newsfirstkannada.com

ದರ್ಶನ್ ಆರೋಗ್ಯದಲ್ಲಿ ಏರುಪೇರು; ಬಳ್ಳಾರಿ ಜೈಲಿಗೆ ವೈದ್ಯರು ಭೇಟಿ

Share :

Published September 4, 2024 at 1:43pm

    ಇಂದು ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ ಪೊಲೀಸ್​ ಅಧಿಕಾರಿಗಳು

    ಬಿಪಿ, ಶುಗರ್ ಸೇರಿದಂತೆ ನಟನಲ್ಲಿ ಕಾಣಿಸಿಕೊಂಡ ಬೆನ್ನು ನೋವು

    ಚಾರ್ಜ್​​ಶೀಟ್ ಸಲ್ಲಿಕೆಯಾಗಿರೋ ಬೆನ್ನಲ್ಲೇ ದರ್ಶನ್​​ಗೆ ಟೆನ್ಷನ್ ಶುರು

ಬಳ್ಳಾರಿ: ಚಿತ್ರದುರ್ಗದ ಮೂಲಕ ರೇಣುಕಾಸ್ವಾಮಿ ಹತ್ಯೆ ಸಂಬಂಧ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ಪ್ರಕರಣದ ತನಿಖೆ ಮುಕ್ತಾಯದ ಹಂತಕ್ಕೆ ಬಂದಿದ್ದು, ಪೊಲೀಸರು ಇಂದು 3991 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಕೇಸ್​ಗೆ ಟ್ವಿಸ್ಟ್ ಕೊಡಲು ಪೊಲೀಸರು ನಿರ್ಧಾರ; ಆರೋಪಿಗಳಿಗೆ ಮತ್ತೆ ಢವಢವ..!

ಇದರ ಮಧ್ಯೆ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ತಪಾಸಣೆಗಾಗಿ ವೈದ್ಯರು ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಸದ್ಯ ಜೈಲಿನಲ್ಲಿ ದರ್ಶನ್​ಗೆ ವೈದ್ಯರು ರೂಟಿನ್ ಚೆಕಪ್ ಮಾಡುತ್ತಿದ್ದಾರೆ. ಬಿಪಿ, ಶುಗರ್ ಸೇರಿದಂತೆ ಬೆನ್ನು ನೋವು ಇರುವ ಹಿನ್ನೆಲೆಯಲ್ಲಿ ತಪಾಸಣೆ ಮಾಡಲಾಗುತ್ತಿದೆ. ಚಾರ್ಜ್​​ಶೀಟ್ ಸಲ್ಲಿಕೆ ದಿನವೇ ದರ್ಶನ್​ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಚಾರ್ಜ್​​ಶೀಟ್ ಸಲ್ಲಿಕೆಯಾಗಿರೋ ಬೆನ್ನಲ್ಲೇ ದರ್ಶನ್​​ಗೆ ಟೆನ್ಷನ್ ಶುರುವಾಗಿ ಹೀಗೆ ಆಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಆರೋಗ್ಯದಲ್ಲಿ ಏರುಪೇರು; ಬಳ್ಳಾರಿ ಜೈಲಿಗೆ ವೈದ್ಯರು ಭೇಟಿ

https://newsfirstlive.com/wp-content/uploads/2024/09/Darshan-in-bellary-Jial.jpg

Load More