ದರ್ಶನ್​ ಜಾಮೀನಿಗೆ ಸರ್ಕಾರ ಬಿಗ್ ಟ್ವಿಸ್ಟ್ ಕೊಡುತ್ತಾ.. ಪೂರ್ಣಾವಧಿ​​ ಬೇಲ್, ಮುಂದೇನು ಪ್ಲಾನ್..?

author-image
Bheemappa
Updated On
ನಟ ದರ್ಶನ್​​ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್​; ಆದೇಶ ಪ್ರತಿಯಲ್ಲೇನಿದೆ?
Advertisment
  • ಆಪರೇಷನ್ ಅಗತ್ಯ ಇಲ್ಲವೆಂದು ಮಾಹಿತಿ ಕೊಟ್ರಾ ಡಾಕ್ಟರ್ಸ್?
  • ಜೈಲಿನಿಂದ ಮುಕ್ತಿ ಸಿಕ್ಕರೂ ಮುಕ್ತವಾಗದ ಡಿ ಗ್ಯಾಂಗ್​ ಟೆನ್ಶನ್​​!
  • ಇಲ್ಲಿಂದ ಒಪ್ಪಿಗೆ ಸಿಕ್ಕರೆ ಮತ್ತೆ ಕಾನೂನು ಕಟಕಟೆ ಕಠಿಣ ಆಗುತ್ತೆ

ಆವತ್ತು ಹೈಕೋರ್ಟ್​ನಲ್ಲಿ ಏನ್​ ಹೇಳಿದ್ರೂ ಹೇಳಿ.. ಬೆನ್ನುನೋವಿಗೆ ಚಿಕಿತ್ಸೆ ಸಿಗದಿದ್ರೆ ಸ್ಟ್ರೋಕ್​ ಹೊಡೆಯುತ್ತೆ. ಆಪರೇಷನ್​​ ಆಗಬೇಕು ಅಂದ್ರು. ಪ್ಲೀಸ್​ ಪ್ಲೀಸ್​​ ಜಾಮೀನು ಬೇಕು ಅಂದಿದ್ದರು. ಆಯಿತು ಅಂತ ಕೋರ್ಟ್​​ ಜಾಮೀನು ಕೊಟ್ಟಿತ್ತು. ಆದ್ರೆ, ಆಪರೇಷನ್​​ ಆಯ್ತಾ, ಇಲ್ಲ. ಇದು ಬಿಡಿ, ರೆಗ್ಯೂಲರ್​​​ ಬೇಲ್​​ ಸಿಕ್ಕಿದೆಯಲ್ಲಾ, ಈಗ ಆಪರೇಷನ್ ಅನ್ನು ಮಾಡಲ್ಲ ಎಂದು ಹೇಳಲಾಗಿದೆ.

ಬೇಲ್ ಸಿಕ್ಕಿದರು ದರ್ಶನ್ ಮತ್ತು ಗ್ಯಾಂಗ್​ಗೆ ಟೆನ್ಷನ್​ ಮಾತ್ರ ತಪ್ಪಿಲ್ಲ ಬಿಡಿ. ಮೆಡಿಕಲ್​​ ಬೇಲ್​​ ಪಡೆದು ಬೆಡ್​​ ಮೇಲೆ ಹೊರಳಾಡುತ್ತಿದ್ದರು. ಆತಂಕ ಮಾತ್ರ ಕಮ್ಮಿಯಾಗಿಲ್ಲ. ಸರ್ಕಾರದ ನಡೆ ಏನಾಗಿರಲಿದೆ ಅನ್ನೋದೆ ನಿದ್ರೆಯ ಮಂಪರಿನಲ್ಲೂ ಕನವರಿಸುತ್ತ ಕಾಲ ಕಳೆಯುವಂತಾಗಿದೆ. ಸದ್ಯ ಪೂರ್ಣಾವಧಿ​​ ಬೇಲ್ ಸಿಕ್ಕಿದ್ರೂ ಮುಂದೇನು ಅನ್ನೋದೆ ದರ್ಶನ್​​ ರಿಯಲ್​ ಲೈಫ್​ನ ಅತಿದೊಡ್ಡ ಸಸ್ಪೆನ್ಸ್​.

publive-image

ದಾಸ ಸರ್ಜರಿ ಮಾಡಿಕೊಳ್ಳುತ್ತರಾ, ಇಲ್ವಾ ಅನ್ನೋದೆ ಬಿಗ್​​​ ಸಸ್ಪೆನ್ಸ್​!

ಅಂದ್ಹಾಗೆ ಹೈಕೋರ್ಟ್​​ ಏನೋ ಈಗ ಪೂರ್ಣಾವಧಿ​​ ಬೇಲ್​​​ ಕರುಣಿಸಿದೆ. ಆದ್ರೆ, ಈ ಆದೇಶವನ್ನ ಪ್ರಶ್ನಿಸುವ ಅವಕಾಶ ಸರ್ಕಾರಕ್ಕಿದೆ. ಸುಪ್ರೀಂಕೋರ್ಟ್​​ ಮೆಟ್ಟಿಲೇರಲು ಸರ್ಕಾರ ಪ್ಲಾನ್ ಮಾಡುತ್ತಿದ್ದು, ಗೃಹ ಇಲಾಖೆ ಅನುಮತಿ ಕೇಳಲಾಗುತ್ತಿದೆ. ಒಂದು ವೇಳೆ ಒಪ್ಪಿಗೆ ಸಿಕ್ಕರೆ ಮತ್ತೆ ಕಾನೂನು ಕಟಕಟೆ ಕಠಿಣವಾಗಲಿದೆ.

ದರ್ಶನ್​ಗೆ ಆಪರೇಷನ್ ಮಾಡದೆ ಇರಲು ನಿರ್ಧರಿಸಿದ್ರಾ ವೈದ್ಯರು?

ಆವತ್ತು ಆಪರೇಷನ್​​​ ಮಾಡದಿದ್ರೆ ಲಕ್ವ ಹೊಡೆಯಲಿದೆ ಅಂತ ಕೋರ್ಟ್​​ನಲ್ಲಿ ದರ್ಶನ್​​ ಪರ ವಾದ ಮಂಡನೆ ಮಾಡಲಾಗಿತ್ತು. ಅದೇ ಸಿಂಪಥಿಯಲ್ಲಿ ದರ್ಶನ್​​ಗೆ ಮೆಡಿಕಲ್​​​​ ಬೇಲ್​ ಸಿಕ್ಕಿತ್ತು. ಅಚ್ಚರಿ ಎಂದ್ರೆ ಈಗ ಆಪರೇಷನ್​​ ಅಗತ್ಯ ಇಲ್ವಂತೆ. ಹೇಗಿದೆ ನೋಡಿ ಟ್ವಿಸ್ಟ್​​​. ಇನ್ನು 2 ದಿನಗಳ ನಂತರ ಅಂದ್ರೆ ಜಾಮೀನು ಪ್ರಕ್ರಿಯೆ ಮುಗಿದ ನಂತರ ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಸಾಧ್ಯತೆ ಇದೆ.

ಇದನ್ನೂ ಓದಿ:ಐಕಾನ್​ ಸ್ಟಾರ್ ಬಂಧನದ ಹಿಂದೆ ರಾಜಕೀಯನಾ.. ಅಲ್ಲು ಅರ್ಜುನ್- CM ರೇವಂತ್ ರೆಡ್ಡಿ ಮಧ್ಯೆ ಆಗಿದ್ದೇನು?

publive-image

ದರ್ಶನ್​ಗೆ ಸರ್ಜರಿ ‘ಡೌ’ಟು!

ಸರ್ಜರಿ ಮಾಡದೇ ಮಾತ್ರೆ, ಔಷಧಿಯಿಂದ ಗುಣಮುಖ
ದರ್ಶನ್​​​ಗೆ ಆಪರೇಷನ್ ಇಲ್ಲದೆಯೇ ಪಿಜಿಯೋಥೆರಪಿ
ವಿವಿಧ ವ್ಯಾಯಾಮ ಮೂಲಕ ಬೆನ್ನುನೋವಿಗೆ ಚಿಕಿತ್ಸೆ
ಮಾತ್ರೆ, ಔಷಧಿಗಳ ಜತೆ ಕೆಲ ದಿನಗಳ ಕಾಲ ವಿಶ್ರಾಂತಿ
ರೋಗಿಗಳಿಗೆ ಅಲ್ಟ್ರಾ ಸೌಂಡ್‌ ಮೂಲಕ ಟ್ರೀಟ್ಮೆಂಟ್!
ನೋವು ಇದ್ದ ಜಾಗಕ್ಕೆ ಕರೆಂಟ್ ಶಾಕ್ ಕೊಟ್ಟು ಚಿಕಿತ್ಸೆ
ರೋಗಿಗೆ ವೈಬ್ರೆಂಟ್ ನೀಡಿ ಬೆನ್ನು ನೋವಿಗೆ ಟ್ರೀಟ್ಮೆಂಟ್

ಎಲ್ಲವೂ ಸಿನಿಮಾ ರೀತಿ ಇದೆ ಅಲ್ವಾ? ಬೇಲ್​ ಪಡೆದಿದ್ದು ಆಪರೇಷನ್​ ಅಂತ. ಈಗ ಪೂರ್ಣಾವಧಿ​​ ಬೇಲ್​​ ಸಿಕ್ಕ ತಕ್ಷಣ ವರಸೆ ಬದಲಾಗಿದೆ. ಲಕ್ವ ಹೊಡೆಯುವ ಚಾನ್ಸ್​ ಇಲ್ಲ. ಹಾಗಾದ್ರೆ ಇಲ್ಲಿ ಆಪರೇಷನ್​​ ಎನ್ನುವ ಮಾತೆಲ್ಲಿಂದ ಅಲ್ವಾ?.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment