/newsfirstlive-kannada/media/post_attachments/wp-content/uploads/2024/06/DARSHAN_FAN_1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಆ್ಯಂಡ್ ಗ್ಯಾಂಗ್​ ಜೈಲು ಪಾಲಾಗಿದೆ. ಆದರೆ ದರ್ಶನ್ ಅರೆಸ್ಟ್ ಆಗ್ತಿದ್ದಂತೆ ನಾಲಿಗೆ ಹರಿಬಿಟ್ಟಿದ್ದ ಡಿ-ಬಾಸ್​ ಅಭಿಮಾನಿಯೊಬ್ಬ ಅರೆಸ್ಟ್ ಆಗಿದ್ದಾನೆ. ನಿರ್ಮಾಪಕ ಉಮಾಪತಿ ಅವರಿಗೆ ಬೆದರಿಕೆ ಹಾಕಿದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಚೇತನ್​ನನ್ನ ಬಂಧಿಸಿ ಹೇಳಿಕೆ ಪಡೆದುಕೊಂಡಿದ್ದಾರೆ.
ದರ್ಶನ್ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಉಮಾಪತಿಯವರು ಮಾತನಾಡಿದ್ದರು. ಇವರಿಗೆ ಅಭಿಮಾನಿ ಚೇತನ್ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿತ್ತು. ಇದಾರ ಆಧಾರದ ಮೇಲೆ ಚೇತನ್ ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 504, 506 ಅಡಿ ಚೇತನ್​ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
/newsfirstlive-kannada/media/post_attachments/wp-content/uploads/2024/06/Umapathy-gowda-On-Darshan-Arrest-Case-1.jpg)
ಸದ್ಯ ಪೊಲೀಸರ ಸಮ್ಮುಖದಲ್ಲಿ ವಿಡಿಯೋದಲ್ಲಿ ಮಾತನಾಡಿರುವ ಚೇತನ್, ಸರ್​ ನನ್ನ ಹೆಸರು ಚೇತನ್ ಅಂತ. ನಟ ದರ್ಶನ್ ಅವರ ಅಭಿಮಾನಿ ಆಗಿದ್ದೇನೆ. ಆವತ್ತು ಅನ್ನಪೂರ್ಣೇಶ್ವರಿ ದೇವಾಸ್ಥಾನ ಹತ್ತಿರ ಹೋಗಿದ್ದೆ. ಈ ವೇಳೆ ಉಮಾಪತಿ ಶ್ರೀನಿವಾಸ್ ಹಾಗೂ ಪ್ರಥಮ್ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದೇನೆ. ಕಾನೂನು ಪ್ರಕಾರ ಏನಿದೆ ಅದಕ್ಕೆ ನಾನು ತಲೆ ಬಾಗುತ್ತೇನೆ. ನನ್ನಿಂದ ಏನೇ ತಪ್ಪಾಗಿದ್ದರೂ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us