ದರ್ಶನ್‌ಗೆ ಸುಪ್ರೀಂಕೋರ್ಟ್‌ ಸಂಕಷ್ಟಕ್ಕಿಂತ ತುಂಬಾ ಅಪಾಯಕಾರಿ ಈ ಮಾಫಿ ಸಾಕ್ಷಿ; ಏನಿದು? ಮುಂದೇನಾಗುತ್ತೆ?

author-image
admin
Updated On
ಮೈಸೂರಲ್ಲಿ ಮಹತ್ವದ ನಿರ್ಧಾರಕ್ಕೆ ಬಂದ ನಟ ದರ್ಶನ್.. ಏನದು..?
Advertisment
  • ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದು ಮಾಫಿ ಸಾಕ್ಷಿಯಿಂದ
  • ನಾನ್ ಬೇಲಬಲ್ ಸೆಕ್ಷನ್​​ ಇರುವ 3 ಆರೋಪಿಗಳ ಸಾಕ್ಷಿ ನಿರ್ಣಾಯಕ
  • ಪವಿತ್ರಾ ಕಡೆ ದರ್ಶನ್ ತಿರುಗಿ ನೋಡದೇ ಇರಲು ಇದೇ ಕಾರಣ!

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್‌ಗೆ ಅತಿ ದೊಡ್ಡ ಸಂಕಷ್ಟ ಎದುರಾಗಿದೆ. ಅದು ಸುಪ್ರೀಂಕೋರ್ಟ್‌ ಸಂಕಷ್ಟಕ್ಕಿಂತ ತುಂಬಾ ಅಪಾಯಕಾರಿಯಾದದ್ದು. ಪೊಲೀಸರ ಮಾಫಿ ಸಾಕ್ಷಿ ವಿಚಾರ ದರ್ಶನ್‌ಗೆ ಮತ್ತೊಮ್ಮೆ ದೊಡ್ಡ ಟೆನ್ಶನ್‌ ತಂದಿರೋದಂತೂ ಸುಳ್ಳಲ್ಲ.

ನಿನ್ನೆ ಸೆಷನ್ಸ್‌ ಕೋರ್ಟ್‌ ಅಂಗಳಕ್ಕೆ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಇತರೆ ಆರೋಪಿಗಳು ಖುದ್ದು ಹಾಜರಾಗಿದ್ದರು. ಈ ವೇಳೆ ದರ್ಶನ್ ಪರ ವಕೀಲರು ಪೊಲೀಸರ ಮೇಲೆ ನ್ಯಾಯಾಧೀಶರ ಬಳಿ ದೂರು ಹೇಳಿದರು. ಪೊಲೀಸರು ಈ ಪ್ರಕರಣದ ಇತರೆ ಆರೋಪಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

publive-image

ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜೈಲು ಸೇರಿದ್ದು ಕೂಡ ಈ ಮಾಫಿ ಸಾಕ್ಷಿಯಿಂದಲೇ. ಹೀಗಾಗಿಯೇ ಮಾಫಿ ಸಾಕ್ಷಿ ಹೇಳಿದ್ರೆ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಲಾಕ್ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ‘ದರ್ಶನ್​ ವಿರುದ್ಧ ಮತ್ತೆ ಪೊಲೀಸರ ಸಂಚು’- ಡಿಗ್ಯಾಂಗ್‌ ಕೋರ್ಟ್‌ಗೆ ಹಾಜರಾದ ಬಳಿಕ ವಕೀಲರ ಆರೋಪ 

ಏನಿದು ಮಾಫಿ‌ ಸಾಕ್ಷಿ?
ಆರೋಪಿಗಳು ಮತ್ತೊಬ್ಬ ಆರೋಪಿ ಕೃತ್ಯದ ಬಗ್ಗೆ ಸಾಕ್ಷಿ ಹೇಳುವುದು
ಐ-ವಿಟ್ನೆಸ್ ಆಗಲಿದೆ ಪ್ರಕರಣದ ಆರೋಪಿಗಳ ಮಾಫಿ ಸಾಕ್ಷಿ
ಇದರಿಂದಾಗಿ ಆರೋಪಿಗಳಿಗೆ ಶಿಕ್ಷೆಯಾಗುವ ಸಾಧ್ಯತೆಯೇ ಹೆಚ್ಚು
ದರ್ಶನ್ ಕೇಸ್​​ನಲ್ಲಿ ‌ಇದೇ ಪ್ರಯತ್ನ ಆಗುತ್ತಿದೆ ಎಂಬ ಆರೋಪ
ಜಡ್ಜ್ ಮುಂದೆ ದರ್ಶನ್ ವಕೀಲರಿಂದ ಪೊಲೀಸರ ನಡೆಗೆ ಆಕ್ಷೇಪ
ಕೊಲೆ ಆರೋಪಿಗಳ ಪೈಕಿ ಯಾರು ಮಾಫಿ ಸಾಕ್ಷಿ ಹೇಳಬಹುದು?
ನಾನ್ ಬೇಲಬಲ್ ಸೆಕ್ಷನ್​​ ಇರುವ ಆರೋಪಿಗಳು ಹೇಳಬಹುದು
ಕಡೆಯ ಆರೋಪಿಗಳಾದ ನಿಖಿಲ್ ನಾಯಕ್, ಕೇಶವಮೂರ್ತಿ
ಕಾರ್ತಿಕ್, ರೇಣುಕಾ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಬಹುದು
ಈ ಮೂರು ಆರೋಪಿಗಳ ಮಾಫಿ ಸಾಕ್ಷ್ಯ ಐ ವಿಟ್ನೆಸ್ ಆಗಲಿದೆ

publive-image

ಪವಿತ್ರಾ ಗೌಡ ಸೇಫ್‌!
ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಮಾಫಿ ಸಾಕ್ಷಿ ಹೇಳಿದ್ರು ಬಚಾವ್ ಆಗುವ ಸಾಧ್ಯತೆ ಇದೆ. ಆರೋಪಿಗಳಾದ ನಿಖಿಲ್ ನಾಯಕ್, ಕೇಶವಮೂರ್ತಿ, ಕಾರ್ತಿಕ್ ಅವರು ಪವಿತ್ರಾ ಗೌಡ ಅವರ ಸಂಪರ್ಕದಲ್ಲಿ ಇರಲಿಲ್ಲ. ದರ್ಶನ್ ಜೊತೆ ಮಾತ್ರ ಆರೋಪಿಗಳು ಸಂಪರ್ಕದಲ್ಲಿ ಇದ್ದರು. ಹೀಗಾಗಿ ಪವಿತ್ರಾಗೆ ಮಾಫಿ ಸಾಕ್ಷಿಗಳಿಂದ ಯಾವುದೇ ಸಂಕಷ್ಟ ಇಲ್ಲ.
ಮಾಫಿ ಸಾಕ್ಷಿಯ ಈ ಭೀತಿಯ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಪವಿತ್ರಾ ಗೌಡ ಅವರ ಕಡೆ ತಿರುಗಿ ನೋಡಿಲ್ಲ ಅನ್ನೋ ಅನುಮಾನ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment