newsfirstkannada.com

ಜೈಲೂಟ ತಿನ್ನದೆ ಪರದಾಟ.. ಹೆಂಡತಿ, ಮಗನನ್ನು ನೋಡಿ ಇನ್ನಷ್ಟು ಮಂಕಾದ ದರ್ಶನ್..!

Share :

Published June 25, 2024 at 6:57am

  ಪತ್ನಿ ಹಾಗೂ ಪುತ್ರನನ್ನು ನೋಡಿ ಇನ್ನಷ್ಟು ಮಂಕಾದ ನಟ ದರ್ಶನ್

  ಕಂಬಿ ಹಿಂದೆ ಜೀವನ ಸಾಗಿಸಲಾರದೇ ಚಡಪಡಿಸುತ್ತಿರೋ ಪವಿತ್ರಾ

  ದರ್ಶನ್​ರನ್ನ ಭೇಟಿಯಾಗಿ ಮಾತನಾಡಿದ ವಿನೋದ್ ಪ್ರಭಾಕರ್

ನಟ ದರ್ಶನ್ ಜೈಲು ವಾಸ 4ನೇ ದಿನಕ್ಕೆ ಕಾಲಿಟ್ಟಿದೆ. ಜೈಲು ಊಟ ತಿನ್ನಲು ಆಗದೆ ದಾಸ ಪರದಾಡ್ತಿದ್ದಾರೆ. ಅದರಲ್ಲೂ ನಿನ್ನೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್​ ದರ್ಶನ್​ನ್ನು ಭೇಟಿಯಾಗಿದ್ದರು. ಭೇಟಿ ಬಳಿಕ ದರ್ಶನ್ ಭಾವುಕರಾಗಿದ್ದಾರೆ.​

ಇದನ್ನೂ ಓದಿ: ಹೊಡಿಬಡಿ ಬ್ಯಾಟಿಂಗ್ ಮಾಡ್ತಿರೋ ಕ್ಯಾಪ್ಟನ್ ರೋಹಿತ್.. ಹಾಫ್​ಸೆಂಚುರಿ ಸಿಡಿಸಿದ ಹಿಟ್​ ಮ್ಯಾನ್ 

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರದ ಪಾಲಾಗಿರುವ ನಟ ದರ್ಶನ್​ ಮೂರನೇ ದಿನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಐಷಾರಾಮಿ ಕಾರು, ಬಂಗ್ಲೆ, ಗುಂಡು-ತುಂಡು ಅಂತಿದ್ದ ನಟ ಈಗ ಸಾಮಾನ್ಯ ಕೈದಿಯಂತೆ ಜೈಲು ಊಟ ತಿನ್ನುತ್ತಿದ್ದಾರೆ. ಜೈಲು ಸೇರಿ ಮೂರು ದಿನ ಕಳೆದ್ರೂ ದಾಸನಿಗೆ ಅದ್ಯಾಕೋ ಜೈಲೂಟ ಒಗ್ಗುತ್ತಿಲ್ವಂತೆ. ಆದ್ರೂ ಬೇರೆ ಆಯ್ಕೆ ಇಲ್ಲ.

ಇದನ್ನೂ ಓದಿ: ರೋಹಿತ್ ಬ್ಯಾಟಿಂಗ್​ ಅಬ್ಬರಕ್ಕೆ ಬೆಚ್ಚಿಬಿದ್ದ ಆಸಿಸ್​.. ಸೆಂಚುರಿ ಬಾರಿಸದೇ ನಿರಾಸೆಯಿಂದ ಹೊರನಡೆದ ಹಿಟ್​ಮ್ಯಾನ್

ಜೈಲೂಟ ಒಗ್ಗದೆ ಬಳಲಿ ಬೆಂಡಾಗಿರುವ ದರ್ಶನ್

3ನೇ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಌಂಡ್ ಗ್ಯಾಂಗ್ ಸಾಮಾನ್ಯ ಕೈದಿಗಳಂತೆ ಜೈಲೂಟ ಸವಿದಿದ್ದಾರೆ. ಜೈಲಿನ ಮೆನುವಿನಂತೆಯೇ ಮುದ್ದೆ, ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆ ಸವಿಯುತ್ತಿದ್ದಾರೆ. ಇಷ್ಟು ದಿನ ಮಾಂಸಾಹಾರ ಸೇವಿಸಿ ಒಗ್ಗಿಕೊಂಡ ದೇಹ ಈಗ ಜೈಲೂಟಕ್ಕೆ ಒಗ್ಗಿಕೊಳ್ಳದೆ ದರ್ಶನ್ ಸೇರಿ ಎಲ್ಲ ಆರೋಪಿಗಳು ಬಳಲಿ ಬೆಂಡಾಗ್ತಿದ್ದಾರೆ.

ಪತ್ನಿ ಹಾಗೂ ಮಗನನ್ನು ಕಂಡು ದರ್ಶನ್ ಭಾವುಕ!

ಇನ್ನು ನಟ ದರ್ಶನ್ ಸದ್ಯಕ್ಕೆ ಬೇಲ್ ಪಡೆದು ಹೊರಗೆ ಬರೋದು ಅಷ್ಟು ಸಲೀಸಾಗಿಲ್ಲ. ಯಾಕಂದ್ರೆ ಪೊಲೀಸರು ಕೊಲೆ ಪ್ರಕರಣದಲ್ಲಿ ಜಡಿದ ಕೇಸ್​ಗಳಂತವು. ನಿನ್ನೆ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ ಎಂಬ ಮಾಹಿತಿ ಇತ್ತು. ಆದ್ರೆ ಸದ್ಯಕ್ಕೆ ಬೇಲ್​ಗೆ ಅರ್ಜಿ ಸಲ್ಲಿಸದ ವಕೀಲರು ಕಾದು ನೋಡಲು ಮುಂದಾಗಿದ್ದಾರೆ. ಈ ನಡುವೆ ನಿನ್ನೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಭೇಟಿಯಾಗಿದ್ದಾರೆ. ಪುತ್ರ ವಿನೀಶ್​ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದು ಪತಿಯನ್ನು ಕಂಡಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಭೇಟಿ ಮಾಡಿದ ಬಳಿಕ ದರ್ಶನ್ ಮತ್ತಷ್ಟು ಮಂಕಾಗಿದ್ದಾರೆ. ಯಾರ ಬಳಿಯು ಮಾತನಾಡದೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಏಕಾಂಗಿಯಾದ ಎ1 ಪವಿತ್ರಾ ಗೌಡ!

ಇನ್ನು ಕೊಲೆ ಕೇಸ್​ನ ಎ1 ಪವಿತ್ರಾ ಗೌಡಳದ್ದು ಮತ್ತೊಂದು ಕಥೆ.. ವ್ಯಥೆ.. ಕೊಲೆಗೇ ಸೂತ್ರಧಾರಿಯಾಗಿರೋ ಪವಿತ್ರಾ ಕಂಬಿ ಹಿಂದಿನ ಜೀವನ ಜೀವಿಸಲಾರದೇ ಚಡಪಡಿಸ್ತಿದ್ದಾಳಂತೆ. ಐದು ದಿನವಾದ್ರೂ ಜೈಲಿಗೆ ಪವಿತ್ರಾಗೆ ಹೊಂದಿಕೊಳ್ಳೋಕೆ ಆಗ್ತಿಲ್ವಂತೆ. ಜೈಲಲ್ಲಿ ಕೊಡ್ತಿರೋ ಊಟ ಸೇವಿಸೋಕೆ ಆಗದೇ ಪರದಾಡ್ತಿದ್ದಾಳಂತೆ.

ತುಮಕೂರು ಜಿಲ್ಲಾ ಕಾರಾಗೃಹಕ್ಕೆ ನಾಲ್ವರು ಆರೋಪಿಗಳು ಶಿಫ್ಟ್

ಇನ್ನು ನಾವೇ ಕೊಲೆ ಮಾಡಿದ್ದೇವೆಂದು ಶರಣಾಗಿದ್ದ ಆರೋಪಿಗಳನ್ನು ಇಂದು ಪರಪ್ಪನ ಅಗ್ರಹಾರದಿಂದ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಇಂದು ಸ್ಥಳಾಂತರ ಮಾಡಲಾಗುತ್ತದೆ. ಇಂದು ತುಮಕೂರು ಕಾರಾಗೃಹಕ್ಕೆ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಕರೆತರಲಿದ್ದಾರೆ. ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಹಾಗೂ ರವಿಶಂಕರ್​ ಸೇರಿ ನಾಲ್ವರು ಆರೋಪಿಗಳು ಇಂದು ತುಮಕೂರಿನ ಊರುಕೆರೆ ಬಳಿಯ ಜಿಲ್ಲಾ ಕಾರಾಗೃಹಕ್ಕೆ ರವಾನೆಯಾಗಲಿದ್ದಾರೆ.

ವಿನೋದ್ ಪ್ರಭಾಕರ್ ಬೆನ್ನಲ್ಲೇ ದರ್ಶನ್ ಭೇಟಿಗೆ ಧರ್ಮ ಕೀರ್ತಿರಾಜ್

ಇನ್ನು ನಿನ್ನೆ ನಟ ವಿನೋದ್ ಪ್ರಭಾಕರ್ ದರ್ಶನ್ ಭೇಟಿಯಾದ ಬೆನ್ನಲ್ಲೇ ನಟ ಧರ್ಮ ಕೀರ್ತಿ ರಾಜ್ ಕೂಡ ದರ್ಶನ್ ಕಾಣಲು ತೆರಳಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ದರ್ಶನ್​ನ್ನು ಆರೋಪಿ ಸ್ಥಾನದಲ್ಲಿ ನೋಡಿ, ಬೇಸರ ಆಗ್ತಿದೆ. ನಾನು ಅವ್ರನ್ನು ನೋಡೋಕೆ ಪರಪ್ಪನ ಅಗ್ರಹಾರಕ್ಕೆ ಹೋಗ್ತೀನಿ ಎಂದಿದ್ದಾರೆ.

ಇದನ್ನೂ ಓದಿ: ಜಿಮ್‌ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್​; ಕಾರಣವೇನು?

‘ನೋಡೋಕೆ ಹೋಗ್ಬೇಕು’

ಚಿತ್ರರಂಗಕ್ಕೆ ಬರೋಕೆ ಮುಂಚೆನೇ ನಾನು ಅವರ ದೊಡ್ಡ ಫ್ಯಾನ್​. ಅವರ ಮನೆಯಲ್ಲಿ ಊಟ ಮಾಡಿದ್ದೀನಿ. ವಿಜಯಕ್ಕ ತಮ್ಮ ಕೈಯಿಂದ ನನಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ದಾರೆ. ಇದೆಲ್ಲ ಆಗಬಾರದಿತ್ತು. ಈಗ ನೋಡಿದರೆ ನೋವಾಗುತ್ತೆ. ಎಲ್ಲ ಚೆನ್ನಾಗಿದ್ದರು. ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಕೇಸ್ ಕೋರ್ಟ್​​ನಲ್ಲಿದೆ. ಇದು ಆಗಿರೋದು ಆಕಸ್ಮಿಕವಾಗಿ ಆಗಿರುತ್ತೆ. ರೇಣುಕಾಸ್ವಾಮಿ ಕುಟುಂಬಕ್ಕೆ ಭಗವಂತ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ.

ಧರ್ಮ ಕೀರ್ತಿ ರಾಜ್, ನಟ

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಶಾಕ್ ಕೊಟ್ಟ ಕಿಂಗ್ ಕೊಹ್ಲಿ.. ಮತ್ತೊಮ್ಮೆ ಡಕೌಟ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿರುವ ದರ್ಶನ್ ಌಂಡ್ ಗ್ಯಾಂಗ್ ಮೌನಕ್ಕೆ ಶರಣಾಗಿದ್ದಾರೆ. ಜೈಲೂಟಕ್ಕೆ ಒಗ್ಗಿಕೊಳ್ಳೋಕೆ ಆಗದೇ ಪರದಾಡ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲೂಟ ತಿನ್ನದೆ ಪರದಾಟ.. ಹೆಂಡತಿ, ಮಗನನ್ನು ನೋಡಿ ಇನ್ನಷ್ಟು ಮಂಕಾದ ದರ್ಶನ್..!

https://newsfirstlive.com/wp-content/uploads/2024/06/DARSHAN_WIFE.jpg

Load More