/newsfirstlive-kannada/media/post_attachments/wp-content/uploads/2024/10/DARSHAN_BAIL.jpg)
ಬೆಂಗಳೂರು: ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರಿಗೆ ಬೆನ್ನು ನೋವು ವಿಪರೀತವಾಗಿ ಕಾಡುತ್ತಿದೆ. ಕುಟುಂಬಸ್ಥರ ಬಳಿ ಭಾವುಕರಾಗಿರುವ ದರ್ಶನ್ ಅವರು ತಮ್ಮ ಕಷ್ಟಗಳನ್ನ ಹೇಳಿಕೊಂಡಿದ್ದು, ಇಂದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ಗೆ ಜೈಲಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ಅವರು ಬೆನ್ನು ನೋವಿನ ಸಮಸ್ಯೆ ಹೇಳಿ ಕುಟುಂಬಸ್ಥರ ಮುಂದೆ ಭಾವುಕರಾಗಿದ್ದಾರೆ. ದರ್ಶನ್ ಅವರಿಗೆ ಕುಟುಂಬಸ್ಥರು ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್​ಗೆ ತಾತ್ಕಾಲಿಕ ರಿಲೀಫ್; ಕೋರ್ಟ್​​ ವಿಧಿಸಿದ 8 ಷರತ್ತುಗಳೇನು..?
ದರ್ಶನ್ ಅವರು ಬೆನ್ನು ನೋವು ತಾಳಲಾರದೆ ಜೈಲಲ್ಲಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರಂತೆ. ಕುಳಿತುಕೊಳ್ಳಲು ಚೇರ್ ಹಾಗು ಮಲಗಲು ಜೈಲಲ್ಲಿ ಹಾಸಿಗೆ ವ್ಯವಸ್ಥೆ ಸಿಗದ ಹಿನ್ನೆಲೆ ವಿಪರೀತ ಬೆನ್ನು ನೋವಿನಿಂದ ಒದ್ದಾಡಿದ್ದಾರೆ. ಕುಳಿತುಕೊಳ್ಳಲು ಚೇರ್, ಮಲಗಲು ಹಾಸಿಗೆ ಇಲ್ಲದ್ದರಿಂದ ಬೆನ್ನು ನೋವು ಜಾಸ್ತಿಯಾಗಿ ನರಳಾಟ ಅನುಭವಿಸಿದ್ದಾರೆ. ಎಷ್ಟೋ ಬಾರಿ ಸರ್ಜಿಕಲ್ ಕಮೋಡ್ ಮೇಲೆ ಕುಳಿತು ದರ್ಶನ್ ಕಾಲ ಕಳೆದಿದ್ರಂತೆ. ಜೈಲಲ್ಲಿ ದರ್ಶನ್ ಅವರು ಸರ್ಜಿಕಲ್ ಕಮೋಡ್ ಮೇಲೆ ಕುಳಿತು ರಿಲ್ಯಾಕ್ಸ್ ಮಾಡಿದ್ದರಂತೆ.
ಜಾಮೀನಿನ ಮೇಲೆ ಬಿಡುಗಡೆಯಾದ ದರ್ಶನ್ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಆಗಮಿಸುವಾಗ ಬೆನ್ನು ನೋವಿನಿಂದ ನರಳಾಡಿದ್ದಾರೆ. ಕೂತಲ್ಲಿ ಕೂರಲಾಗದೆ ನೋವಿನಿಂದ ಚಡಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಕುಟುಂಬಸ್ಥರು ಹಿರಿಯ ತಜ್ಞ ವೈದ್ಯರ ಅಭಿಪ್ರಾಯ ಪಡೆದಿದ್ದು, ಇವತ್ತೇ ದರ್ಶನ್ ಅವರನ್ನ ಆಸ್ಪತ್ರೆಗೆ ದಾಖಲು ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ದರ್ಶನ್ ಮೇಲೆ ಹದ್ದಿನ ಕಣ್ಣಿಟ್ಟ ಪೊಲೀಸರು.. ಎಚ್ಚರಿಕೆಯ ಹೆಜ್ಜೆ! ಆಸ್ಪತ್ರೆಗೆ ದಾಖಲು ಯಾವಾಗ?
ದರ್ಶನ್ ಅವರು ಇಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. ದರ್ಶನ್ ಕುಟುಂಬಸ್ಥರು ಹಿರಿಯ ನರರೋಗ ತಜ್ಞ ಡಾ. ನವೀನ್ ಅವರನ್ನು ಸಂಪರ್ಕ ಮಾಡಿದ್ದಾರೆ. ಮೊಬೈಲ್‌ನಲ್ಲಿ MRI ಸ್ಕ್ಯಾನ್ ಕಾಪಿ ಕಳುಹಿಸಿ ವೈದ್ಯರ ಅಭಿಪ್ರಾಯ ಕೇಳಿದ್ದಾರೆ. ಇದೇ ರೀತಿ ಜಯನಗರದ ಅಪೊಲೋ ಆಸ್ಪತ್ರೆಯ ಡಾ. ಕೃಷ್ಣ ಚೈತನ್ಯ ಅವರಿಗೂ MRI ಸ್ಕ್ಯಾನ್ ರಿಪೋರ್ಟ್ ಕಳುಹಿಸಿ ಅಭಿಪ್ರಾಯ ಪಡೆದಿದ್ದಾರೆ.
BGS ಆಸ್ಪತ್ರೆಗೆ ಬಿಗಿ ಭದ್ರತೆ!
ದರ್ಶನ್ ಅವರು ಕೆಂಗೇರಿಯ BGS ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದ್ದು, ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿದ್ದಾರೆ. ಆಸ್ಪತ್ರೆಯ ಮುಂದೆ ದರ್ಶನ್ ಫ್ಯಾನ್ಸ್ ಜಮಾಯಿಸುವ ಸಾಧ್ಯತೆ ಇದೆ. ಹೀಗಾಗಿ ಆಸ್ಪತ್ರೆಯ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಹಾಗೂ KSRP ತುಕಡಿ ಮತ್ತು ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಕೈಗೊಳ್ಳಲಾಗುತ್ತಿದೆ.
ದರ್ಶನ್‌ಗೆ ಯಾವೆಲ್ಲಾ ಪರೀಕ್ಷೆ ಮಾಡಲಾಗುತ್ತೆ?
ಆಸ್ಪತ್ರೆಗೆ ದಾಖಲಾದ ಕೂಡಲೇ ನಟ ದರ್ಶನ್‌ಗೆ ಹಲವು ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಪ್ರಮುಖವಾಗಿ ತೀವ್ರ ಬೆನ್ನುನೋವು ಕಾಡ್ತಿರೋ ಹಿನ್ನೆಲೆಯಲ್ಲಿ ಮೊದಲಿಗೆ ಫಿಸಿಯೋ ಥೆರಪಿ ಮಾಡಲಾಗುತ್ತಿದೆ. ಫಿಸಿಯೋ ಥೆರಪಿಯಲ್ಲಿ ಬೆನ್ನು ನೋವು ಗುಣವಾಗದಿದ್ದಲ್ಲಿ ಸರ್ಜರಿ ಮಾಡಬೇಕಾಗುತ್ತದೆ. ECG, ಸ್ಕ್ಯಾನಿಂಗ್, BP, ಶುಗರ್, ರಕ್ತ ಪರೀಕ್ಷೆ, ಲಿವರ್ ಫಂಕ್ಷನ್ ಟೆಸ್ಟ್ (LFT) ಮಾಡಿ ನಾಳೆಯೊಳಗೆ ದರ್ಶನ್ ಕುಟುಂಬಸ್ಥರಿಗೆ ವರದಿ ನೀಡಲಾಗುತ್ತದೆ. ಆ ಬಳಿಕ ದರ್ಶನ್ ಕುಟುಂಬಸ್ಥರು ಸರ್ಜರಿ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ