Advertisment

ದರ್ಶನ್​ರನ್ನ ಜೈಲಿಗೆ ಹಾಕಿದ ಕರ್ನಾಟಕ ಪೊಲೀಸರಿಗೆ ಅಭಿನಂದನೆ.. ಕಮಿಷನರ್​ಗೆ ಸ್ಪೆಷಲ್ ಥ್ಯಾಂಕ್ಸ್

author-image
Bheemappa
Updated On
ನಟ ದರ್ಶನ್​ ಕೇಸ್​​ ತನಿಖೆಗೆ ಆರ್ಥಿಕ ಸಂಕಷ್ಟ.. ಓಡಾಡಲು ಪೊಲೀಸ್ರ ಬಳಿ ದುಡ್ಡೇ ಇಲ್ಲ!
Advertisment
  • ದರ್ಶನ್ ಎಂಥಹ ಪ್ರಭಾವಿ ವ್ಯಕ್ತಿ ಎಂಬುದು ಎಲ್ಲರಿಗು ಗೊತ್ತು
  • ಎಲ್ಲರಿಗೂ ಶಿಕ್ಷೆ ಆಗುತ್ತೆಂದು ಪೊಲೀಸ್ರು ತೋರಿಸಿಕೊಟ್ಟಿದ್ದಾರೆ
  • ಪ್ರಭಾವಿಗಳು ತಪ್ಪಿಸಿಕೊಳ್ಳಲು ಆಗಲ್ಲವೆಂದು ಈಗ ಗೊತ್ತಾಗಿದೆ

ಬೆಂಗಳೂರ: ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್​ ಅವರನ್ನು ಜೈಲಿಗೆ ಹಾಕಿದ್ದಕ್ಕೆ ಬೆಂಗಳೂರಿನ ಪೊಲೀಸರ ಕುರಿತು ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ದೇಶದಲ್ಲಿ ಯಾವುದೇ ವ್ಯಕ್ತಿ ತಪ್ಪು ಮಾಡಿದ್ರೆ ಶಿಕ್ಷೆಯಾಗುತ್ತೆಂದು ತೋರಿಸಿಕೊಟ್ಟ ಪೊಲೀಸರಿಗೆ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ವಿಶೇಷ ಅಭಿನಂದನೆ ತಿಳಿಸಿದ್ದಾರೆ.

Advertisment

ಇದನ್ನೂ ಓದಿ:ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್​.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?

ಬೆಂಗಳೂರಿನ ಕಸ್ತೂರಿನಗರದಲ್ಲಿ ಆಯೋಜಿಸಿದ್ದ ಪೂರ್ವ ವಿಭಾಗದ ಮಾಸಿಕ ಜನಸಂಪರ್ಕ ಸಭೆಯಲ್ಲಿ ಬೆಂಗಳೂರು ನಗರದ ಕಮಿಷನರ್ ಬಿ.ದಯಾನಂದ್, ಪೂರ್ವ ವಿಭಾಗ ಡಿಸಿಪಿ ದೇವರಾಜ್, ಟ್ರಾಫಿಕ್ ಡಿಸಿಪಿ ಕುಲ​ದೀಪ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಬಾಣಸವಾಡಿಯ ಮುರುಳಿ ಎನ್ನುವ ವ್ಯಕ್ತಿಯೊಬ್ಬರು ಎದ್ದು ನಿಂತು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಶಿರೂರು ಗುಡ್ಡದಲ್ಲಿ ಮನಕಲಕುವ ಘಟನೆ.. ಊಟನೂ ತಿನ್ನದೇ ಮಾಲೀಕಗಾಗಿ ಕಾಯುತ್ತಿವೆ ನಾಯಿಗಳು

Advertisment

[caption id="attachment_77344" align="alignnone" width="800"]publive-image ಬಾಣಸವಾಡಿಯ ಮುರುಳಿ[/caption]

ಕರ್ನಾಟಕದಲ್ಲಿ, ಇಡೀ ದೇಶದಲ್ಲಿ ಯಾವುದೇ ಒಬ್ಬ ದೊಡ್ಡ ವ್ಯಕ್ತಿ, ಪ್ರಭಾವಿ ವ್ಯಕ್ತಿ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತದೆ ಎಂದು ತೋರಿಸಿಕೊಟ್ಟವರು ಕರ್ನಾಟಕದ ಪೊಲೀಸರು. ನಟ ದರ್ಶನ್ ಎಂಥಹ ಪ್ರಭಾವಿ ವ್ಯಕ್ತಿ ಎಂದು ಎಲ್ಲರಿಗೂ ಗೊತ್ತು. ಕಮಿಷನರ್ ಸಾಹೇಬ್ರೆ ನಿಮಗೆ ಹೃತ್ಪೂರ್ವಕ ಅಭಿನಂದನೆ. ಏಕೆಂದರೆ ದುಡ್ಡು ಇರೋರು, ಪ್ರಭಾವಿಗಳು, ಮಿನಿಸ್ಟರ್, ಸಚಿವರು, ಸಿಎಂ ಇರುವವರು ಪ್ರಕರಣದಿಂದ ತಪ್ಪಿಸಿಕೊಳ್ತಾರೆಂದು ಇಷ್ಟು ದಿನ ಜನರು ತಿಳಿದಿದ್ದರು. ಇದನ್ನು ಸುಳ್ಳು ಮಾಡಿದ್ದಕ್ಕೆ ಎಲ್ಲರ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಹೀಗೆ ವ್ಯಕ್ತಿ ಹೇಳುತ್ತಿದ್ದಂತೆ ಜನರೆಲ್ಲ ಚಪ್ಪಾಳೆ ತಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment