/newsfirstlive-kannada/media/post_attachments/wp-content/uploads/2024/06/renukaswami3.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಕೋರ್ಟ್ ಮತ್ತೆ ಬಿಗ್ ಶಾಕ್ ಕೊಟ್ಟಿದೆ. ದರ್ಶನ್, ಪವಿತ್ರಾ ಸೇರಿ 13 ಆರೋಪಿಗಳನ್ನು ಮತ್ತೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಕೋರ್ಟ್‌ನಲ್ಲಿ ವಾದ ಮಾಡುವಾಗ ಸರ್ಕಾರದ ಪರ ವಕೀಲರು ಕೊಲೆಯಾದ ರೇಣುಕಾಸ್ವಾಮಿಗೆ ಕೊಟ್ಟ ಚಿತ್ರಹಿಂಸೆಯ ವಿವರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು, ನಟ ದರ್ಶನ್ ಅವರಿಗೆ ಅಸಲಿ ಸಂಕಷ್ಟ ಈಗ ಶುರುವಾಗಿದೆ.
ಮತ್ತೆ 5 ದಿನ ಪೊಲೀಸ್ ಕಸ್ಟಡಿ ಸೇರಿದ ದರ್ಶನ್, ಪವಿತ್ರಾ ಮತ್ತು ಗ್ಯಾಂಗ್
ದರ್ಶನ್ ಜೊತೆ 13 ಆರೋಪಿಗಳು ಪೊಲೀಸರ ವಶಕ್ಕೆ
ನಟ ದರ್ಶನ್, ಪವಿತ್ರಾ ಮತ್ತು ಪಟಾಲಂ ಮತ್ತೆ ಪೊಲೀಸರ ಕಸ್ಟಡಿಗೆ ಸೇರಿದ್ದಾರೆ. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳಿಗೆ ಸದ್ಯಕ್ಕೆ ಪೊಲೀಸರ ಆತಿಥ್ಯವೇ ಖಾಯಂ ಆಗಿದೆ. ಯಾಕಂದ್ರೆ ಕೊಲೆ ಮಾಡಿದ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ನ್ನು ನ್ಯಾಯಾಲಯ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಮೂಲಕ ಜೂನ್ 20ರವರೆಗೆ ದರ್ಶನ್, ಪವಿತ್ರಾ ಸೇರಿ ಡೆವಿಲ್ ಗ್ಯಾಂಗ್ನ 13 ಆರೋಪಿಗಳು ಮತ್ತೆ ಪೊಲೀಸ್ ಠಾಣೆಯಲ್ಲೇ ವಾಸ ಮಾಡುವಂತಾಗಿದೆ.
ಕಸ್ಟಡಿಯಲ್ಲಿ ತೊಂದರೆ ಆಯ್ತಾ ಎಂದು ಆರೋಪಿಗಳಿಗೆ ಜಡ್ಜ್ ಪ್ರಶ್ನೆ
ದರ್ಶನ್ ಅಂಡ್ ಗ್ಯಾಂಗ್ನ್ನು ಇಂದು ಆರ್ಥಿಕ ಅಪರಾಧಗಳ ಕೋರ್ಟ್ಗೆ ಪೊಲೀಸರು ಹಾಜರುಪಡಿಸಿದ್ದರು. ಈ ವೇಳೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ವಾದ ಮಾಡಿದ್ರೆ ಆರೋಪಿಗಳ ಪರ ಅನಿಲ್ ಬಾಬು, ಪ್ರವೀಣ್ ತಿಮ್ಮಯ್ಯ, ನಾರಾಯಣಸ್ವಾಮಿ ಸೇರಿ ಹಲವರು ಪ್ರತಿವಾದ ಮಾಡಿದರು. ಈ ವೇಳೆ ಜಡ್ಜ್ ಕಸ್ಟಡಿಯಲ್ಲಿ ತೊಂದರೆ ಆಯ್ತಾ ಎಂದು ಆರೋಪಿಗಳಿಗೆ ಪ್ರಶ್ನೆ ಕೇಳಿದ್ರು. ಇದಕ್ಕೆ ಏನೂ ತೊಂದರೆ ಆಗಿಲ್ಲ ಎಂದು ಆರೋಪಿಗಳು ಉತ್ತರಿಸಿದರು.
ವಾದ-ಪ್ರತಿವಾದ
ಪ್ರಸನ್ನ ಕುಮಾರ್, ಸರ್ಕಾರದ ಪರ ವಕೀಲ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅನೇಕ ಸಾಕ್ಷಿಗಳನ್ನು ಕಲೆ ಹಾಕಿದ್ದೇವೆ. ಎಲ್ಲಾ ಆರೋಪಿಗಳಿಂದ 10 ಫೋನ್ ಸೀಜ್ ಮಾಡಿದ್ದೇವೆ. ಅವುಗಳ ಡಾಟಾ ರಿಟ್ರೀವ್ಗೆ ಕಳುಹಿಸಲಾಗಿದೆ. ಕೃತ್ಯದಲ್ಲಿ ಸಾಕ್ಷಿ ನಾಶ ಯತ್ನ ನಡೆದಿದೆ. ಮೃತದೇಹ ಡಿಸ್ಪೋಸ್ ಮಾಡಲು 30 ಲಕ್ಷಕ್ಕೆ A2 ಆರೋಪಿ ದರ್ಶನ್ ಡೀಲ್ ನೀಡಿದ್ದಾರೆ. ಅದರ ರಿಕವರಿ ಸಹ ಮಾಡಲಾಗಿದೆ. ಕೃತ್ಯದ ಸಿಡಿಯಲ್ಲಿ ತುಂಬಾ ಗಂಭೀರ ಅಂಶಗಳಿವೆ. ಆರೋಪಿ ದರ್ಶನ್ ಕೊಲೆ ಬಳಿಕ ಮೈಸೂರಿಗೆ ಹೋಗಿದ್ದಾರೆ. ಅಲ್ಲಿ ಘಟನೆಯ ಬಗ್ಗೆ ಇತರ ಆರೋಪಿಗಳ ಜೊತೆ ಸಂಭಾಷಣೆ ಇದೆ. ಆರೋಪಿ ಪ್ಲಾನ್ನಂತೆ ಕೆಲ ಆರೋಪಿಗಳು ಸರೆಂಡರ್ಗೆ ಹೋಗಿದ್ದಾರೆ. ಅದಕ್ಕೂ ಮೊದಲು ಮೈಸೂರಿಗೆ ಹೋಗಿರುವ ಮಾಹಿತಿ ಇದ್ದು ಅದರ ಬಗ್ಗೆ ಮಹಜರು ಮಾಡಬೇಕಿದೆ. ಹೀಗಾಗಿ ದರ್ಶನ್ ಹಾಗೂ ಆರೋಪಿಗಳನ್ನು ಮತ್ತಷ್ಟು ದಿನ ಕಸ್ಟಡಿಗೆ ನೀಡಬೇಕು.
ಇದನ್ನೂ ಓದಿ: ಯುವ ಪತ್ನಿ ಶ್ರೀದೇವಿ V/S ಸಪ್ತಮಿಗೌಡ; 10 ಕೋಟಿ ಮಾನನಷ್ಟ ಪರಿಹಾರದ ನೋಟಿಸ್; ಅಸಲಿಗೆ ಆಗಿದ್ದೇನು?
ಅನಿಲ್ ಬಾಬು, ದರ್ಶನ್ ಪರ ವಕೀಲ
ದರ್ಶನ್ ಈಗಾಗಲೇ ಎಲ್ಲಾ ಹೇಳಿಕೆ ನೀಡಿದ್ದಾರೆ. ಮಹಜರು ಪ್ರಕ್ರಿಯೆ ಆಗಿದೆ. ಪ್ರಕರಣದಲ್ಲಿ ಪೊಲೀಸರು ಕಾನೂನು ಉಲ್ಲಂಘನೆ ಮಾಡಿದ್ದಾರೆ. 5ನೇ ಮತ್ತು 14ನೇ ಆರೋಪಿಗಳ ಜೊತೆ ಮೃಗೀಯವಾಗಿ ವರ್ತಿಸಿದ್ದು ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ನೀಡಿದ್ದಾರೆ.
ಇದನ್ನೂ ಓದಿ: ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್ ಹಲ್ಲೆ ಮಾಡಿದ್ದ ದೃಶ್ಯ ಸೆರೆ?
ಪವಿತ್ರಾ ಗೌಡ ಪರ ವಕೀಲ
A1 ಮಹಿಳಾ ಆರೋಪಿಗೆ ತುಂಬಾ ನೋವು ನೀಡಲಾಗಿದೆ. ಪೊಲೀಸರು ಮಹಿಳೆ ಅಂತ ಸೌಜನ್ಯವಾಗಿ ವರ್ತಿಸಿಲ್ಲ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ನಡುವೆ ಆರೋಪಿಗಳು ಪೊಲೀಸರ ಮುಂದೆ ಕೊಟ್ಟ ಹೇಳಿಕೆಗಳು ಸೋರಿಕೆ ಆಗಿದೆ. ಅವರ ಬಗ್ಗೆ ತುಂಬಾ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ.
ಎಸ್ಪಿಪಿ ಪ್ರಸನ್ನ ಕುಮಾರ್, ಸರ್ಕಾರದ ಪರ ವಕೀಲ
ಆರೋಪಿಗಳು ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದಾರೆ. ಆ ಡಿವೈಸ್ ಇನ್ನೂ ಸಹ ಸಿಕ್ಕಿಲ್ಲ. ಅದನ್ನ ಆರೋಪಿಗಳು ನಾಶ ಮಾಡಿರುವ ಸಾಧ್ಯತೆ ಇದ್ದು, ಅದರ ರಿಕವರಿ ಮಾಡಬೇಕಿದೆ.
ಅನಿಲ್ ಬಾಬು, ದರ್ಶನ್ ಪರ ವಕೀಲ
ಎಲ್ಲದಕ್ಕೂ ಆರೋಪಿ ದರ್ಶನ್ ಕಾರಣ ಅಂತ ಹೇಳೋದು ಎಷ್ಟು ಸರಿ? ಐದು ದಿನ ವಿಚಾರಣೆ ಮಾಡಿದ್ರೂ ರಿಮ್ಯಾಂಡ್ ಅರ್ಜಿ ನೀಡಿಲ್ಲ. ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಸಿಡಿಯಲ್ಲಿ ರಿಮ್ಯಾಂಡ್ ಅರ್ಜಿ ಇರಬೇಕು. ಆದರೆ ಇಲ್ಲಿ ಪೊಲೀಸರು ಕೊಡುತ್ತಿಲ್ಲ.
ನ್ಯಾಯಾಧೀಶರು ಪ್ರಶ್ನೆ ಕೇಳುವಾಗ ಕಣ್ಣೀರು
ನ್ಯಾಯಾಲಯಕ್ಕೆ ಬರುವಾಗ ಸಪ್ಪೆ ಆಗಿದ್ದ ಪವಿತ್ರಾ ಗೌಡ ಬಳಿಕ ನ್ಯಾಯಾಧೀಶರು ಪ್ರಶ್ನೆ ಕೇಳುವಾಗಲೂ ಕಣ್ಣೀರಿಟ್ಟಿದ್ದಾರೆ. ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಎಲ್ಲಾ ಆರೋಪಿಗಳ ಹಾಜರಾತಿಯನ್ನು ಕೋರ್ಟ್ ರಿಜಿಸ್ಟರ್ ಮಾಡಿಕೊಂಡಿದೆ. ಎಲ್ಲರ ಬಳಿ ಹೇಳಿಕೆ ಪಡೆದು ನೋಂದಣಿ ಮಾಡಲಾಗಿದೆ.
ಎರಡು ಕಡೆ ವಾದ ಆಲಿಸಿದ ಜಡ್ಜ್ ವಿಶ್ವನಾಥ್ ಸಿ ಗೌಡರ್, ಇಂದಿನಿಂದ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಲು ತೀರ್ಮಾನಿಸಿದರು. ದರ್ಶನ್ & ಗ್ಯಾಂಗ್ ಇದೇ ಜೂನ್ 20ರವರೆಗೆ ಪೊಲೀಸ್ ಠಾಣೆಯಲ್ಲಿ ಕಂಬಿ ಹಿಂದೆ ಕಾಲ ಕಳೆಯಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ