/newsfirstlive-kannada/media/post_attachments/wp-content/uploads/2024/09/BLY-DARSHAN-1.jpg)
ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಭೇಟಿಗೆ ಕುಟುಂಬಸ್ಥರು ಆಗಮಿಸಿ, ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ನಡೆಸ್ತಿದ್ದಾರೆ.
ಅದರಂತೆ ಇಂದು ದರ್ಶನ್ ಅವರ ಭೇಟಿಗೆ ಸುಶಾಂತ್ ನಾಯ್ಡು ಆಗಮಿಸಿದ್ದರು. ಸುಶಾಂತ್ ನಾಯ್ಡು ಬೇರೆ ಯಾರೂ ಅಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿಯ ತಂಗಿಯ ಗಂಡ. ಬಳ್ಳಾರಿ ಸೆಂಟ್ರಲ್ ಜೈಲಿಗೆ ಆಗಮಿಸಿದ್ದ ಸುಶಾಂತ್ ನಾಯ್ಡು, ದರ್ಶನ್ ಭೇಟಿಗೆ ಅವಕಾಶ ಕೇಳಿದ್ದರು. ವಿಜಯಲಕ್ಷ್ಮಿ ಹಾಗೂ ವಕೀಲರ ಜೊತೆಗೆ ತಮಗೂ ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡು ಹೋಗಿದ್ದರು.
ಬೆಳಗ್ಗೆ ಸಂಜೆ 5-30ರ ವರೆಗೆ ಖೈದಿಗಳ ಸಂದರ್ಶನಕ್ಕೆ ಅವಕಾಶ ಇತ್ತು. ವಿಜಯಲಕ್ಷ್ಮಿ ಭೇಟಿ ನೀಡಿದ ಸಂದರ್ಭದಲ್ಲೇ ದರ್ಶನ್ ಅವರನ್ನು ನಾಯ್ಡು ಭೇಟಿಯಾಗಿದ್ದಾರೆ. ಇನ್ನು, ರೇಣುಕಾಸ್ವಾಮಿ ಕುರಿತ ಪ್ರಕರಣದಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಆ ಚಾರ್ಜ್ಶೀಟ್ನ ಪ್ರತಿಯು ದರ್ಶನ್ ಪರ ವಕೀಲರಿಗೆ ಸಿಕ್ಕಿದ್ದು, ಅದನ್ನು ದರ್ಶನ್ಗೂ ತಲುಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ದಯವಿಟ್ಟು ಬಿಟ್ಟುಬಿಡಿ -ನಾಗಮಂಗಲದಲ್ಲಿ ತಾಯಂದಿರು ಗೋಳಾಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ