/newsfirstlive-kannada/media/post_attachments/wp-content/uploads/2024/06/DARSHAN-JAIL-2-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗ್ತಿದ್ದಂತೆ ನಾಲಿಗೆ ಹರಿಬಿಟ್ಟಿದ್ದ ಡಿಬಾಸ್ ಅಭಿಮಾನಿಯೊಬ್ಬ ಅರೆಸ್ಟ್ ಆಗಿದ್ದಾನೆ. ಚೇತನ್ ಬಂಧನಕ್ಕೆ ಒಳಗಾದ ದರ್ಶನ್ ಅಭಿಮಾನಿ.
ಆರೋಪಿ ಚೇತನ್ನನ್ನು ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ದರ್ಶನ್ ಬಂಧನ ಬೆನ್ನಲ್ಲೇ ನಿರ್ಮಾಪಕ ಉಮಾಪತಿಗೆ ಬೆದರಿಕೆ ಚೇತನ್ ಬೆದರಿಕೆ ಹಾಕಿದ್ದ. ಬಂಧಿತ ಆರೋಪಿ ಚೇತನ್ ಇತರೆ ದರ್ಶನ್ ಅಭಿಮಾನಿಗಳಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದ. ಈ ಸಂಬಂಧ ಐಪಿಸಿ ಸೆಕ್ಷನ್ 504, 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಿರ್ಮಾಪಕ ಉಮಾಪತಿ ಗೌಡರಿಗೆ ಬೆದರಿಕೆ ಹಾಕಿ ಅವಹೇಳನಕಾರಿಯಾಗಿ ಮಾತನಾಡಿದ್ದ. ಈ ಸಂಬಂಧ ಉಮಾಪತಿ ಗೌಡ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಜೈಲಲ್ಲಿ ದರ್ಶನ್ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ