ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಸರ್​ಪ್ರೈಸ್​ ಕೊಟ್ಟ ನಟ ದರ್ಶನ್; ಡಿಂಪಲ್​ ಕ್ವೀನ್​ ಶಾಕ್!​

author-image
Veena Gangani
Updated On
ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಸರ್​ಪ್ರೈಸ್​ ಕೊಟ್ಟ ನಟ ದರ್ಶನ್; ಡಿಂಪಲ್​ ಕ್ವೀನ್​ ಶಾಕ್!​
Advertisment
  • ಸಖತ್​ ಖುಷಿಯಲ್ಲಿದ್ದಾರೆ ಡಿಂಪಲ್​ ಕ್ವೀನ್​ ರಚಿತಾ ರಾಮ್
  • ವೇದಿಕೆ ಮೇಲೆ ಸ್ಟಾರ್​ ನಟನ ಬಗ್ಗೆ ನೆನೆದ ರಚಿತಾ ರಾಮ್​
  • ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ನಟಿ ಎಂಟ್ರಿ

ಸ್ಯಾಂಡಲ್​​ವುಡ್​ ಸ್ಟಾರ್​ ನಟಿ, ಡಿಂಪಲ್​ ಕ್ವೀನ್​ ರಚಿತಾ ರಾಮ್ ಸಖತ್​ ಖುಷಿಯಲ್ಲಿದ್ದಾರೆ. ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಈ ಜರ್ನಿಗೆ 12 ವರ್ಷಗಳು ಕಳೆದಿವೆ.

ಇದನ್ನೂ ಓದಿ: ಇದು ಸಿನಿಮಾ ಅಲ್ಲ, ಸತ್ಯ.. ವಿಶ್ವದ ದೈತ್ಯ ಯಕುಮಾಮಾ ಅನಕೊಂಡ

publive-image

ಹೌದು, ನಟ ದರ್ಶನ್‌ಗೆ ಜೋಡಿಯಾಗಿ ಸಿನಿಮಾ ರಂಗಕ್ಕೆ ‘ಬುಲ್ ಬುಲ್’ ಮೂಲಕ ಎಂಟ್ರಿ ಕೊಟ್ಟು ಸಖತ್​ ಫೇಮಸ್​ ಆಗಿದ್ದರು ರಚಿತಾ ರಾಮ್. ಹೀಗಾಗಿ ಡಿಂಪಲ್ ಕ್ವೀನ್ ಅವರ 12 ವರ್ಷಗಳ ಸ್ಯಾಂಡಲ್‌ವುಡ್‌ ಜರ್ನಿಯನ್ನು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೇದಿಕೆ ಮೇಲೆ ಸೆಲೆಬ್ರೇಟ್ ಮಾಡಲಾಗಿದೆ.

publive-image

ಸದ್ಯ ನಟಿ ರಚಿತಾ ರಾಮ್​ ಬ್ಯಾಚುಲರ್ಸ್ ಸೀಸನ್ 2ರಲ್ಲಿ ಜಡ್ಜ್ ಆಗಿದ್ದಾರೆ. ಇದೇ ವೇದಿಕೆಯಲ್ಲಿ ರಚಿತಾ ರಾಮ್​ ಅವರ ಸಿನಿಮಾ ಜರ್ನಿಯ ಕೊಡುಗೆ ಬಗ್ಗೆ ರವಿಚಂದ್ರನ್ ಮಾತಾಡಿದ್ದಾರೆ. ಈ ವೇಳೆ ವೇದಿಕೆ ಮೇಲೆ ರಚಿತಾ ರಾಮ್​ ಅವರನ್ನು ಕರೆದು ಕಿರೀಟವಿಟ್ಟು, ಫೋಟೋ ಫ್ರೇಮ್​ ಅನ್ನು ಗಿಫ್ಟ್​ ಆಗಿ ನೀಡಲಾಯಿತು. ಇದೇ ವೇಳೆ ವೇದಿಕೆ ಮೇಲೆ ರಚಿತಾ ರಾಮ್ ನನ್ನ ಉಸಿರು ಇರೋ ತನಕ ಒಂದು ಹೆಸರನ್ನು ನೆನೆಪಿಸಿಕೊಳ್ಳುತ್ತೇನೆ. ಎಲ್ಲೇ ಹೋದಾಗ ಜನ ನನ್ನ ಹೆಸರು ಕೂಗುತ್ತಾರೆ ಅಂದ್ರೆ ಅದಕ್ಕೆ ಕಾರಣ ಆಗಿರೋದು ದರ್ಶನ್​ ಸರ್​ ಅಂತ ಹೇಳಿದ್ದಾರೆ. ಆ ಕೂಡಲೇ ಸರ್ಪ್ರೈಸ್ ಎಂಬಂತೆ ನಟ ದರ್ಶನ್ ಅವರ ಧ್ವನಿಯನ್ನು ಪ್ಲೇ ಮಾಡಲಾಗಿದೆ.

ನಮ್ಮ ಬುಲ್​ ಬುಲ್​ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಮಾಡ್ತಾ ಇರಲಿ ಎಂದು ಶುಭ ಹಾರೈಸಿದ್ದಾರೆ. ದರ್ಶನ್ ವಾಯ್ಸ್ ಕೇಳ್ತಿದ್ದಂತೆ ರಚಿತಾ ರಾಮ್ ಭಾವುಕರಾಗಿದ್ದಾರೆ. ಇನ್ನೂ, ನಟಿ ರಚಿತಾ ರಾಮ್‌ ಬೆಂಕಿಯಲ್ಲಿ ಅರಳಿದ ಹೂ ಹಾಗೂ ಅರಸಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಆ ನಂತರ ದರ್ಶನ್‌ ಅವರ ಬುಲ್‌ ಬುಲ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment