newsfirstkannada.com

ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ!

Share :

Published June 11, 2024 at 12:55pm

  ರೇಣುಕಾಸ್ವಾಮಿ ಅವರ ಮುಖದ ಮೂಳೆ ಮುರಿಯಲಾಗಿದೆ

  ಮೃತ ವ್ಯಕ್ತಿಯ ಕಿವಿ ಹಾಗೂ ತಲೆಗೆ ಗಂಭೀರ ಗಾಯದ ಗುರುತು

  ಪೋಸ್ಟ್ ಮಾರ್ಟಂ ವರದಿ ಬಳಿಕ ಕೊಲೆಯ ಮತ್ತಷ್ಟು ಮಾಹಿತಿ

ಬೆಂಗಳೂರು: ಯುವಕನ ಬರ್ಬರ ಹತ್ಯೆ ಪ್ರಕರಣದಲ್ಲಿ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಪೊಲೀಸರು ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪೊಲೀಸರ ತನಿಖೆಯಲ್ಲಿ ಸ್ಫೋಟಕ ಅಂಶಗಳು ಬಯಲಾಗುತ್ತಿವೆ.

ಕೊಲೆ ಪ್ರಕರಣದಲ್ಲಿ ರೇಣುಕಾಸ್ವಾಮಿ ಎಂಬ ಯುವಕನನ್ನು ಅತ್ಯಂತ ಅಮಾನವೀಯವಾಗಿ ಹೊಡೆದು ಕೊಂದಿರುವುದು ಬೆಳಕಿಗೆ ಬಂದಿದೆ. ರಾಕ್ಷಸರ ರೀತಿ ಯುವಕನ ಕೊಲೆ ಮಾಡಿ ಬಿಸಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ರಾಕ್ಷಸರಂತೆ ಭಯಾನಕ ದಾಳಿ!
ಕೊಲೆಯಾದ ಯುವಕ ರೇಣುಕಾಸ್ವಾಮಿ ಅವರ ಮುಖದ ಮೂಳೆ ಮುರಿಯಲಾಗಿದೆ. ಮೂಗು ಓಪನ್ ಆಗುವಂತೆ ಗುದ್ದಿದ್ದಾರೆ. ಕಾಲಿನಿಂದ ಮರ್ಮಾಂಗಕ್ಕೆ ಒದೆಯಲಾಗಿದೆ. ಎಡಭಾಗದ ಪಕ್ಕೆಲುಬು ಕಟ್ ಆಗುವಂತೆ ಹಲ್ಲೆ ಮಾಡಲಾಗಿದೆ. ರೇಣುಕಾಸ್ವಾಮಿ ಅವರ ಕಾಲು ಮತ್ತು ಕೈಗೆ ಬ್ಯಾಟ್, ದೊಣ್ಣೆಯಿಂದ ಹಲ್ಲೆ ಮಾಡಲಾಗಿದೆ. ಮೃತ ವ್ಯಕ್ತಿಯ ಕಿವಿಗೆ ಹಾಗೂ ತಲೆಗೆ ಗಂಭೀರ ಗಾಯ ಆಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಒಂದು ವರ್ಷದ ಹಿಂದೆ ಮದುವೆ.. ಕೊಲೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ.. 

ಸದ್ಯ ರೇಣುಕಾಸ್ವಾಮಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಪೋಸ್ಟ್ ಮಾರ್ಟಂ ವರದಿ ಬಳಿಕ ಕೊಲೆ ಮಾಡಿರುವ ಮತ್ತಷ್ಟು ಮಾಹಿತಿ ಹೊರಬೀಳಲಿದೆ. ಸದ್ಯ ಕಾಮಾಕ್ಷಿ ಪಾಳ್ಯ ಠಾಣೆಯ ಪೊಲೀಸರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ರೇಣುಕಾಸ್ವಾಮಿ ಯಾರು?
ಕೊಲೆಯಾಗಿರುವ ರೇಣುಕಾಸ್ವಾಮಿ ಅವರು ಚಿತ್ರದುರ್ಗ ನಗರದ VRS ಬಡಾವಣೆಯ ನಿವಾಸಿ. ಕೆಇಬಿ ನಿವೃತ್ತ ನೌಕರ ಕಾಶಿನಾಥ್ ಶಿವಣ್ಣ ಗೌಡರ್, ರತ್ನಪ್ರಭ ಪುತ್ರ ರೇಣುಕಾಸ್ವಾಮಿ. ಕಳೆದ 3-4 ವರ್ಷಗಳಿಂದ ಅಪೋಲೋ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ದರ್ಶನ್​ ಹಲ್ಲೆ ಮಾಡಿದ ಯುವಕನ ಶವ ಮೋರಿಯಲ್ಲಿ ಸಿಕ್ತು.. ಸಿಸಿಟಿವಿ ದೃಶ್ಯದಲ್ಲಿ ಏನಿತ್ತು? 

ಕಳೆದ ಶನಿವಾರ ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಅವರು ತೆರಳಿದ್ದಾರೆ. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಬಳಿ ರೇಣುಕಾಸ್ವಾಮಿ ಅವರ ಬೈಕ್ ಪತ್ತೆಯಾಗಿತ್ತು. ನಿನ್ನೆ ಮಧ್ಯಾಹ್ನ ಕಾಮಕ್ಷಿಪಾಳ್ಯ ಪೊಲೀಸರು ಪೊಷಕರಿಗೆ ಕರೆ ಮಾಡಿ ಕೊಲೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮರ್ಮಾಂಗಕ್ಕೆ ಹೊಡೆತ, ಮೂಗು ಓಪನ್, ಪಕ್ಕೆಲುಬು ಕಟ್‌; ಅತ್ಯಂತ ಕ್ರೂರವಾಗಿ ರೇಣುಕಾಸ್ವಾಮಿ ಕೊಲೆ!

https://newsfirstlive.com/wp-content/uploads/2024/06/Darshan-Arrest.jpg

Load More