ಧನ್ವೀರ್ ‘ವಾಮನ’ ಚಿತ್ರ ನೋಡಲು ಬಂದ ದರ್ಶನ್‌ಗೆ ಪೊಲೀಸ್‌ ಷರತ್ತು! ಆಮೇಲೇನಾಯ್ತು?

author-image
admin
Updated On
ವಿಜಯಲಕ್ಷ್ಮಿಗೆ ಮುದ್ದು ರಾಕ್ಷಸಿ ಎಂದ ದರ್ಶನ್; ಫ್ಯಾನ್ಸ್​ ಖುಷ್, ವಿಡಿಯೋ ವೈರಲ್..!
Advertisment
  • ಸಿನಿಮಾ ಸ್ಟಾರ್ಸ್‌ಗಳು ಸೆಕ್ಯೂರಿಟಿ ಪಡೆಯೋದು ಕಡ್ಡಾಯ
  • ತೆಲಂಗಾಣದಲ್ಲಿ ನಡೆದ ಘಟನೆಯಿಂದ ಎಚ್ಚೆತ್ತ ಪೊಲೀಸರು!
  • ಸಿನಿಮಾ ವೀಕ್ಷಿಸಲು ಬಂದಿದ್ದ ದರ್ಶನ್, ಧನ್ವೀರ್, ಚಿಕ್ಕಣ್ಣ

ರಾಜ್ಯದಲ್ಲಿ ಈಗ ಸ್ಟಾರ್‌ ನಟರು ಸಿನಿಮಾ ವೀಕ್ಷಿಸಲು ಥಿಯೇಟರ್‌, ಮಾಲ್‌ಗಳಿಗೆ ಬಂದ್ರೆ ಪೊಲೀಸ್ ಭದ್ರತೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಸಿನಿಮಾ ಸ್ಟಾರ್ಸ್‌ಗಳು ಈ ಸೆಕ್ಯೂರಿಟಿ ಪಡೆಯಬೇಕು ಅಂದ್ರೆ ಪೊಲೀಸ್ ಇಲಾಖೆಗೆ ಲಕ್ಷ, ಲಕ್ಷ ಹಣ ಕಟ್ಟಲೇ ಬೇಕು. ದಿಢೀರನೇ ಯಾಕೆ ಈ ರೂಲ್ಸ್‌? ಕಾರಣವೇನು ಅನ್ನೋ ಸಂಪೂರ್ಣ ವಿವರ ಈ ವರದಿಯಲ್ಲಿದೆ.

ಇದು ಪುಷ್ಪ 2 ಇಂಪ್ಯಾಕ್ಟ್‌!
ಹೈದರಾಬಾದ್‌ನಲ್ಲಿ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ರಿಲೀಸ್ ವೇಳೆ ದೊಡ್ಡ ಅನಾಹುತ ನಡೆದಿತ್ತು. 2024 ಡಿಸೆಂಬರ್ 4ರಂದು ಸಂಧ್ಯಾ ಥಿಯೇಟರ್‌ ಬಳಿ ಕಾಲ್ತುಳಿತ ಆಗಿದ್ದು, ರೇವತಿ ಅನ್ನೋ ಸಾವನ್ನಪ್ಪಿದ್ದರು. ಈ ದುರ್ಘಟನೆ ಬಳಿಕ ಸ್ಟಾರ್‌ ನಟರ ಸಿನಿಮಾ ವೀಕ್ಷಣೆ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.

publive-image

ತೆಲಂಗಾಣ ಕಾಲ್ತುಳಿತ ಪ್ರಕರಣದ ಬಳಿಕ ಕರ್ನಾಟಕ ರಾಜ್ಯ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಸ್ಟಾರ್ ನಟರು ಸಿನಿಮಾ ವೀಕ್ಷಣೆಗೆ ಬಂದಾಗ ಪೊಲೀಸ್ ಸೆಕ್ಯೂರಿಟಿ ಕಡ್ಡಾಯಗೊಳಿಸಲಾಗಿದ್ದು, ಆ ಸೆಕ್ಯೂರಿಟಿ ಪಡೆಯಬೇಕು ಅಂದರೆ ಲಕ್ಷ, ಲಕ್ಷ ಹಣ ಕಟ್ಟಬೇಕಿದೆ.

‘ವಾಮನ’ ಚಿತ್ರ ವೀಕ್ಷಿಸಲು ಬಂದ ದರ್ಶನ್‌! 
ಇತ್ತೀಚೆಗೆ ನಟ ಧನ್ವೀರ್ ಅಭಿನಯದ ವಾಮನ ಚಿತ್ರ ಬಿಡುಗಡೆಯಾಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನ ಪ್ರೀಮಿಯರ್ ಶೋ ವೀಕ್ಷಿಸಲು ನಟ ದರ್ಶನ್ ಅವರು ಜಿ.ಟಿ ಮಾಲ್‌ಗೆ ಬಂದಿದ್ದರು. ವಾಮನ ಚಿತ್ರದ ವೀಕ್ಷಣೆ ಮಾಡಿದ್ದ ನಟ ದರ್ಶನ್, ಧನ್ವೀರ್ ಹಾಗೂ ಚಿಕ್ಕಣ್ಣ ಅವರಿಗೆ ಪೊಲೀಸರು ದುಬಾರಿ ಭದ್ರತೆ ಕೊಟ್ಟಿದ್ದಾರೆ. ಈ ಸೆಕ್ಯೂರಿಟಿಗೆ ವಾಮನ ಚಿತ್ರತಂಡವೇ ಪೊಲೀಸರಿಗೆ ಹಣ ನೀಡಿದೆ. ಆ ಅಮೌಂಟ್ ಎಷ್ಟು ಅನ್ನೋ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್ ಫಸ್ಟ್‌ಗೆ ಲಭ್ಯವಾಗಿದೆ.

publive-image

ಕಳೆದ ಏಪ್ರಿಲ್ 9ರಂದು ವಾಮನ ಚಿತ್ರದ ಪ್ರೀಮಿಯರ್ ಶೋ ವೀಕ್ಷಣೆಗೆ ನಟ ದರ್ಶನ್ ಬಂದಿದ್ದರು. ಈ ವೇಳೆ ವಾಮನ ಚಿತ್ರತಂಡ ಕೆ.ಪಿ ಅಗ್ರಹಾರ ಪೊಲೀಸರ ಬಳಿ ಭದ್ರತೆಗೆ ಮನವಿ ಮಾಡಿದೆ. ನಮ್ಮ ಖಾಸಗಿ ಬಾಡಿಗಾರ್ಡ್ಸ್ ಇರ್ತಾರೆ. ಹೀಗಾಗಿ ಕೇವಲ ನಾಲ್ಕೈದು ಮಂದಿ ಪೊಲೀಸ್ ಭದ್ರತೆ ಕೊಡಿ ಅಂತ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಜತ್​ ಮೇಲೆ ಸಿಟ್ಟಿದೆ.. ಗೆಳೆಯನ ಬಗ್ಗೆ ವಿನಯ್​ ಗೌಡ ಖಡಕ್​ ಮಾತು; ಏನಂದ್ರು? 

ಆಗ ಪೊಲೀಸರು ಸಿನಿಮಾ ವೀಕ್ಷಣೆಗೆ ಯಾರೆಲ್ಲಾ ಬರ್ತಾರೆ ಅಂತ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಆಗ ವಾಮನ ಚಿತ್ರ ತಂಡ ನಟ ದರ್ಶನ್ ಬರೋ ವಿಚಾರ ಹೇಳಿದೆ. ದರ್ಶನ್ ಬರೋದ್ರಿಂದ ಫ್ಯಾನ್ಸ್ ಹೆಚ್ಚಾಗಿ ಬರ್ತಾರೆ. ಅಹಿತಕರ ಘಟನೆ ಆದರೆ ಯಾರು ಹೊಣೆ ಅಂತ ಪೊಲೀಸರು ಎಚ್ಚರಿಸಿದ್ದು, ಹೆಚ್ಚುವರಿ ಬಂದೋಬಸ್ತ್ ಮಾಡಿಕೊಳ್ಳಬೇಕು ಎಂದಿದ್ದಾರೆ.

publive-image

ದರ್ಶನ್ ಸಿನಿಮಾ ನೋಡಲು ಬಂದಾಗ ಹೆಚ್ಚುವರಿ ಬಂದೋಬಸ್ತ್ ಶುಲ್ಕ ಕಟ್ಟುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಸುಮಾರು 40 ಮಂದಿ ಪೊಲೀಸರು ಭದ್ರತೆಗೆ ನಿಯೋಜನೆ ನೇಮಿಸಲಾಗಿದ್ದು, ಇದಕ್ಕಾಗಿ ಬರೋಬ್ಬರಿ 3.04 ಲಕ್ಷ ರೂಪಾಯಿ ಕಟ್ಟುವಂತೆ ಹೇಳಿದ್ದಾರೆ.

ಪೊಲೀಸರ ಸೂಚನೆಗೆ ಒಪ್ಪಿದ ವಾಮನ ಚಿತ್ರತಂಡ ಬೇರೆ ಸಮಸ್ಯೆ ಬೇಡ ಅಂತ ಕೊನೆಗೆ 3.04 ಲಕ್ಷ ಹಣ ಕಟ್ಟಿದೆ. ಹಣ ಕಟ್ಟಿಸಿಕೊಂಡ ಬಳಿಕ ಹಿರಿಯ ಅಧಿಕಾರಿಗಳು ಪೊಲೀಸ್ ಭದ್ರತೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment