ಥಾಯ್ಲೆಂಡ್​ಗೆ ಹಾರಿದ ದರ್ಶನ್​ಗೆ ಬೇಲ್‌ ಟೆನ್ಶನ್‌.. ಕಪಿಲ್ ಸಿಬಲ್ ವಾದದ ಮೇಲೆ ನಿಂತಿದೆ ‘ದಾಸ’ನ ಭವಿಷ್ಯ!

author-image
Veena Gangani
Updated On
ದರ್ಶನ್​ಗೆ ನಾಳೆ ಬಿಗ್​ ಡೇ.. ಸುಪ್ರೀಂಕೋರ್ಟ್ ನಿರ್ಧಾರದ ಮೇಲೆ ನಟನ ಜಾಮೀನು​​ ಭವಿಷ್ಯ
Advertisment
  • ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ ಮೊರೆ
  • ಡೆವಿಲ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್
  • ಪ್ರಕರಣದ ಸಾಕ್ಷಿ ಜತೆ ಕಾಣಿಸಿಕೊಂಡಿರುವ ದರ್ಶನ್

ಪಟ್ಟಣಗೆರೆ ಶೆಡ್‌ ರಕ್ತಚರಿತ್ರೆ ನಡೆದು ವರ್ಷವೇ ಉರುಳಿದೆ. ರೇಣುಕಾಸ್ವಾಮಿ ಮೇಲೆ ಕ್ರೌರ್ಯ ಮೆರೆದಿದ್ದ ಡೆವಿಲ್ ಗ್ಯಾಂಗ್‌ ಬೇಲ್ ಮೇಲೆ ಹೊರಗಿದೆ. ಕತ್ತಲಕೋಣೆ ದರ್ಶನದ ಬಳಿಕ ದಾಸ ಜಾಲಿ ಮೂಡ್‌ನಲ್ಲಿದ್ದಾರೆ. ಇದೇ ವೇಳೆ ಸುಪ್ರೀಂಕೋರ್ಟ್‌ನಲ್ಲಿ ಸಾರಥಿಯ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ. ವಾದ-ಪ್ರತಿವಾದದ ಬಳಿಕ ಅತೃಪ್ತಿಯಲ್ಲೇ ಕೋರ್ಟ್‌ ಬೇಲ್‌ ಅರ್ಜಿ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿ ದರ್ಶನ್​​ಗೆ ಜಾಮೀನು ನೀಡಿಲ್ಲ -ಸುಪ್ರೀಂ ಕೋರ್ಟ್​ ಅತೃಪ್ತಿ

publive-image

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ 2ನೇ ಆರೋಪಿ. ಸದ್ಯ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ ಜಾಮೀನು ನೀಡಿದ್ದು, ದಾಸ ಜೈಲು ವಾಸದಿಂದ ಮುಕ್ತಿ ಪಡೆದಿದ್ದಾರೆ. ರೆಗ್ಯೂಲರ್ ಜಾಮೀನು ಪಡೆದು ಸದ್ಯ ಥಾಯ್ಲೆಂಡ್‌ನಲ್ಲಿ ಜಾಲಿ ಮೂಡ್‌ಗೆ ಜಾರಿದ್ದಾರೆ. ಡೆವಿಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಹೈಕೋರ್ಟ್ ನೀಡಿದ್ದ ಬೇಲ್‌ನ ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಇವತ್ತು ದಾಸನ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೀತು. ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠ ಸರ್ಕಾರರದ ಪರ ವಕೀಲ ಸಿದ್ದಾರ್ಥ್ ಲೂಥ್ರಾ ಮತ್ತು ದರ್ಶನ್ ಪರ ವಕೀಲ ಕಪಿಲ್ ಸಿಬಲ್‌ರ ವಾದವನ್ನ ಆಲಿಸಿತು.

publive-image

ನ್ಯಾ. ಪರ್ದಿವಾಲಾ: ಹೈಕೋರ್ಟ್ ತನ್ನ ವಿವೇಚನೆ ಸರಿಯಾಗಿ ಬಳಸಿಲ್ಲವೆಂದು ಭಾವಿಸುತ್ತೇವೆ. ಹೈಕೋರ್ಟ್ ಹೇಗೆ ಆದೇಶ ನೀಡಿದೆ ಅನ್ನೋದನ್ನ ನೀವೂ ಗಮನಿಸಿರ್ತೀರಿ.

ಕಪಿಲ್ ಸಿಬಲ್: ಹೈಕೋರ್ಟ್​ ಮಾಡಿದ್ದನ್ನ ಮರೆತುಬಿಡಿ. 161 ಮತ್ತು 164 ಹೇಳಿಕೆಗಳನ್ನ, ಸಾಕ್ಷಿಗಳನ್ನ ಗಮನಿಸಿ

ನ್ಯಾ. ಪರ್ದಿವಾಲಾ: ನಾನು ನಿಮಗೆ ಕೆಲ ವಿಚಾರಗಳನ್ನ ತೋರಿಸುತ್ತೇನೆ. ಅದನ್ನ ಗುರುತು ಹಾಕೋದು ಮರೆತಿದೆ. ನಿಮ್ಮ ವಾದವನ್ನ ನಾವು ಮಂಗಳವಾರ ಆಲಿಸುತ್ತೇವೆ. ನಿಮ್ಮ ಸಬ್​ಮಿಷನ್​ಗಳನ್ನ ನೀವು ಸಿದ್ಧವಾಗಿಟ್ಟುಕೊಳ್ಳಿ. ನಾವ್ಯಾಕೆ ಮಧ್ಯಪ್ರವೇಶ ಮಾಡಬಾರದು ಅನ್ನೋ ನಿಮ್ಮ ವಾದವನ್ನ ಆಲಿಸುತ್ತೇವೆ. ಜುಲೈ 22ರಂದು ವಿಚಾರಣೆಯನ್ನ ನಡೆಸುತ್ತೇವೆ.

ಕಪಿಲ್ ಸಿಬಲ್ : ಮಾರ್ಕ್ ಮಾಡಿರುವ ಭಾಗ ಯಾವುದು ಅಂತ ಮಾನ್ಯ ಕೋರ್ಟ್ ತಿಳಿಸಬಹುದೇ?

ನ್ಯಾ. ಪರ್ದಿವಾಲಾ: ದರ್ಶನ್‌ಗೆ ಹೇಗಾದರೂ ಜಾಮೀನು ಕೊಡಬೇಕು. ಒಂದು ಅಂಶ ಸಿಕ್ಕಿದರೂ ಸಾಕು ಜಾಮೀನು ಕೊಟ್ಟು ಬಿಡೋಣ ಎನ್ನುವ ಚಡಪಡಿಕೆ ಹೈಕೋರ್ಟ್‌ಗೆ ಕಾಣಿಸುತ್ತಿದೆ. ಈ ಚಡಪಡಿಕೆ ಇರುವ ಭಾಗ.

ಸಿದ್ದಾರ್ಥ್ ಲೂಥ್ರಾ : ಅವರು ನಮ್ಮ ಪ್ರಮುಖ ಸಾಕ್ಷಿಯ ಜೊತೆ ವೇದಿಕೆಯನ್ನ ಹಂಚಿಕೊಂಡಿದ್ದರು. ಇದು ಸ್ವಲ್ಪ ಗೊಂದಲಮಯವಾಗಿದೆ

ಕಪಿಲ್ ಸಿಬಲ್ : ಅವರು ಪ್ರಮುಖ ಸಾಕ್ಷಿಯಲ್ಲ

ಸಿದ್ದಾರ್ಥ್ ಲೂಥ್ರಾ : ಪ್ರಮುಖ ಸಾಕ್ಷಿ ಅನ್ನೋದರ ವ್ಯಾಖ್ಯಾನ ಏನು ಅನ್ನೋದು ನನಗೆ ಗೊತ್ತಿಲ್ಲ

ಹೀಗೆ ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್‌ ಪೀಠ, ರಾಜ್ಯ ಹೈಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಅತೃಪ್ತಿಯನ್ನ ಹೊರಹಾಕ್ತು. ತೀರ್ಪಿನಲ್ಲಿ ಹೈಕೋರ್ಟ್‌ ವಿವೇಚನೆ ಬಳಸಿದಂತೆ ಕಾಣುತ್ತಿಲ್ಲ ಅಂತ ಸುಪ್ರೀಂಕೋರ್ಟ್‌ ಅಸಮಾಧಾನ ಹೊರಹಾಕ್ತು. ಅಲ್ಲದೇ ಜುಲೈ 22ಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನ ಮುಂದೂಡಿಕೆ ಮಾಡಿದೆ. ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದು ಕೋರಿ ಮಾಡಿರೋ ರಾಜ್ಯ ಸರ್ಕಾರದ ಪರ ವಕೀಲರ ವಾದ ಮುಗಿದಿದೆ. ಇದೀಗ ಜುಲೈ 22ಕ್ಕೆ ದಾಸನ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ. ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್‌ ಅಸಮಧಾನ ವ್ಯಕ್ತಪಡಿಸಿರೋ ಬಗ್ಗೆ ಸರ್ಕಾರಿ ವಕೀಲ ಅನಿಲ್ ನಿಶಾನಿ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ದರ್ಶನ್ ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ಥಾಯ್ಲೆಂಡ್‌ನಲ್ಲಿದ್ದಾರೆ. ಒಂದು ವೇಳೆ ಜುಲೈ 22ರಂದು ದರ್ಶನ್ ವಿರುದ್ಧ ಆದೇಶ ಬಂದ್ರೆ, ಮತ್ತೆ ಸಂಕಷ್ಟ ಕಟ್ಟಿಟ್ಟಬುತ್ತಿ. ಆದ್ರೆ, ಡೆವಿಲ್ ಭವಿಷ್ಯ ಕಪಿಲ್ ಸಿಬಲ್ ವಾದ ಮಂಡನೆ ಮೇಲೆ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment