/newsfirstlive-kannada/media/post_attachments/wp-content/uploads/2024/10/Darshan-Back-Pain.jpg)
ಬಳ್ಳಾರಿ: ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಜಾಮೀನಿಗಾಗಿ ಚಡಪಡಿಸುತ್ತಿದ್ದಾರೆ. ಇನ್ನು ಮೂರು ದಿನದ ಬಳಿಕ ದರ್ಶನ್ ಗ್ಯಾಂಗ್‌ಗೆ ಜೈಲಾ? ಬೇಲಾ ಅನ್ನೋದು ನಿರ್ಧಾರ ಆಗಲಿದೆ. ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ರೆ ಜೈಲಿನಲ್ಲಿರುವ ದರ್ಶನ್‌ಗೆ ಬೆನ್ನು ನೋವು ದಿನ ಕಳೆದಂತೆ ಜಾಸ್ತಿಯಾಗುತ್ತಿದೆ.
ಜೈಲಿನಲ್ಲಿರುವ ದರ್ಶನ್‌ಗೆ ಬೆನ್ನು ನೋವು ಉಲ್ಬಣವಾಗಿದ್ದು, ನರರೋಗ ತಜ್ಞ ಡಾ. ವಿಶ್ವನಾಥ್ ಅವರು ಇಂದು 15 ನಿಮಿಷಗಳ ಕಾಲ ತಪಾಸಣೆ ನಡೆಸಿದ್ದಾರೆ. ದರ್ಶನ್ ಅವರ ಬೆನ್ನಿನ L1 ಹಾಗೂ L5 ಭಾಗದಲ್ಲಿ ಊತ ಕಾಣಿಸಿಕೊಂಡಿದೆ. ಹೀಗಾಗಿ ದರ್ಶನ್ ಮೇಲೆ ಎಳುವಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತಿದೆ. ಪದೇ ಪದೆ ಬೆನ್ನು ನೋವಿನಿಂದ ದರ್ಶನ್ ಸಂಕಟ ಅನುಭವಿಸುತ್ತಿದ್ದಾರೆ.
ದರ್ಶನ್ ಬೆನ್ನಿನ ತಪಾಸಣೆ ನಡೆಸಿದ ವೈದ್ಯರು ನರಗಳಿಗೆ ಸಂಬಂಧಿಸಿದ ಕೆಲ ಮಾತ್ರೆಗಳನ್ನು ನೀಡಿದ್ದಾರೆ. ಜೊತೆಗೆ ಶೀಘ್ರವೇ ಸ್ಕ್ಯಾನಿಂಗ್ ಮಾಡಿಸಬೇಕು ಅನ್ನೋ ಸಲಹೆ ನೀಡಿದ್ದಾರೆ. ಆದರೆ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಬೇಡ ಅಂತ ದರ್ಶನ್ ಅವರು ವೈದ್ಯರಿಗೆ ತಿಳಿಸಿದ್ದಾರೆ. ವಕೀಲರ ಮೂಲಕ ದರ್ಶನ್ ಅವರು ಬೆಂಗಳೂರಿಗೆ ಶಿಫ್ಟ್ ಮಾಡಲು ಮನವಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ನಟ ದರ್ಶನ್ ಹೊಸ ಸಿಗ್ನಲ್.. ಅಭಿಮಾನಿಗಳು ಫುಲ್ ಖುಷ್; ಜೈಲಿಂದ ದಾಸ ಕೊಟ್ಟ ಸಂದೇಶ ಏನು?
ಕಳೆದ ಒಂದು ವಾರದಿಂದ ಹಿಂದೆ ದರ್ಶನ್ ಅವರನ್ನು ಅರ್ಥೋಪಿಡಿಕ್ ವೈದ್ಯರು ತಪಾಸಣೆ ನಡೆಸಿದ್ದರು. ಇಂದು ನ್ಯೂರೋ ತಜ್ಞರಿಂದ ದರ್ಶನ್ ಬೆನ್ನುನೋವು ತಪಾಸಣೆ ಮಾಡಲಾಗಿದೆ. ಸದ್ಯ ವಿಮ್ಸ್ ವೈದ್ಯರು ನೀಡಿರುವ ವರದಿ ಮೇಲೆ ಜೈಲಾಧಿಕಾರಿಗಳು ಚಿಕಿತ್ಸೆ ಮುಂದುವರೆಸಿದ್ದಾರೆ. ಅಂತಿಮವಾಗಿ ವಿಮ್ಸ್ ವೈದ್ಯರು ನೀಡುವ ವರದಿಗಾಗಿ ಜೈಲಾಧಿಕಾರಿಗಳು ಕಾಯುತ್ತಿದ್ದಾರೆ.
ವಿಮ್ಸ್ ವೈದ್ಯರು ನೀಡಿದ ವರದಿ ಆಧಾರದ ಮೇಲೆ ದರ್ಶನ್ ಅವರನ್ನು ಬೆಂಗಳೂರು ಶಿಫ್ಟ್ ಆಗೋ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಹೆಚ್ಚುವರಿ ಸ್ಕ್ಯಾನಿಂಗ್, ಚಿಕಿತ್ಸೆ ಅಥವಾ ಸರ್ಜರಿ ಮಾಡಬೇಕಾದ್ರೆ ಬೆಂಗಳೂರಿಗೆ ಹೋಗೋ ಅನಿವಾರ್ಯ ಇದ್ರೆ ಮಾತ್ರ ಕೋರ್ಟ್ ಅನುಮತಿ ನೀಡಲಿದೆ. ವೈದ್ಯರು ನೀಡಿದ ವರದಿಗೆ ಕೋರ್ಟ್ ಅನುಮತಿ ಬಂದ ಬಳಿಕ ಆರೋಪಿ ದರ್ಶನ್ ಬೆಂಗಳೂರಿಗೆ ಶಿಫ್ಟ್ ಮಾಡೋ ಬಗ್ಗೆ ನಿರ್ಧಾರವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ