈದ್ರಾಬಾದ್‌ನಲ್ಲಿರೋ ಕೇಂದ್ರಿಯ ವಿಧಿವಿಜ್ಞಾನ ಪ್ರಯೋಗಾಯಲಕ್ಕೆ ಹಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನ ಪೊಲೀಸರು ಕಳಿಸಿಕೊಟ್ಟಿದ್ರು. ಮೊಬೈಲ್, ಕೆಲ ಸಿಸಿಟಿವಿ ಡಿವಿಆರ್‌ಗಳನ್ನ ರಿಟ್ರೀವ್ ಮಾಡಲು ತನಿಖಾ ತಂಡ ಕಳುಹಿಸಿ ಕೊಟ್ಟಿತ್ತು. ಇದೀಗ ದರ್ಶನ್, ಪವಿತ್ರ ಗೌಡ ಸೇರಿ 13 ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲಾಗಿದೆ. ಎಲ್ಲಾ 17 ಕೊಲೆ ಆರೋಪಿಗಳ ವಾಟ್ಸ್ ಆ್ಯಪ್ ಚಾಟಿಂಗ್‌ನೆಲ್ಲಾ ರಿಟ್ರೀವ್ ಮಾಡಲಾಗಿದೆ. ಇದೀಗ ಸಿಎಸ್‌ಎಫ್ಎಲ್ ರಿಟ್ರೀವ್ ಮಾಡಿರೋ ಶೇಕಡ 100ರಷ್ಟು ಟೆಕ್ನಿಕಲ್ ಎವಿಡೆನ್ಸ್‌ಗಳು ತನಿಖಾಧಿಕಾರಿಗಳ ಕೈ ಸೇರಿದೆ. CFSL ನಿಂದ ಬಂದಿರೋ ವರದಿಯನ್ನ ತನಿಖಾ ತಂಡ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: ಹುಡುಗಿಯರಿಗೆ ಈ ಕೆಟ್ಟ ಅಭ್ಯಾಸವಿದ್ರೆ ಲಕ್ಷ್ಮೀ ಕೋಪಿಸಿಕೊಳ್ತಾಳೆ.. ನಿಮ್ಮ ಕೈಯಲ್ಲಿ ದುಡ್ಡು ನಿಲ್ಲಲ್ಲ..!
ಈಗಾಗಲೇ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‌ಎಲ್ ವರದಿ ಎರಡೂ ತಾಳೆ ಆಗಿದೆ. ರೇಣುಕಾಸ್ವಾಮಿಗೆ ಗಂಭೀರ ಹಲ್ಲೆ ಮಾಡಲಾಗಿದೆ. ಅಲ್ಲದೇ ಕರೆಂಟ್ ಶಾಕ್‌ನಿಂದ ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿರೋದಾಗಿ ವರದಿ ಬಂದಿದೆ. ಇದರ ಜೊತೆಗೆ ಹತ್ಯೆಗೂ ಮುನ್ನ ಮತ್ತು ಕೊಲೆಯ ನಂತರ ಆರೋಪಿಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡಿರೋದು ಸಿಎಫ್ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಿದೆ.
CFSL ರಿಪೋರ್ಟ್‌ನಲ್ಲಿ ಏನಿದೆ?
ಸಿ.ಡಿ.ಆರ್ ಅನಾಲಿಸಿಸ್‌ಲ್ಲಿ 17 ಆರೋಪಿಗಳು ಪರಸ್ಪರ ಮಾತಾಡಿರೋದು ಕನ್ಫರ್ಮ್ ಆಗಿದೆ. ಸಮಾನ ಉದ್ದೇಶದಿಂದ ಪದೇ ಪದೇ ಒಬ್ಬರಿಗೊಬ್ಬರು ಕರೆ ಮಾಡಿರೋದು ದೃಢಪಟ್ಟಿದೆ. ಎಲ್ಲಾ ಆರೋಪಿಗಳ ಮೊಬೈಲ್‌ನಲ್ಲಿ ಚಾಟಿಂಗ್ ಇಂಟರ್ ಎಕ್ಸ್‌ಚೇಂಜ್ ಆಗಿದೆ. ಎಲ್ಲಾ ಚಾಟಿಂಗ್‌ಗಳನ್ನ ಮಿರರ್ ಇಮೇಜ್ ಮಾಡುವ ಕಾರ್ಯವನ್ನ ಮಾಡಿರುವ ವರದಿ ಪೊಲೀಸರ ಕೈ ಸೇರಿದೆ. ಇದೀಗ ವಾಟ್ಸ್‌ಆ್ಯಪ್ ಚಾಟ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳು ಕೇಸ್‌ಗೆ ಪ್ರಮುಖ ಸಾಕ್ಷ್ಯ ಆಗೋದು ಪಕ್ಕಾ ಆಗಿದೆ. ತನಿಖೆ ವೇಳೆ ಸಿಕ್ಕಿರುವ ಎಲ್ಲಾ ಸಾಕ್ಷ್ಯಗಳನ್ನು ಲೆಕ್ಕಾಚಾರ ಮಾಡಿದ್ರೆ, ಈ ಹತ್ಯೆ ಆಕಸ್ಮಿಕ ಅಲ್ಲ ಅನ್ನೋದು ಗೊತ್ತಾಗುತ್ತೆ. ಒಟ್ಟಾರೆ, ನಟ ದರ್ಶನ್ ಹಾಗೂ ಗ್ಯಾಂಗ್ ಪರಿಸ್ಥಿತಿ ಮಾಡಿದ್ದುಣ್ಣೋ ಮಹರಾಯ ಎನ್ನುವಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ